Author: editor.udayarashmi@gmail.com

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ೨೦೨೪-೨೫ ನೇ ಸಾಲಿನ ೯ನೇ ತರಗತಿಯ ೧೫ ವಿದ್ಯಾರ್ಥಿಗಳನ್ನು ಉಚಿತವಾಗಿ ಪ್ರವೇಶ ಪಡೆದುಕೊಳ್ಳಲು ಸಂಸ್ಥೆ ನಿರ್ಧರಿಸಿದೆ ಎಂದು ಅಧ್ಯಕ್ಷ ಎಂ.ಎಸ್.ಕೊಪ್ಪ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮತನಾಡಿದ ಅವರು ಪರಮ ಪೂಜ್ಯ ಚನ್ನಬಸವ ಮಹಾಸ್ವಾಮಿಗಳ ಮಹಾದೇಶದಂತೆ ಈ ನಿರ್ಧಾರ ಕೈಗೊಂಡಿದ್ದು, ವಿದ್ಯಾರ್ಥಿಗಳು ಉಚಿತ ಪ್ರವೇಶ ಪಡೆಯಲು ಮೇ೨೫ ರಂದು ಪರೀಕ್ಷೆಯೊಂದನ್ನ ಆಯೋಜಿಸಲಾಗಿದೆ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ ೧೫ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ಪಡೆಯುವದಾಗಿ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು – ೯೬೧೧೦೭೫೧೭೩, ೮೦೮೮೪೩೫೨೮೨

Read More

ವಿಜಯಪುರ: ಶಾಸಕರ ಮೂಲಕ ನೇಮಕವಾಗುವ ವಿಧಾನ ಪರಿಷತ್ ಸದಸ್ಯರ 11 ಸ್ಥಾನಗಳಿಗೆ ಚುನಾವಣಾ ಆಯೋಗ ಜೂ.13 ರಂದು ಚುನಾವಣೆ ಘೋಷಿಸಿದ್ದು, ಬಿಜೆಪಿಯಿಂದ ಹಿರಿಯ ಮಾಜಿ ಸಚಿವ, ರಾಜ್ಯ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾದ ಎಸ್.ಕೆ. ಬೆಳ್ಳುಬ್ಬಿ ಅವರಿಗೆ ಬಿಜೆಪಿ ಟಿಕೇಟ್ ನೀಡಬೇಕೆಂದು ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥ ಮಹಾಸ್ವಾಮೀಜಿ ಬಿಜೆಪಿ ಪಕ್ಷದ ವರಿಷ್ಠರಿಗೆ ಒತ್ತಾಯಿಸಿದರು.ವಿಜಯಪುರದಲ್ಲಿ ಮಂಗಳವಾರ ಗಾಣಿಗ ಸಮುದಾಯದ ಜಿಲ್ಲಾ ನಾಯಕರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಕಲ್ಲಿನಾಥ ಸ್ವಾಮೀಜಿ ಮಾತನಾಡಿದರು. ರಾಜ್ಯದಲ್ಲಿ ಸುಮಾರು 80 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ಗಾಣಿಗ ಸಮಾಜವು ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯಗಳು ಹಾಗೂ ನಾಯಕತ್ವ ಗುಣಗಳನ್ನು ಮೆಚ್ಚಿಕೊಂಡು ಹಲವಾರು ದಶಕಗಳಿಂದ ಗಾಣಿಗ ಸಮಾಜ ಬಿಜೆಪಿ ಬೆಂಬಲಿಸಿಕೊಂಡು ಬಂದಿದೆ.ರಾಜ್ಯದಲ್ಲಿ ಗಾಣಿಗ ಸಮುದಾಯದ ಪ್ರಭಾವಿ ನಾಯಕರಾಗಿರುವ ಹಿರಿಯ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿಯವರು ಸಂತ್ರಸ್ತರು, ರೈತರ ಪರ ಹೋರಾಟಗಳ ಮೂಲಕವೇ ಮಂಡಲ ಪಂಚಾಯಿತಿಯಿಂದ ಸಚಿವ…

Read More

ವಿಜಯಪುರ: ಹುಬ್ಬಳ್ಳಿ ನಗರದಲ್ಲಿ ಇತ್ತೀಚಿಗೆ ಕೊಲೆಯಾದ ಕು.ಅಂಜಲಿ ಅಂಬಿಗೇರ ಅವರ ಮನೆಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಮಂಗಳವಾರ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಆತ್ಮಸ್ಥೈರ್ಯ ತುಂಬಿದರು.

