ಕೆಂಭಾವಿ: ಎರಡು ದಿನಗಳ ಕಾಲ “ದಿ ಅಸೋಸಿಯೇಷನ್ ಆಫ್ ಪೀಪಲ್ ವಿಥ್ ಡೀಸೆಬಿಲಿಟಿ “(ಎ ಪಿ ಡಿ ) ಸಂಸ್ಥೆ ಮತ್ತು ಆರೋಗ್ಯ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ” ಪುನಃಚೇತನ ಮೇಳ” ವನ್ನು ಹಮ್ಮಿಕೊಳ್ಳಗಿತ್ತು.
ವಿಕಲಚೇತನ ಮಕ್ಕಳಿಗೆ ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆಯನ್ನು ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಮೇಳದಲ್ಲಿ ಆರೋಗ್ಯ ತಪಾಸಣೆಯನ್ನು ವೈದ್ಯಾಧಿಕಾರಿ ಡಾ.ಗಿರೀಶ ಕುಲಕರ್ಣಿ ಮಾಡಿದರು.
ಕು. ಸ್ವಾತಿಕಾ ಬಿ ಆರ್ ಅವರು ವಿಕಲಚೇತನ ಮಕ್ಕಳಿಗೆ ವ್ಯಾಯಾಮ ಕಲಿಸಿಕೊಟ್ಟರು. ಇದೆ ಸಂದರ್ಭದಲ್ಲಿ ಮಹೇಶ್ ಎಂಬ ಮಗುವಿಗೆ ಎ ಪಿ ಡಿ .ಸಂಸ್ಥೆಯಿಂದ ಗಾಲಿ ಕುರ್ಚಿಯನ್ನು ವಿತರಿಸಲಾಯಿತು.
ಸುರಪುರ ತಾಲೂಕು ಸಂಯೋಜಕ ಸುನಿಲ್ ಹುಲ್ಯಾಳ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮಾಂತೇಶ್ ಕುಂಬಾರ, ಸ್ವಾಗತವನ್ನು ಶ್ರೀಮತಿ ಲಕ್ಷ್ಮೀ ರಾಮಣ್ಣ ಹಾಲರ್, ಸಹಾಯಕರಾದ ಶ್ರೀಮತಿ ಮೀನಾಕ್ಷಿ, ಶ್ರೀ ಬಸವರಾಜ್ ಬೇವಿನಾಳ ವಂದನಾರ್ಪಣೆ ಮಾಡಿದರು.
ಶಿಬಿರದಲ್ಲಿ ಇಂಜೆಕ್ಷನ್,ಮಾತ್ರೆ , ಪೌಷ್ಟಿಕ ಆಹಾರವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಒಟ್ಟು 70 ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು. 41 ಮಕ್ಕಳು ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

