ವಿಜಯಪುರ: ಭಾರತ ಆಧ್ಯಾತ್ಮಿಕ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದ್ದು ಸ್ವಾಮಿ ವಿವೇಕಾನಂದರು. ಇಂದಿನ ಯುವ ಜನತೆ ವಿವೇಕಾನಂದರ ಜೀವನ ಅರಿಯುವದರ ಜೊತೆಗೆ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ಬೊಮ್ಮನಹಳ್ಳಿ ಗವಿಮಠ ಗುರುಶಾಂತ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜಿಲ್ಲಾ ತಾಲೂಕು ಹಾಗೂ ನಗರ ಸಯುಕ್ತ ಘಟಕದ ಆಶ್ರಯದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಕುರಿತು ಚಿಂತನಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಸೂತಿ ಜಗದೀಶ್ವರ ಹಿರೇಮಠದ ಪ್ರಭು ಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡುತ್ತಾ, ಸ್ವಾಮಿ ವಿವೇಕಾನಂದರು ಜಗತ್ತಿಗೆ ವಿಕಾಸ ಸಂದೇಶ ಸಾರಿದರು. ಅವರು ಚಿಕ್ಯಾಗೋದಲ್ಲಿ ಮಾಡಿದ ಭಾಷಣ ವಿಶ್ವ ಭ್ರಾತೃತ್ವವನ್ನು ಅವರ ವಿಚಾರ ಶ್ರೇಷ್ಠತೆಯನ್ನು ಸಾರುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಕೂಡ್ಗಿ ಸಹಕಾರ ಸಂಘದ ವ್ಯವಸ್ಥಾಪಕ ಸಂಗಮೇಶ ಬಿಜಾಪುರ ಮಾತನಾಡಿ, ವಿವೇಕಾನಂದರ ಜೀವನ ಸಂದೇಶವನ್ನು ಬಾಳಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಹಸಿದವರ ಅಸಹಾಯಕರ ನಿರ್ಗತಿಕರ ಸೇವೆಯಲ್ಲಿ ದೇವರನ್ನು ಕಾಣಬೇಕು. ಅಮೇರಿಕಾ ದೇಶಕ್ಕೆ ವಿವೇಕಾನಂದರನ್ನು ಮೈಸೂರು ಒಡೆಯರು ಸಹಾಯ ಮಾಡಿದ್ದು ನಾಡಿನ ಹೆಮ್ಮೆ ವಿಷಯ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶೋಭಾ ಹರಿಜನ ಅವರು, ಭಾರತವನ್ನು ಅರಿಯಬೇಕಾದರೆ ವಿವೇಕಾನಂದರವನ್ನು ಓದಿರಿ ಎಂದು ಹೇಳಿದ ಮಹಾತ್ಮ ಗಾಂಧೀಜಿ ಅವರ ನೆನಪಿಸಿಕೊಳ್ಳುತ್ತಾ ವಿವೇಕಾನಂದರ ಜನ್ಮದಿನಾಚರಣೆಯನ್ನು ಯುವ ಸಪ್ತಾಹವಾಗಿ ಆಚರಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸಮಾಜ ಸೇವಕ ಇಮಾಮ್ ಜಾಫರ ಇನಾಮ್ದಾರ, ತಿಕೋಟಾ ಕಸಾಪ ಅಧ್ಯಕ್ಷ ಸಿದ್ದರಾಮಯ್ಯ ಲಕ್ಕುಂಡಿಮಠ, ಪದಾಧಿಕಾರಿಗಳಾದ ಕಮಲ ಮುರಾಳ, ಆಶಾ ಬಿರಾದಾರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