Read More

ವಿಜಯಪುರ: ಕುಸ್ತಿ ಪಂದ್ಯಾವಳಿ ವಿಶ್ವದ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹಾಗೂ ಜನಪ್ರಿಯತೆ ಹೊಂದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಹಿಟ್ನಳ್ಳಿ ಗ್ರಾಮದ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯು ಉದ್ಘಾಟಿಸಿ ಮಾತನಾಡುತ್ತಾ, ಒಲಂಪಿಕ್ಸ್ ದಲ್ಲಿ ಕುಸ್ತಿ ಪ್ರತಿಷ್ಠಿತ ಕ್ರೀಡೆಯಾಗಿದೆ ಮೊದಮೊದಲು ಇದನ್ನು ಮಲ್ಲಯುದ್ಧವೆಂದು ಕರೆಯಲಾಗುತ್ತಿತ್ತು. ಇಂದು ಭಾರತಿಯ ಕ್ರೀಡಾ ಪ್ರಾಧಿಕಾರ ಇಂತಹ ಅಪ್ರತಿಮ ಕುಸ್ತಿಪಟುಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದೆ. ಕುಸ್ತಿಪಟುಗಳ ಸಂಖ್ಯೆ ಕುಸಿಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹಾಸಿಂಪೀರ್ ವಾಲಿಕಾರ್ ಅಧ್ಯಕ್ಷ ವಹಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್ಪ್ರಸಿದ್ಧವಾಗಿವೆ. ಮಹಿಳಾ ಕುಸ್ತಿಪಟುಗಳು ಸಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆಗೆ ಅವಕಾಶ ಹಾಗೂ ಪ್ರೋತ್ಸಾಹ ಅಗತ್ಯ ಎಂದರು.ಸಂಘಟಕರಾದ ಶ್ರೀಕಾಂತ್ ಚೌದರಿ, ಸಿದ್ದು ಪವಾರ, ಜಗನಾಥ ಚೌದ್ರಿ, ಚಂದ್ರಶೇಖರ್ ಮಲಗಾಣ, ಅಶೋಕ್ ಬಗಲಿ, ರಾಜೇಂದ್ರ ಬಿರಾದಾರ್ ಅತಿಥಿಗಳನ್ನು ಗೌರವಿಸಿದರು.ಕಾರ್ಯಕ್ರಮದಲ್ಲಿ ಬಸವನಗೌಡ…

Read More

ಶಿಕ್ಷಣ ಇಲಾಖೆ ಆದೇಶ | ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಈ ನಿರ್ಣಯ ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳ 5, 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳನ್ನು ಮುಂದಿನ ಶೈಕ್ಷಣಿಕ ತರಗತಿಯಲ್ಲಿ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ.ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ ಕಾವೇರಿ ಆದೇಶ ಹೊರಡಿಸಿದ್ದು, “ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಶಾಲೆಗಳಲ್ಲಿ ನಡೆದಿರುವ ಪರೀಕ್ಷೆಗಳ ಮೌಲ್ಯಾಂಕನ ಆಧರಿಸಿ ಮುಂದಿನ ತರಗತಿಗೆ ದಾಖಲಾತಿ ಮಾಡಿಕೊಳ್ಳಲು ಅನುಕೂಲ ಮಾಡಿಕೊಡುವಂತೆ” ಸೂಚಿಸಿದ್ದಾರೆ.2023–24ನೇ ಸಾಲಿನ ಫಲಿತಾಂಶವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಏಪ್ರಿಲ್‌ 8ರಂದು ಪ್ರಕಟಿಸುವಂತೆ ಈ ಹಿಂದೆ ಆದೇಶಿಸಲಾಗಿತ್ತು. ಆದರೆ, ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಇನ್ನೂ ಫಲಿತಾಂಶ ಪ್ರಕಟಗೊಂಡಿಲ್ಲ.ಪ್ರಸ್ತುತ 2023-24ನೇ ಸಾಲಿನ ಶೈಕ್ಷಣಿಕ ವರ್ಷ ಅಂತ್ಯಗೊಳ್ಳುತ್ತಿದ್ದು, ಇದೇ ಮೇ 29 ರಿಂದ 2024- 25ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಲಿದೆ. 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ 5, 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ…

