Author: editor.udayarashmi@gmail.com

ಢವಳಗಿ: ಸಮೀಪದ ಬಸರಕೋಡ ಗ್ರಾಮದ ಶ್ರೀ ಪವಾಡ ಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಭಾಗ್ಯಶ್ರೀ ಬಸವರಾಜ ಹಡಪದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 625ಕ್ಕೆ 521 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ್ದಿದ್ದಾಳೆ.ವಿದ್ಯಾರ್ಥಿನಿಯ ಸಾಧನೆಗೆ ಶಾಲೆಯ ಶಿಕ್ಷಕರು ಸೇರಿದಂತೆ ತಂದೆ-ತಾಯಿ ಹರ್ಷ ವ್ಯಕ್ತಪಡಿಸಿದರು.

Read More

ಸಿಂದಗಿ: ಪಟ್ಟಣದ ಬಂದಾಳ ರಸ್ತೆಯಲ್ಲಿರುವ ಶ್ರೀ ಸಂಗಮೇಶ್ವರ ವಿದ್ಯಾಲಯದ ಮಲ್ಲಿಕಾರ್ಜುನ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಪೂಜಾ ಹಳೆಮನಿ ೫೬೮ (ಶೇ.೯೦.೮೮) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಪೂಜಾ ಗುತ್ತರಗಿ ೫೪೮ (ಶೇ.೮೭.೬೮) ದ್ವಿತೀಯ ಸ್ಥಾನ, ಬೋರಮ್ಮ ಹೊಸಮನಿ ೫೩೩ (ಶೇ.೮೫.೨೫) ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶಾಲೆಯ ಫಲಿತಾಂಶ ೧೦೦ಕ್ಕೆ ೯೪% ರಷ್ಟಾಗಿದೆ.ವಿದ್ಯಾರ್ಥಿಗಳ ಈ ಸಾಧನೆಗೆ ಅಧ್ಯಕ್ಷೆ ಸಾವಿತ್ರಿ ಅರಳಗುಂಡಗಿ, ಪ್ರಧಾನ ಕಾರ್ಯದರ್ಶಿ ಮಹಾನಂದ ಪರಗೊಂಡ, ಆಡಳಿತ ಮಂಡಳಿ ಹಾಗೂ ಶಾಲೆಯ ಮುಖ್ಯಗುರುಗಳು ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ ಶುಭಕೋರಿದ್ದಾರೆ.

Read More

ಸಿಂದಗಿ: ತಾಲೂಕಿನ ೩೩/೧೧ಕೆವಿ ವಿದ್ಯುತ್ ವಿತರಣಾ ಕೇಂದ್ರ ಗೋಲಗೇರಿಯಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸದರಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲ ಗ್ರಾಮಗಳಿಗೆ ಮೇ.೧೨ರಂದು ಬೆಳಿಗ್ಗೆ ೦೯ಗಂಟೆಯಿಂದ ಸಾಯಂಕಾಲ ೦೪ರವರೆಗೆ ವಿದ್ಯುತ್ ಪೂರೈಕೆ ಇರುವುದಿಲ್ಲ. ಆದ್ದರಿಂದ ಸದರಿ ಗ್ರಾಮಗಳ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಂದಗಿ ಹೆಸ್ಕಾಂ ಉಪವಿಭಾಗದ ಸಹಾಯಕ ನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಮೇ.೧೦ರಂದು ಬೆಳಿಗ್ಗೆ ೧೦ಗಂಟೆಗೆ ಬಸವ ಜಯಂತಿ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಹಾಗೂ ಮೇ.೧೨ರಂದು ಬೆಳಿಗ್ಗೆ ೧೦ಗಂಟೆಗೆ ಶಂಕರಾಚಾರ್ಯರ ಜಯಂತಿಯನ್ನು ಲೋಕಸಭಾ ಚುನಾವಣಾ ನೀತಿ ಸಂಹಿತೆಯ ನಿಯಮಗಳನ್ನು ಅನುಸರಿಸುತ್ತಾ ಸರಳವಾಗಿ ಕಾರ್ಯಾಲಯದ ಸಭಾ ಭವನದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಕಾರ್ಯಕ್ರಮಗಳನ್ನು ನೇರವೇರಿಸಲಾಗುವುದು. ಕಾರಣ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾರ್ವಜನಿಕರು, ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ವರ್ಗ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.

