ಆಸ್ಕಿ, ಬೆಕಿನಾಳ, ಬೂದಿಹಾಳ(ಪಿ.ಟಿ) ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹ
ಕಲಕೇರಿ: ಸಮೀಪದ ಆಸ್ಕಿ ಕೆರೆಯಲ್ಲಿ ನೂರಾರು ರೈತರು ಆಸ್ಕಿ, ಬೆಕಿನಾಳ, ಹಾಗೂ ಬೂದಿಹಾಳ ಪಿ.ಟಿ ಕೆರೆ ನೀರು ತುಂಬಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮಂಗಳವಾರ ಬೆಳಗಿನಿಂದ ಅನಿರ್ದಿಷ್ಠ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.
ಗ್ರಾಮದ ಮುಖ್ಯ ಬಜಾರದಿಂದ ಹಲಗಿ ಸದ್ದಿನೊಂದಿಗೆ ರೈತರು ವಿವಿಧ ಘೋಷಣೆಗಳನ್ನು ಕೂಗುತ್ತಾ ಕೆರೆಯಡೆಗೆ ಹೆಜ್ಜೆ ಹಾಕುತ್ತಾ ಕೆರೆಗೆ ನೀರು ಹರೆಸುವವರೆಗೆ ಧರಣಿ ಮುಂದುವರೆಯುವುದು ಎಂಬುದು ಧರಣಿ ನಿರತರ ಬೇಡಿಕೆಯಾಗಿತ್ತು,
ಆಸ್ಕಿ ಗ್ರಾಮದ ರೈತ ಸಂಘದ ಅಧ್ಯಕ್ಷ ಸಂಗನಗೌಡ ಬಿರಾದಾರ ಅವರು ಮಾತನಾಡುತ್ತಾ, ಈ ವರ್ಷದ ಭೀಕರ ಬರಗಾಲದ ನಿಮಿತ್ಯವಾಗಿ ಭಾಗದಲ್ಲಿ ಎಲ್ಲ ಹಳ್ಳ, ಕೆರೆಗಳು ಬತ್ತಿಹೋಗಿ ಬಾವಿ ಹಾಗೂ ಕೊಳವೆ ಬಾವಿಯಲ್ಲಿನ ನೀರು ಕಡಿಮೆಯಾಗಿ ಕೃಷಿಗೆ ನೀರಿಲ್ಲದೇ, ಜನ ಜಾನುವಾರುಗಳಿಗೆ ಕುಡಿಯಲು ಹನಿ ನೀರು ಇಲ್ಲದೇ ಹರಸಾಹಸ ಪಡುವಂತಾಗಿದೆ ಎಂದರು
ರೈತ ಸಂಘದ ತಾ. ಉಪಾಧ್ಯಕ್ಷ ಗೌಡಪ್ಪಗೌಡ ಹಳಿಮನಿ ಮಾತನಾಡುತ್ತಾ ಈ ವರ್ಷದಲ್ಲಿ ಅಡವಿಯಲ್ಲಿ ಮಾನವರಿಗೆ ಮತ್ತು ನಮ್ಮ ಧನಕರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ, ಆದ್ದರಿಂದ ಯಾರಿಗೆ ನೀರು ಕೇಳಬೇಕು ತಿಳಿಯುತ್ತಿಲ್ಲ, ಸಂಬಂದಿಸಿದ ತಾಲೂಕಾ ದಂಡಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ, ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ನೀರು ಹರಿಸಬೇಕು ಎಂದರು,
ಈ ವೇಳೆ ತಾಳಿಕೋಟಿ ತಾ ಅಧ್ಯಕ್ಷರಾದ ಶ್ರೀಶೈಲ ವಾಲಿಕಾರ ಅವರು ಮಾತನಾಡುತ್ತಾ ಈ ಕೆರೆಗಳಿಗೆ ನೀರು ಹರಿಸದಿದ್ದರೆ ಈ ಬಾಗದ ಆಸ್ಕಿ, ಬೆಕಿನಾಳ, ಬೂದಿಹಾಳ, ಜಲಪೂರ, ಬನ್ನೆಟ್ಟಿ, ನೀರಲಗಿ, ವಣಕ್ಯಾಳ ಗ್ರಾಮ ರೈತರು ಸೇರಿಕೊಂಡು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದರು.
