ಬಸವನಬಾಗೇವಾಡಿ: ಪಟ್ಟಣದ ತಾಲೂಕು ಆಸ್ಪತ್ರೆಗೆ ಕೇಂದ್ರ ಸರ್ಕಾರದ ೨೦೨೨ ನೇ ಸಾಲಿನ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಪ್ರಶಸ್ತಿಯನ್ನು ವಿಜಯಪುರದಲ್ಲಿ ಬುಧವಾರ ಜರುಗಿದ ಆರೋಗ್ಯ ಇಲಾಖೆಯ ಮಾಸಿಕ ಸಭೆಯಲ್ಲಿ ಡಿಎಚ್ಓ ಡಾ.ಬಸವರಾಜ ಹುಬ್ಬಳ್ಳಿ ಅವರು ತಾಲೂಕು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಸಾಬೀರ ಪಟೇಲ ಅವರಿಗೆ ಪ್ರದಾನ ಮಾಡಿ, ಆರೋಗ್ಯ ಇಲಾಖೆಯಿಂದ ಸನ್ಮಾನಿಸಲಾಯಿತು.
ಡಿಎಚ್ಓ ಹುಬ್ಬಳ್ಳಿ ಮಾತನಾಡಿ, ಕೇಂದ್ರ ಸರ್ಕಾರ ಆಸ್ಪತ್ರೆಯ ಆಂತರಿಕ ಮತ್ತು ಬಾಹ್ಯವಾಗಿ ಸ್ವಚ್ಛತೆ, ಜೈವಿಕ ತ್ಯಾಜ್ಯ ಸಂಸ್ಕರಣಾ ಘಟಕ, ಇನ್ಪೆಕ್ಷನ್ ಕಂಟ್ರೋಲ್, ಪರಿಸರ ಸಂರಕ್ಷಣೆ, ಸಮಯ ಪಾಲನೆ ರೋಗಿಗಳ ಆರೈಕೆ, ಸಿಬ್ಬಂದಿಗಳ ಕಾರ್ಯಕ್ಷಮತೆ ಪರಿಗಣಿಸಿ ರಾಜ್ಯಕ್ಕೆ ಎರಡನೇ ಸ್ಥಾನದ ಕಾಯಕಲ್ಪ ಪ್ರಶಸ್ತಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ. ೨೦೨೩ ನೇ ಸಾಲಿನಲ್ಲಿ ರಾಜ್ಯ ಸರ್ಕಾರ ತಾಲೂಕು ಆಸ್ಪತ್ರೆಯನ್ನು ಈ ಮಾನದಂಡಗಳ ಅನ್ವಯ ರಾಜ್ಯಕ್ಕೆ ಪ್ರಥಮ ಸ್ಥಾನದ ಕಾಯಕಲ್ಪ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮುಂಬರುವ ದಿನಗಳಲ್ಲಿ ರಾಜ್ಯ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಆಸ್ಪತ್ರೆಗೆ ಪ್ರದಾನವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ಗೋಲಗೇರಿ, ಡಾ.ಗುಂಡಬಾವಡಿ, ಡಾ.ಎಸ್.ಎಸ್.ಓತಗೇರಿ, ಡಾ.ಜೆ.ಬಿ.ಬೀಳಗಿ, ಕವಿತಾ ದೊಡಮನಿ, ಡಾ.ಶಾಕೀರ ಪಟೇಲ, ಡಾ.ಸಯ್ಯದ ನಬಿ, ಡಾ.ಬಿ.ಎಂ.ಝಳಕಿ, ಡಾ.ಎಂ.ಪಿ.ಸಿಂಹಾಸನ, ಡಾ.ಬಿ.ವೈ.ಮುತ್ತತ್ತಿ, ಎ.ಎಂ.ಕೊಣ್ಣೂರ, ಬಿ.ಎಂ.ನಾಯ್ಕೋಡಿ, ಬಸವರಾಜ ಧನ್ಯಾಳ, ಬಿ.ಸಿ.ಪಟ್ಟಣಶೆಟ್ಟಿ, ಸಂಗಮೇಶ ಮೇಲಿನಮನಿ, ಅಣ್ಣಪ್ಪ ಬಿದ್ನಾಳ, ಚಂದ್ರಶೇಖರ ಹದಿಮೂರ, ಮಹಾದೇವಿ ಬೇವನೂರ, ಶಿವಲೀಲಾ ದೊಡಮನಿ, ಅರ್ಚನಾ ನಾಟೀಕಾರ, ವ್ಹಿ.ಎಲ್.ವಡ್ಡರ, ಶ್ವೇತಾ ಚಿನಿವಾಲರ, ಡಿ.ಬಿ.ಕಾಚೂರ, ಸುಜಾತಾ ಕಿಶೇರಿ, ಸಿದ್ದಲಿಂಗಪ್ಪ ಭಾವಿಕಟ್ಟಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

