ವಿಜಯಪುರ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಮ್ಮ ಮಡಿಲು ಚಾರಿಟೇಬಲ್ ಸಂಸ್ಥೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ಸಿಂದಗಿ: ಶಿಕ್ಷಣ ಸಂಸ್ಥೆಗಳು ಶಿಕ್ಷಣ ನೀಡುವ ಜೊತೆಗೆ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುತ್ತದೆ ಎಂದು ವಿಜಯಪುರ ಆಕ್ಸ್ಫರ್ಡ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಅಮ್ಮ ಮಡಿಲು ಚಾರಿಟೇಬಲ್ ಸಂಸ್ಥೆಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಪಟ್ಟಣದ ಕಲಬುರಗಿ ರಸ್ತೆಯ ಹೊರವಲಯದಲ್ಲಿರುವ ಲೋಯಲ್ ಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಮಾಜದ ಉತ್ತಮ ಆಸ್ತಿಯನ್ನಾಗಿ ರೂಪಿಸುವುದು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಶಿಕ್ಷಣ ನೌಕರಿಗಾಗಿ ಅಲ್ಲ. ಅದು ಜ್ಞಾನಕ್ಕಾಗಿ. ಶಿಕ್ಷಣ ಕಲಿತು ನಾನು ರೈತ ಎಂದು ಹೇಳಿಕೊಳ್ಳಲು ನಾಚಿಕೊಳ್ಳಬೇಡಿ. ಯಾವುದಾದರೂ ಕೆಲಸ ಆಗಲಿ ಅದನ್ನು ಶ್ರದ್ಧೆಯಿಂದ ಮಾಡಿ ಅದರಲ್ಲಿ ತೃಪ್ತಿಯನ್ನು ಕಾಣಬೇಕು ಎಂದು ಬಬಲೇಶ್ವರ ನುಡಿದರು.
ಈ ವೇಳೆ ವಿಜಯಪುರ ಜೆಸ್ವಿಟ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಫಾದರ್ ಫ್ರಾನ್ಸಿಸ್ ಮೆನೇಜಸ್, ಫಾದರ್ ಮ್ಯಾಕ್ಸಿಮ್, ಫಾದರ್ ರಾಬರ್ಟ್, ಪತ್ರಕರ್ತ ಸಲೀಮ್ ಪಟೇಲ್ ಮರ್ತೂರ್. ಸಿಆರ್.ಪಿ ಎನ್.ಎಸ್. ತಿಳಗೂಳ, ನಾಗೇಶ್ ರೆಡ್ಡಿ, ರಫೀಕ್ ವಡಗೇರಿ, ಸಿದ್ದಪ್ಪ ಎಂ. ಸೇರಿದಂತೆ ಶಾಲೆಯ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.