ಜಿಲ್ಲಾಧ್ಯಕ್ಷ ಸಂಗಮೆಶ ಸಗರ, ಡಾ|| ಪ್ರಭುಗೌಡ ಬಿರಾದಾರ, ಅಖಿಲ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅನ್ವರ ಅವಟಿ ಬೆಂಬಲಿಸಿ ಮಾತನಾಡಿದರು, ಶಿವಶಂಕರ ಸಜ್ಜನ, ಲಿಂಗಣ್ಣ ನಾಯಕಲ್ ಮಾತನಾಡಿದರು.
ಅಧಿಕಾರಿಗಳ ಭೇಟಿ : ಧರಣಿ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿಗಳಾದ ಪವನ ಬೆಂಕಿ, ಮತ್ತು ಸರ್ಕಲ್ ವಿನೋದ ಸಿಂದಗಿರಿ ಅವರು ಮನವಿ ಕೊಡಿ ಮೇಲಾಧಿಕಾರಿಗಳಿಗೆ ತಿಳಿಸುತ್ತೆವೆ ಎಂದರು, ಆಗ ರೈತರು ಅದಕ್ಕೆ ಜಗದೇ ಸ್ಥಳಕ್ಕೆ ತಹಶಿಲ್ದಾರರು, ಹಾಗೂ ಸಂಬಂಧಿಸಿದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಕೆರೆಗೆ ನೀರು ಹರೆಸುವವರೆಗೂ ನಾವೂ ಹೋರಾಟದಿಂದ ಎಳುವುದಿಲ್ಲ ಎಂದು ಪಟ್ಟು ಹಿಡಿದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಶರಣಗೌಡ ಬಿರಾದಾರ, ತಾ. ಸಂಚಾಲಕ ಮಹಿಬೂಬ ಗೊಬ್ಬರಡಗಿ, ಗ್ರಾ.ಪಂ ಉಪಾಧ್ಯಕ್ಷರಾದ ಅಯ್ಯಪ್ಪ ಮುಗಳಿ, ರಾಮನಗೌಡ ಚೌದ್ರಿ, ಮಲ್ಲಪ್ಪ ಅಂಗಡಿ, ಮುತ್ತು ಹೂಗಾರ, ಗುರನಗೌಡ ಬಿರಾದಾರ, ಮಂಜು ಪಡಶೆಟ್ಟಿ, ಮಹದೇವಪ್ಪ ಮಾದರ, ವೆಂಕಣ್ಣ ಗುತ್ಯಾಳ, ಬಸವರಾಜ ಹಡಪದ, ಶಾಂತಗೌಡ ಬಿರಾದಾರ, ಪ್ರಭುಗೌಡ ಬಿರಾದಾರ, ಪ್ರಭುಗೌಡ ಹಳಿಮನಿ, ಶಂಕರ ಮಗದಾಳ, ದೇವಿಂದ್ರ ತುರಕನಗೇರಿ, ಬೆಕಿನಾಳ ಗ್ರಾಮದ ದೇವಿಂದ್ರಪ್ಪಗೌಡ ಪಾಟೀಲ, ಶ್ರೀಶೈಲ ಸಜ್ಜನ, ಮಲ್ಲಪ್ಪ ಮುದನೂರ, ಶ್ರೀಶೈಲ ಹಿರೇಮಠ, ರಾಮನಗೌಡ ಕರಕಳ್ಳಿ, ಲಕ್ಷö್ಮಣ ಚಲವಾದಿ, ಮರಲಿಂಗಪ್ಪ ನಾಟಿಕಾರ, ಮಡಿವಾಳಪ್ಪ ಸಜ್ಜನ, ಬೂದಿಹಾಳ ಗ್ರಾಮದ ಬಸನಗೌಡ ಪಾಟೀಲ, ಸಂತೋಷ ಕುಳಗೇರಿ, ಭೀಮನಗೌಡ ಬಿರಾದಾರ, ಶರಣಪ್ಪ ಹಯ್ಯಾಳ, ಜಟ್ಟೆಪ್ಪ ಮಾದರ ಸೇರಿದಂತೆ ಅನೇಕರು ಇದ್ದರು