Read More

ವಿಜಯಪುರ: ಮಕ್ಕಳಲ್ಲಿ ಕಂಡು ಬರುವ ಚಂಚಲತೆ ಮತ್ತು ಅತೀ ಚಟುವಟಿಕೆಯ(ADHD) ಕಾಯಿಲೆಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ಮೇ 27 ರಿಂದ ಜೂನ್ 1 ರ ವರೆಗೆ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ತಿಳಿಸಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಕಾಲೇಜಿನ ಕೌಮಾರಭೃತ್ಯ ವಿಭಾಗದ ವತಿಯಿಂದ ಈ ಶಿಬಿರ ಆಯೋಜಿಸಲಾಗಿದೆ.ಮಕ್ಕಳು ಒಂದೇ ಜಾಗದಲ್ಲಿ ಕುಳಿತುಕೊಳ್ಳದಿರುವುದು, ಹೋಂ ವರ್ಕ್ ಅಥವಾ ಶಾಲೆಯ ಚಟುವಟೆಕೆಗಳು ಸೇರಿದಂತೆ ದಿನನಿತ್ಯದ ಕೆಲಸಗಳನ್ನು ಮಾಡಲು ಹಿಂಜರಿಯುವುದು, ದೈನಂದಿನ ಚಟುವಟಿಕೆಗಳಲ್ಲಿ ಬಲು ಬೇಗನೆ ಬೇಸರಗೊಳ್ಳುವುದು ಅಟೇನ್ಷನ್ ಡೆಫಿಸಿಟ್ ಹೈಪರ್‌ಆಕ್ಟಿವಿಟಿ ಡಿಸರ‍್ಡರ್(ADHD) ಕಾಯಿಲೆಯ ಪ್ರಮುಖ ಲಕ್ಷಣಗಳಾಗಿವೆ. ಇಂಥ ಸಮಸ್ಯೆಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಈ ಶಿಬಿರದಲ್ಲಿ ಉಚಿತ ತಪಾಸಣೆ ಮತ್ತು ಔಷಧಿ ವಿತರಣೆ ನಡೆಯಲಿದೆ. ಪಾಲಕರು ಇದರ ಸದುಪಯೋಗ ಪಡದುಕೊಳ್ಳಬೇಕು ಎಂದು ಡಾ. ಸಂಜಯ ಕಡ್ಲಿಮಟ್ಟಿ ಅವರು ತಿಳಿಸಿದ್ದಾರೆ.ಆಸಕ್ತರು ಮೊ. ಸಂ. 8197378138ಗೆ ಸಂಪರ್ಕಿಸಲು ಕೋರಲಾಗಿದೆ.

Read More

ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಬಡ ಕುಟುಂಬಗಳ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ಹಾಗೂ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ ದೇವೂರ, ದೇವೂರ ಎಲ್.ಟಿ ೧ ಮತ್ತು ೨ ರ ಮಹಿಳೆಯರು ಗ್ರಾಮ ಹಾಗೂ ತಾಂಡಾಗಳಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ಪಾಟೀಲ ಮಾತನಾಡಿ, ದೇವೂರ ಗ್ರಾಮ ಮತ್ತು ತಾಂಡಾಗಳಲ್ಲಿ ಅಕ್ರಮವಾಗಿ ಸಾರಾಯಿ ತಯಾರಿಸಿ ಸಿದ್ಧಾರೂಢ ಬೋರಗಿ, ಅನಸೂಬಾಯಿ ಮಾದೇವಪ್ಪ ಸುಂಬಡ ಮಾಲೀಕತ್ವದ ಕಿರಾಣಿ ಅಂಗಡಿ, ಅಪ್ಪಾಸಾಹೇಬಗೌಡ ಪಾನ್ ಶಾಪ್, ಬಾಸು ರಾಠೋಡ, ಶಂಕರ ರಾಠೋಡ ಸಂತೋಷ ರಾಠೋಡರ ದಾಬಾಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೀಸಿದರೆ ನೀವಾರು ಕೇಳುವವರು ಎಂದು ನಮಗೆ ದಬಾಯಿಸುತ್ತಾರೆ. ಅಕ್ರಮ ಮದ್ಯ ಮರಾಟದ…

