ವಿಜಯಪುರ: ರಾಮ ಮಂದಿರ ಉದ್ಘಾಟನೆಯ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಲು, ಜನವರಿ 22 ಸೋಮವಾರದಂದು ಸಿದ್ಧಸಿರಿ ಸೌಹಾರ್ದ ಸಹಕಾರಿಯ 158 ಶಾಖೆಗಳಿಗೆ ರಜೆ ಘೋಷಿಸಿ, ಸಿದ್ಧಸಿರಿ ಸೌಹಾರ್ದದ ಅಧ್ಯಕ್ಷರು, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಆದೇಶ ಹೊರಡಿಸಿದ್ದಾರೆಂದು ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ.
500 ವರ್ಷಗಳ ತಪಸ್ಸು, ಕೊಟ್ಯಂತರ ಹಿಂದೂ ಕಾರ್ಯಕರ್ತರು, ಸ್ವಾಮೀಜಿಗಳು, ಸಾಧು-ಸಂತರ ಕನಸು ನನಸಾಗುತ್ತಿದೆ. ಜ.22 ನಮ್ಮ ದೇಶದ ಭವಿಷ್ಯದ, ಭಾರತದ ಸ್ವಾಭಿಮಾನದ ಸಂಕೇತ, ಹಿಂದುತ್ವದ ಸ್ವಾಭಿಮಾನದ ಸಂಕೇತ, ಮೊಘಲರ ದಬ್ಬಾಳಿಕೆಯ ಗುಲಾಮಗಿರಿ ತೊಲಗಿಸಿದ ಸಂಕೇತದ ದಿನವಾಗಿದೆ. ಈ ದಿನ ಅವಿಸ್ಮರಣೀಯಗೊಳಿಸಲು, ಅಯೋಧ್ಯ ರಾಮ ಮಂದಿರ ಉದ್ಘಾಟನೆಯ ದಿನವಾದ ಜ.22 ರಂದು ನಡೆಯುವ ವಿಜಯೋತ್ಸವ ಸಮಾರಂಭಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ 158 ಸಿದ್ಧಸಿರಿ ಸೌಹಾರ್ದ ಶಾಖೆಗಳ ನೌಕರರಿಗೆ ರಜೆ ನೀಡಲಾಗಿದೆ.
ಈ ರಜೆ ದಿನವನ್ನು ಸದ್ಬಳಕೆ ಮಾಡಿಕೊಂಡು ಪ್ರತಿಯೊಬ್ಬ ಸಿಬ್ಬಂದಿಯೂ ತಮ್ಮ ಗ್ರಾಮ, ಪಟ್ಟಣ, ನಗರಗಳಲ್ಲಿ ಜರುಗುವ ಶ್ರೀರಾಮ ಉತ್ಸವದಲ್ಲಿ ಭಾಗ ವಹಿಸಬೇಕು. ಅಲ್ಲದೆ, ತಮ್ಮ ತಮ್ಮ ಮನೆಗಳ ಮೇಲೆ ಪವಿತ್ರ ಭಗವಾ ಧ್ವಜಗಳನ್ನು ಹಾರಿಸುವದರೊಂದಿಗೆ, ಮನೆಗಳ ಮುಂದೆ ಐದು ದೀಪಗಳನ್ನು ಬೆಳಗಿಸುವ ಮೂಲಕ ಶ್ರೀರಾಮನಿಗೆ ಗೌರವ ಸಲ್ಲಿಸಬೇಕೆಂದು ಎಂದು ಸಿದ್ಧಸಿರಿ ಸೌಹಾರ್ದ ಸಹಕಾರಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಘವ್ ಅಣ್ಣಿಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