Read More

ಸಿಂದಗಿ: ಪಟ್ಟಣದ ಹೊರವಲಯದ ರಾಂಪೂರ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಆಂಗ್ಲ ಮಾದ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ೧೦೪ ವಿದ್ಯಾರ್ಥಿಗಳು ನೋಂದಣಿಯಾಗಿದ್ದು, ೬೭ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, ೨೯ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ೦೮ ವಿದ್ಯಾರ್ಥಿಗಳು ದ್ವಿತಿಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದು ಶಾಲೆಯ ಫಲಿತಾಂಶವು ೧೦೦ಕ್ಕೆ೧೦೦ ರಷ್ಟಾಗಿದೆ.ಸ್ನೇಹಾ ಬಂದೆ, ಸೃಷ್ಟಿ ರೊಟ್ಟಿ, ೬೧೧ (ಶೇ.೯೭.೭೬) ಅಂಕಗಳನ್ನು ಪಡೆದುಕೊಂಡು ಶಾಲೆಗೆ ಪ್ರಥಮ ಸ್ಥಾನ, ಅನಮ ಬಳಗಾನೂರ ೬೦೨ (ಶೇ.೯೬.೩೨) ದ್ವಿತಿಯ ಸ್ಥಾನ, ಅನ್ನಪೂರ್ಣ ಪಾಟೀಲ ೬೦೦ (ಶೇ.೯೬) ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ, ನಿರ್ದೇಶಕ ಪಿ.ಡಿ. ಕುಲಕರ್ಣಿ ಹಾಗೂ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯೆ ಎಸ್.ಆಯ್.ಅಸ್ಕಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ಪಾಲಕರು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಮುದ್ದೇಬಿಹಾಳ: ತಾಲೂಕಿನ ನಾಗರಬೆಟ್ಟ ಗ್ರಾಮದ ಎಸ್‌ಡಿಕೆ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಅಭಿಲಾಷಾ ವಾಲಿಕಾರ ೬೧೪ (ಶೇ.೯೮.೨೪) ಅಂಕಗಳಿಸಿ ಶಾಲೆಗೆ ಪ್ರಥಮ, ಸಂತೋಷ ಹಂಗರಗಿ ೬೧೨ (ಶೇ.೯೭.೯೨) ಅಂಕಗಳಿಸಿ ಶಾಲೆಗೆ ದ್ವಿತೀಯ, ಮತ್ತು ವಿರೇಶ ಛಟ್ಟಿ ಹಾಗೂ ಅಶ್ವಿನಿ ರುದ್ರಗಂಟಿ ತಲಾ ೬೧೧ (ಶೇ.೯೭.೭೬) ಅಂಕಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಬಿ.ಜಿ.ಮಠ ಸೇರಿದಂತೆ ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಮುದ್ದೇಬಿಹಾಳ: ಪಟ್ಟಣದ ಶಾರದಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಮೇಘಾ ಕ್ಯಾದಗಿ ೫೯೯(ಶೇ೯೫.೮೪) ಅಂಗಗಳನ್ನು ಪಡೆದು ಶಾಲೆಗೆ ಪ್ರಥಮ, ಸಾಧಿಕಾ ನಾಯ್ಕೋಡಿ ೫೯೩(ಶೇ೯೪.೮೮) ಅಂಕಗಳನ್ನು ಪಡೆದು ದ್ವಿತೀಯ, ಲಕ್ಷ್ಮಿ ಕಾಜಗಾರ ೫೪೯(ಶೇ೮೭.೮೪) ಅಂಕಗಳನ್ನು ತೃತೀಯ ಸ್ಥಾನದಲ್ಲಿ ಮತ್ತು ಆಂಗ್ಲ ಮಾಧ್ಯಮದಲ್ಲಿ ಆಶಿಯಾ ಕೇಸಾಪೂರ ೫೯೪(ಶೇ೯೫.೦೪) ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ, ಮಿಶ್ರಿತಬೇಗಂ ಬಾಗವಾನ ೬೮೭(ಶೇ೯೩.೯೨) ಅಂಕಗಳನ್ನು ಪಡೆದು ದ್ವಿತೀಯ, ಕನಕಾ ಮುರಾಳ ೫೬೪(ಶೇ೯೦.೨೪) ಅಂಕಗಳನ್ನು ಪಡೆದು ತೃತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ವಿಧ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಪದಾಧಿಕಾರಿಗಳು, ಮುಖ್ಯಗುರುಗಳು ಹಾಗೂ ಬೋಧಕ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Read More