Read More

ಇಂಡಿ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ನಡೆದಿದೆ.ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಈಜಲು ಹೋಗಿದಾಗ ಈಜಲು ಬಾರದೇ ಅಮಿತ ರಾಠೋಡ(12), ಸುದೀಪ ಜಾಧವ್ (13) ಮೃತಪಟ್ಟಿರುವ ದುರ್ದೈವಿಗಳು. ಸ್ಥಳಕ್ಕೆ ಇಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಂಡಿ ಶಹರ್ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಆಸ್ಕಿ, ಬೆಕಿನಾಳ, ಬೂದಿಹಾಳ(ಪಿ.ಟಿ) ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹ ಕಲಕೇರಿ: ಸಮೀಪದ ಆಸ್ಕಿ ಕೆರೆಯಲ್ಲಿ ನೂರಾರು ರೈತರು ಆಸ್ಕಿ, ಬೆಕಿನಾಳ, ಹಾಗೂ ಬೂದಿಹಾಳ ಪಿ.ಟಿ ಕೆರೆ ನೀರು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಬೆಳಗಿನಿಂದ ಅನಿರ್ದಿಷ್ಠ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.ಗ್ರಾಮದ ಮುಖ್ಯ ಬಜಾರದಿಂದ ಹಲಗಿ ಸದ್ದಿನೊಂದಿಗೆ ರೈತರು ವಿವಿಧ ಘೋಷಣೆಗಳನ್ನು ಕೂಗುತ್ತಾ ಕೆರೆಯಡೆಗೆ ಹೆಜ್ಜೆ ಹಾಕುತ್ತಾ ಕೆರೆಗೆ ನೀರು ಹರೆಸುವವರೆಗೆ ಧರಣಿ ಮುಂದುವರೆಯುವುದು ಎಂಬುದು ಧರಣಿ ನಿರತರ ಬೇಡಿಕೆಯಾಗಿತ್ತು,ಆಸ್ಕಿ ಗ್ರಾಮದ ರೈತ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಅವರು ಮಾತನಾಡುತ್ತಾ, ಈ ವರ್ಷದ ಭೀಕರ ಬರಗಾಲದ ನಿಮಿತ್ಯವಾಗಿ ಭಾಗದಲ್ಲಿ ಎಲ್ಲ ಹಳ್ಳ, ಕೆರೆಗಳು ಬತ್ತಿಹೋಗಿ ಬಾವಿ ಹಾಗೂ ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾಗಿ ಕೃಷಿಗೆ ನೀರಿಲ್ಲದೇ, ಜನ ಜಾನುವಾರುಗಳಿಗೆ ಕುಡಿಯಲು ಹನಿ ನೀರು ಇಲ್ಲದೇ ಹರಸಾಹಸ ಪಡುವಂತಾಗಿದೆ ಎಂದರುರೈತ ಸಂಘದ ತಾ. ಉಪಾಧ್ಯಕ್ಷ ಗೌಡಪ್ಪಗೌಡ ಹಳಿಮನಿ ಮಾತನಾಡುತ್ತಾ ಈ ವರ್ಷದಲ್ಲಿ ಅಡವಿಯಲ್ಲಿ ಮಾನವರಿಗೆ ಮತ್ತು ನಮ್ಮ…

Read More

ಬಿಜೆಪಿ ನಗರ ಮಂಡಲ ರೈತ ಮೋರ್ಚಾ ವತಿಯಿಂದ ಬ್ರಹತ್ ಪ್ರತಿಭಟನೆ ವಿಜಯಪುರ: ಕರ್ನಾಟಕ ರಾಜ್ಯ ಸರ್ಕಾರದಿಂದ ರಚನೆ ಆಗಿರುವ ರೈತ ಉತ್ಪಾದಕರ ಸಂಸ್ಥೆಗಳ ಬಾಕಿ ಹಣ ಬಿಡುಗಡೆಗೊಳಿಸಲು ಆಗ್ರಹಿಸಿ ಭಾರತೀಯ ಜನತಾ ಪಾರ್ಟಿ, ನಗರ ಮಂಡಲ ರೈತ ಮೋರ್ಚಾ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿರುವ ಕಾಂಗ್ರೆಸ್ ಸರ್ಕಾರದ ಸಾಧನೆ ಮಾತ್ರ ಶೂನ್ಯ. ಗ್ಯಾರಂಟಿ ಗುಂಗಿನಲ್ಲಿರುವ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು ಅಭಿವೃದ್ಧಿ ಸಂಪೂರ್ಣ ಮರೆತಿದ್ದಾರೆ. ತಮ್ಮದೆ ಪಕ್ಷದ ಶಾಸಕರು ಕೂಡ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಅದೇ ಅವರ ಕಳಪೆ ಆಡಳಿತ ತೋರಿಸುತ್ತದೆ.ಅಭಿವೃದ್ಧಿ ಕಾಮಗಾರಿಗೆ ಹಣ ನೀಡದ ಸರ್ಕಾರ, ರೈತರ ಏಳಿಗಾಗಿ ರಚನೆಗೊಂಡಿರುವ ರೈತ ಉತ್ಪಾದಕರ ಸಂಸ್ಥೆಗಳಿಗೆ ನೀಡಬೇಕಾದ ಹಣ ಬಾಕಿ ಉಳಿಸಿಕೊಳ್ಳುವ ಮೂಲಕ ಅನ್ನದಾತರಿಗೂ ಅನ್ಯಾಯ ಮಾಡಿದೆ. ಹಣ ನೀಡದೆ ಇರುವುದರಿಂದ ೧೦ ಲಕ್ಷ ರೈತರಿಗೆ ಹಾಗೂ ೧೨ ಸಾವಿರ ರೈತ ಉತ್ಪಾದಕ ಸಂಸ್ಥೆಗಳ ನಿರ್ದೇಶಕರಿಗೆ ತೊಂದರೆ ಆಗುತ್ತಿದೆ.…

Read More