ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ಮುಖಂಡರು ಶುಕ್ರವಾರ ಸಂಜೆ ರಾಜ್ಯ ಸರ್ಕಾರ ರಾಜ್ಯದ ಸಾಂಸ್ಕ್ರತಿಕ ನಾಯಕ ಬಸವೇಶ್ವರರೆಂದು ನಿರ್ಣಯ ಮಾಡಿದ್ದನ್ನು ಸ್ವಾಗತಿಸಿ ಸಂಭ್ರಮಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಎಂ.ಜಿ.ಆದಿಗೊಂಡ, ಎಚ್.ಎಸ್.ಬಿರಾದಾರ ಮಾತನಾಡಿ, ಇಡೀ ಜಗತ್ತಿಗೆ ಸಾಂಸ್ಕ್ರತಿಕ, ಸಾಮಾಜಿಕ ಹಾಗೂ ರಾಜಕೀಯ ಚಿಂತನೆಗಳಿಗೆ ಹೊಸ ದಿಕ್ಕನ್ನು ತೋರಿಸಿದ ವಚನ ಚಳವಳಿಯ ನಾಯಕತ್ವವನ್ನು ವಹಿಸಿದ್ದ ಬಸವೇಶ್ವರರನ್ನು ಕರ್ನಾಟಕ ರಾಜ್ಯದ ಸಾಂಸ್ಕ್ರತಿಕ ನಾಯಕರೆಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿರುವುದು ಸಮಸ್ತ ಬಸವಾಭಿಮಾನಿಗಳಿಗೆ ಹರ್ಷ ಉಂಟು ಮಾಡಿದೆ. ಇದರಿಂದಾಗಿ ಬಸವೇಶ್ವರರು ಜನಿಸಿದ ಬಸವನಬಾಗೇವಾಡಿಯ ಗರಿಮೆ ಹೆಚ್ಚಿದಂತಾಗಿದೆ. ಈ ನಿರ್ಣಯ ತೆಗೆದುಕೊಂಡ ರಾಜ್ಯದ ಸಿಎಂ ಸಿದ್ದರಾಮಯ್ಯನವವರು ಸೇರಿದಂತೆ ಸಚಿವರಿಗೆ ಅಭಿನಂದನೆಗಳನ್ನು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರವು ಬಸವೇಶ್ವರರನ್ನು ದೇಶದ ಸಾಂಸ್ಕ್ರತಿಕ ರಾಯಭಾರಿಯನ್ನಾಗಿ ಘೋಷಣೆ ಮಾಡಬೇಕೆಂದು ಆಶಯ ವ್ಯಕ್ತಪಡಿಸಿದರು.
ಸಂಭ್ರಮಾಚರಣೆಯಲ್ಲಿ ಎಸ್.ಆರ್.ಕಲ್ಲೂರ, ಬಸವರಾಜ ಹಾರಿವಾಳ, ಸಿ.ಎಸ್.ಪಾಟೀಲ, ಸುಭಾಸ ಚಿಕ್ಕೊಂಡ, ರವಿ ರಾಠೋಡ ಸಂಕನಗೌಡ ಪಾಟೀಲ, ಶೇಖರ ಗೊಳಸಂಗಿ, ಸುರೇಶ ಹಾರಿವಾಳ, ಸಂಗಮೇಶ ಓಲೇಕಾರ, ಅನಿಲ ಅಗರವಾಲ, ಡಾ.ಪುರಾಣಿಕಮಠ, ಈರಣ್ಣ ವಂದಾಲ, ಗಣೇಶ ಬಿರಾದಾರ, ರಾಜು ಮೋದಿ, ಡಾ.ಎಸ್.ಆರ್.ಮಠ, ವೆಂಕಟೇಶ ಚಿಕ್ಕೊಂಡ, ಉಮೇಶ ಹಾರಿವಾಳ, ಈರಬಸಪ್ಪ ಆದಿಗೊಂಡ, ರಮೇಶ ಯಳಮೇಲಿ, ಸುರೇಶಗೌಡ ಪಾಟೀಲ, ಆರ್.ಜಿ.ಅಳ್ಳಗಿ, ಎಸ್.ಕೆ.ಸೋಮನಕಟ್ಟಿ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

