ಜಾನಪದ ಸಮಾವೇಶ ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಅಭಿಮತ
ತಾಳಿಕೋಟಿ: ಎಲ್ಲ ಧರ್ಮ – ಜಾತಿಗಳ ತತ್ವಸಾರ ಜಾನಪದ ಕುಲುಮೆಯಲ್ಲಿಯೇ ಉದಯವಾಗಿವೆ. ಮಾನವೀಯ ಮೌಲ್ಯಗಳಾದ ಪ್ರೀತಿ, ಕರುಣೆ, ಸಮಾನತೆ, ಕಾಯಕ, ದಾಸೋಹದಂತಹ ಸಾರ್ವತ್ರಿಕ ಚಿಂತನೆಗಳು ಜಾನಪದ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ (ಕೂಚಬಾಳ) ಅಭಿಪ್ರಾಯಪಟ್ಟರು.
ತಾಲೂಕಿನ ಮೂಕಿಹಾಳದ ದರ್ಗಾದಲ್ಲಿ ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಮತ್ತು ಹಜರತ್ ಲಾಡ್ಲೆ ಮಶ್ಯಾಕ ದರ್ಗಾ ಕಮೀಟ ಸಹಯೋಗದಲ್ಲಿ ಹಜರತ್ ಲಾಡ್ಲೆ ಮಶ್ಯಾಕ ಉರುಸಿನ ಪ್ರಯುಕ್ತ ಹಮ್ಮಿಕೊಂಡಿದ್ದ ” ಜಿಲ್ಲಾ ಮಟ್ಟದ ಜಾನಪದ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.
ದರ್ಗಾ, ದೇವಾಲಯ, ಮಠ-ಮಂದಿರಗಳು ಭಾವೈಕ್ಯತೆ ಸಾರುತ್ತಾ ಆದರ್ಶ ಮೆರೆಯುತ್ತಿವೆ. ಇಂಥಹ ನೆಲದಲ್ಲಿ ಕಲಾವಿದರು, ಸಾಹಿತಿಗಳು ಮತ್ತು ಸಂಘಟಕರು ಸಮಾವೇಶಗೊಂಡಿರುವುದು ಸಾರ್ಥಕವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಜಯಪುರ ಜಿ ಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಾಳನಗೌಡ ಪಾಟೀಲರು ಜಾನಪದ ಪರಿಷತ್ ಅಧ್ಯಕ್ಷರಾದ ಮೇಲೆ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿ ಜಾನಪದ ಜಾಗೃತಿ ಮೂಡಿಸುತ್ತ ಸಮ್ಮೇಳನ, ಸಮಾವೇಶ, ಉತ್ಸವ ಮಾಡುತ್ತಾ ಜಾನಪದ ಕಲಾವಿದರನ್ನು ಬೆಳೆಸುತ್ತಾ ಜಾನಪದ ಸಾಹಿತ್ಯ ಮತ್ತು ಕಲೆ ಉಳಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ), ಜಿಲ್ಲೆಯಲ್ಲಿ ಕ ಜಾ ಪ ವತಿಯಿಂದ ೨೦೦ ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿ ಜಾನಪದ ಕಲಾವಿದರ ಮಾಶಾಸನ, ವಸ್ತ್ರದಾನ, ಗುರುತಿನ ಪತ್ರ, ಪ್ರಶಸ್ತಿ, ಸನ್ಮಾನ ಮುಂತಾದ ಕೆಲಸ ಮಾಡುತ್ತ ಜಾನಪದ ಸಂಸ್ಕೃತಿ ಉಳಿಸುವ ಕೆಲಸದ ಕುರಿತು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಹಿರೂರ ಜಯಸಿದ್ದೇಶ್ವರ ಸ್ವಾಮಿಗಳು, ವಚನ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಮಹಾಂತೇಶ ಮುರಾಳ, ಶಿಕ್ಷಕರಾದ ಎ ಎಂ ಮೂಲಿಮನಿ, ಮಾತನಾಡಿದರು.
ವೇದಿಕೆಯಲ್ಲಿ ದರ್ಗಾ ಕಮೀಟ ಅಧ್ಯಕ್ಷ ಕೆ ಹೆಚ್ ಪಾಟೀಲ, ಕಜಾಪ ಅಧ್ಯಕ್ಷರುಗಳಾದ ಎ ಆರ್ ಮುಲ್ಲಾ (ಮುದ್ದೇಬಿಹಾಳ) ದೇವೇಂದ್ರ ಗೋನಾಳ ( ಬಸವನಬಾಗೇವಾಡಿ) ಗಿರೀಶ ಕಂಬಾರ (ಆಲಮೇಲ) ಕಜಾಪ ಜಿಲ್ಲಾ ಸಂಚಾಲಕ ಪ್ರೊ ಗುರುರಾಜ ಹಳ್ಳೂರ, ಸದಸ್ಯ ಮೌಲಾಸಾಹೇಬ ಜಹಾಗೀರದಾರ, ಶಿಕ್ಷಕರಾದ ಶ್ರೀಮತಿ ಎಸ್ ಎಚ್ ಪಾಟೀಲ, ನಾಗರಾಜ ನಾಡಗೌಡ, ಹಿರಿಯರಾದ ಬಿ ಎಸ್ ಇಸಾಂಪುರ, ಇದ್ದರು.
ಕಜಾಪ ತಾಲೂಕಾಧ್ಯಕ್ಷ ಸಿದ್ಧನಗೌಡ ಕಾಸಿನಕುಂಟಿ ಸ್ವಾಗತಿಸಿದರು. ಶಿಕ್ಷಕರಾದ ಆರ್ ಎಸ್ ವಾಲಿಕಾರ ನಿರೂಪಿಸಿದರು. ವಿಶ್ವನಾಥ ಮಠ ವಂದಿಸಿದರು.