ಕಲಕೇರಿ: ಗ್ರಾಮದ ಆದರ್ಶ ಆಂಗ್ಲ ಮತ್ತು ಕನ್ನಡ ಮಾಧ್ಯಮ ಪ್ರೌಡಶಾಲೆಯ ವಿಧ್ಯಾರ್ಥಿಗಳು ೨೦೨೩-೨೪ ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಶಾಲೆಯ ಒಟ್ಟು ಫಲಿತಾಂಶ ಶೇ.೧೦೦ ರಷ್ಟು ಬರುವ ಮೂಲಕ ಸಿಂದಗಿ ತಾಲೂಕಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ. ಪರಿಕ್ಷೇಗೆ ಹಾಜರಾದ ೧೧೪ ವಿಧ್ಯಾರ್ಥಿಗಳಲ್ಲಿ ೩೬ ಮಕ್ಕಳು ಉನ್ನತ ಶ್ರೇಣಿಯಲ್ಲಿ, ೭೧ ವಿಧ್ಯಾರ್ಥಿಗಳು ಪ್ರಥಮ ಶ್ರೇಣಿ, ೦೭ ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಕುಮಾರ ಎಮ್.ಡಿ.ಯಾಸಿನ ಹೊನ್ನಳ್ಳಿ-೬೧೨ – ೯೮% ಪಡೆದು ಪ್ರಥಮ ಸ್ಥಾನ, ಸುಮಯ್ಯಾ ನಾಯ್ಕೋಡಿ -೬೦೨ – ೯೬.೩%ದ್ವಿತೀಯ ಸ್ಥಾನ, ಆಕಾಶ ಚಳ್ಳಗಿ – ೬೦೧ – ೯೬.೦೨% ತೃತೀಯ ಸ್ಥಾನ, ತಮನ್ನಾ ಜಾಗಿರದಾರ– ೫೯೭ – ೯೫.೦೫% ನಾಲ್ಕನೆ ಸ್ಥಾನ ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದು, ಒಟ್ಟು ೧೬ ವಿದ್ಯಾರ್ಥಿಗಳು ಶೇಕಡಾ ೯೦ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಮಕ್ಕಳ ಸಾಧನೆಗೆ ಮುಖ್ಯಗುರುಗಳು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.

Read More

ಕಲಕೇರಿ: ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತವಾಗಿ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಮೇ.೧೦ ರಂದು ಶುಕ್ರವಾರ ವಿವಿದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೋಳ್ಳಲಾಗಿದೆ.ಶುಕ್ರವಾರ ಬೆಳಿಗ್ಗೆ ೯ ಘಂಟೆಗೆ ಪಟ್ಟಾಧಿಕಾರ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ ೧೨ ಘಂಟೆಗೆ ವಾಲಗದ ಕಾರ್ಯಕ್ರಮ ನಡೆಯಲಿದೆ. ಸಂಜೆ ೫ ಘಂಟೆಗೆ ಜಾತ್ರಾಮಹೋತ್ಸವದ ಪ್ರಯುಕ್ತವಾಗಿ ಧರ್ಮಸಭೆ ಕಾರ್ಯಕ್ರಮ ನಡೆಯಲಿದ್ದು, ಧರ್ಮಸಭೆಯ ದಿವ್ಯಸಾನಿಧ್ಯವನ್ನು ಸರೂರ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು, ಸಾನಿಧ್ಯವನ್ನು ಹುಲಜಂತಿಯ ಮಾಳಿಂಗರಾಯ ದೇವರು, ಕಲಕೇರಿಯ ಗದ್ದಗಿಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು, ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ಚಟ್ಟರಕಿಯ ಕೆಂಚಪ್ಪಮುತ್ಯಾ ಪೂಜಾರಿ, ಸರೂರ ಮೂಲ ಗುರುಪೀಠದ ಸನಯ್ಯಮುತ್ಯಾ ಹಾಲಮತ ಇವರು ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲೋಡಗಿ ವಹಿಸಲಿದ್ದು, ಉದ್ಘಾಟಕರಾಗಿ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಶರಣಪ್ಪ ಸುಣಗಾರ ಭಾಗಿಯಾಗುವರು, ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ ಜ್ಯೋತಿಯನ್ನು ಬೆಳಗಿಸುವರು, ಡಾ. ವೀರೇಶ ತಳ್ಳೊಳ್ಳಿ ಪುಷ್ಪಾರ್ಚನೆ ಮಾಡುವರು. ಎಂ.ಜಿ.ಎಂ.ಕೆ ಪಿಯು ಕಾಲೇಜಿನ ಪ್ರಾಚಾರ್ಯ…

Read More

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ. ಒಟ್ಟು ೭೦ ವಿದ್ಯಾರ್ಥಿಗಳಲ್ಲಿ ೩೪ ವಿದ್ಯಾರ್ಥಿಗಳು ( ೧೫ ಗಂಡು ೧೯ ಹೆಣ್ಣು) ಡಿಸ್ಟಿಂಕ್ಶನ್, ೨೯ ವಿದ್ಯಾರ್ಥಿಗಳು ( ೧೬ ಗಂಡು ೧೩ ಹೆಣ್ಣು), ಪ್ರಥಮ ಸ್ಥಾನ, ೩ ವಿದ್ಯಾರ್ಥಿಗಳು ( ೩ ಗಂಡು) ದ್ವಿತೀಯ ಸ್ಥಾನ, ಒಬ್ಬ ವಿದ್ಯಾರ್ಥಿ ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿರುವ ಮೂಲಕ ಶಾಲೆಗೆ ಶೇ೯೮ ಫಲಿತಾಂಶ ಬಂದಿದ್ದು, ಶಾಲಾ ಬೋಧಕ ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.

Read More