ವಿಜಯಪುರ: ಅಖಿಲ ಭಾರತ ವಾಲ್ಮೀಕಿ ಸೇವಾ ಸಂಘದ ವತಿಯಿಂದ ಕೊಲ್ಹಾರ ಜಿಲ್ಲೆಯ ವೆಮಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮೇಡಿಹಾಳ್ ಗ್ರಾಮದ ವಾಲ್ಮೀಕಿ ಸಮಾಜದ ನೀಲಮ್ಮ ಎಂಬ ಮಹಿಳೆಯ ಮೇಲೆ ದೌರ್ಜನ್ಯ ಎಸಗಿ ಚಿತ್ರ ಹಿಂಸೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲು ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಮುಖಾಂತರ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ಕೋಲ್ಹಾರ್ ಜಿಲ್ಲೆಯ ವೇಮಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಡಿಹಾಳ ಗ್ರಾಮದ ವಾಲ್ಮೀಕಿ ಸಮಾಜದ ನೀಲಮ್ಮ ಎಂಬ ದಲಿತ ಮಹಿಳೆಯು ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಎಲೆ ಎತ್ತುವ ಕೆಲಸ ಮಾಡುತ್ತಾ ಬಿಡುವಿನ ವೇಳೆಯಲ್ಲಿ ಮನೆಗೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದೇ ಗ್ರಾಮದ ಸವರ್ಣೀಯ ಸಮುದಾಯದ ಪ್ರಕಾಶ ಮತ್ತು ಮಮತಾ ದಂಪತಿಗಳು ನೀಲಮ್ಮನನ್ನು ಮನೆಗೆಲಸಕ್ಕೆ ಕರೆದಿದ್ದಾರೆ. ಅವಳು ಅನಾರೋಗ್ಯ ಕಾರಣ ಕೆಲಸಕ್ಕೆ ಹೋಗಿಲ್ಲ. ಇದನ್ನೇ ನೆಪ ಮಾಡಿಕೊಂಡು ದಂಪತಿಗಳು ಇಬ್ಬರು ಸೇರಿ ನೀಲಮ್ಮನ ಮನೆಗೆ ನುಗ್ಗಿ ಮನಸೋ ಇಚ್ಛೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿರುವುದು ಅಮಾನವೀಯಯ, ಖಂಡನೀಯ.
ಇಂಥ ಹೇಯಕೃತ್ಯ ಮಾಡಿದ ಆರೋಪಿಗಳನ್ನು ಬಂಧಿಸದೆ ಇರುವುದು ನಾಚಿಗೇಡಿನ ಸಂಗತಿ ಎಂದರು.
ತಕ್ಷಣ ದೌರ್ಜನ್ಯವೆಸಗಿದ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು. ಒಂದು ವೇಳೆ ನ್ಯಾಯ ನೀಡದೆ ಹೋದರೆ ರಾಜ್ಯದಾದ್ಯಂತ ಉಗ್ರವಾದ ಹೋರಾಟವನ್ನು ಕೈಗೊಳ್ಳುತ್ತೇವೆ. ಮುಂದಾಗುವ ಅನಾಹುತಕ್ಕೆ ಸರಕಾರವೇ ಕಾರಣವಾಗುತ್ತದೆ. ದಯವಿಟ್ಟು ಆ ಕುಟುಂಬಕ್ಕೆ ನ್ಯಾಯ ಒದಗಿಸಿ ಪರಿಹಾರ ಕಲ್ಪಿಸಿ ಕೊಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಜಿಲ್ಲಾಧ್ಯಕ್ಷ ಜಗದೇವ ಸೂರ್ಯವಂಶಿ, ಗಿರೀಶ ಕಲಘಟಗಿ, ಜಯಶ್ರೀ, ಪಲ್ಲವಿ ಹೊನಮೊರೆ ಮುಂತಾದರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

