ವಿಜಯಪುರ: ಕುಸ್ತಿ ಪಂದ್ಯಾವಳಿ ವಿಶ್ವದ ಅತ್ಯಂತ ಪ್ರಾಚೀನ ಕ್ರೀಡೆಯಾಗಿದೆ. ಕುಸ್ತಿ ಭಾರತದಲ್ಲಿ ವೈಭವಯುತ ಇತಿಹಾಸ ಹಾಗೂ ಜನಪ್ರಿಯತೆ ಹೊಂದಿದೆ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಟ್ನಳ್ಳಿ ಗ್ರಾಮದ ದ್ಯಾಮಗಂಗಾ ಹಾಗೂ ಮಾರುತೇಶ್ವರ ಜಾತ್ರೆ ನಿಮಿತ್ತ ಏರ್ಪಡಿಸಿದ್ದ ಕುಸ್ತಿ ಪಂದ್ಯಾವಳಿಯು ಉದ್ಘಾಟಿಸಿ ಮಾತನಾಡುತ್ತಾ, ಒಲಂಪಿಕ್ಸ್ ದಲ್ಲಿ ಕುಸ್ತಿ ಪ್ರತಿಷ್ಠಿತ ಕ್ರೀಡೆಯಾಗಿದೆ ಮೊದಮೊದಲು ಇದನ್ನು ಮಲ್ಲಯುದ್ಧವೆಂದು ಕರೆಯಲಾಗುತ್ತಿತ್ತು. ಇಂದು ಭಾರತಿಯ ಕ್ರೀಡಾ ಪ್ರಾಧಿಕಾರ ಇಂತಹ ಅಪ್ರತಿಮ ಕುಸ್ತಿಪಟುಗಳಿಗೆ ತರಬೇತಿ ನೀಡಿ ಪ್ರೋತ್ಸಾಹಿಸುತ್ತಿದೆ. ಕುಸ್ತಿಪಟುಗಳ ಸಂಖ್ಯೆ ಕುಸಿಯುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಹಾಸಿಂಪೀರ್ ವಾಲಿಕಾರ್ ಅಧ್ಯಕ್ಷ ವಹಿಸಿ ಮಾತನಾಡುತ್ತಾ, ಕರ್ನಾಟಕದಲ್ಲಿ ದಸರಾ ಕುಸ್ತಿಗಳು ಜಗತ್ಪ್ರಸಿದ್ಧವಾಗಿವೆ. ಮಹಿಳಾ ಕುಸ್ತಿಪಟುಗಳು ಸಹ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಗಳಿಸಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆಗೆ ಅವಕಾಶ ಹಾಗೂ ಪ್ರೋತ್ಸಾಹ ಅಗತ್ಯ ಎಂದರು.
ಸಂಘಟಕರಾದ ಶ್ರೀಕಾಂತ್ ಚೌದರಿ, ಸಿದ್ದು ಪವಾರ, ಜಗನಾಥ ಚೌದ್ರಿ, ಚಂದ್ರಶೇಖರ್ ಮಲಗಾಣ, ಅಶೋಕ್ ಬಗಲಿ, ರಾಜೇಂದ್ರ ಬಿರಾದಾರ್ ಅತಿಥಿಗಳನ್ನು ಗೌರವಿಸಿದರು.
ಕಾರ್ಯಕ್ರಮದಲ್ಲಿ ಬಸವನಗೌಡ ಬಿರಾದಾರ್, ಮಲ್ಲಪ್ಪ ಕತ್ನಳ್ಳಿ, ಪ್ರಕಾಶ್ ಚಿಕ್ಕಲಕಿ, ಈರಣಗೌಡ ಬಿರಾದಾರ, ರವಿ ಬಿರಾದಾರ್, ದುಂಡಪ್ಪ ಬಗಲಿ, ಮಲ್ಲಪ್ಪ ಬಾವಿಕಟ್ಟಿ, ಬಸನಗೌಡ ಬಿರಾದಾರ್, ವಿಠ್ಠಲ್ ಸಾರವಾಡ, ಈರಪ್ಪ ಸಾವಳಗಿ, ಮಹೇಶ್ ಮಾಲ್ಗರ್, ಮಲ್ಲಿಕಾರ್ಜುನ್ ಕಂಬಾರ್, ರಾಮ್ ಗೊಂಡ್ ಪಡಕೋಟಿ, ಶ್ರೀಕಾಂತ್ ಗೊಂಗಾಡಿ, ಸಿದ್ದನಗೌಡ ಬಿರಾದಾರ್, ಸುಭಾಷ, ಗೌಡಪ್ಪ ಬೆನಕಟ್ಟಿ, ಲಚ್ಚಪ್ಪ ಬಗಲಿ,ಯಲ್ಲಪ್ಪ ದುರ್ಗೋಗೊಳ, ಖಾಣಪ್ಪ ಚಿತ್ತಾಪುರ, ಚಂದ್ರಶೇಖರ್ ಇಂಡಿ, ಸುರೇಶ್ ಇಂಡಿ, ಅಪ್ಪು ನಾಟಿಕಾರ್ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

