ಆಲಮಟ್ಟಿ: ಅಯೋಧ್ಯೆಯಲ್ಲಿ ರಾಮಮಂದಿರದ ರಾಮದೇವರ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಇದೇ ೨೨, ಸೋಮವಾರ ತಾಲ್ಲೂಕಿನ ಸುಕ್ಷೇತ್ರ ಯಲಗೂರದಲ್ಲಿ ಶ್ರೀ ಯಲಗೂರೇಶನ ಸನ್ನಿಧಾನಲ್ಲಿ ಇಡೀ ದಿನ ನಿರಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಅಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಯಲಗೂರೇಶನಿಗೆ ಅಭಿಷೇಕ, ಮನ್ಯುಸೂಕ್ತ ಪಾರಾಯಣ, ವಾಯಸ್ತುತಿ ಪುನಶ್ಚರಣ, ಲೋಕಕಲ್ಯಾಣಾರ್ಥ ಸುಂದರಕಾAಡ ಪಾರಾಯಣ ಪುಣ್ಯಾವಾಚನ, ರಾಮನಾಮ ಜಪ ನಡೆಯಲಿದೆ.
ನಂತರ ಶ್ರೀ ರಾಮನಾಮ ತಾರಕ ಹೋಮ ಮತ್ತು ಮನ್ಯುಸೂಕ್ತ ಹೋಮ, ಮಹಾಪೂಜೆ, ರಾಮದೇವರ ಮೆರವಣಿಗೆ, ಪ್ರಸಾದ ವಿತರಣೆ ಮತ್ತು ಸಂಜೆ ದೀಪೋತ್ಸವ ರಾಮಸಂಕೀರ್ತನೆ, ಸಂಗೀತ ಕಾರ್ಯಕ್ರಮ ಹಾಗೂ ದೇವಸ್ಥಾನ ಪ್ರಾಂಗಣದಲ್ಲಿ ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನ ಕಮಿಟಿಯ ಅಧ್ಯಕ್ಷ ಅನಂತ ಓಂಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
