Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ವಾರ್ಡ ನಂ ೧೫ ರ ಕೆಲ ನಿವಾಸಿಗಳು ಸರಿಯಾಗಿ ನೀರು ಬರುತ್ತಿಲ್ಲ ಎಂದು ಆರೋಪಿಸಿ ಖಾಲಿ ಕೊಡಗಳನ್ನು ಪುರಸಭೆಗೆ ತಂದು ದಿಢೀರ ಪ್ರತಿಭಟನೆ ನಡೆಸಿದ ಹಿನ್ನೆಲೆ ಇದೇ ವಾರ್ಡನ ಕೆಲ ನಿವಾಸಿಗಳು ಮತ್ತು ವಾರ್ಡ ನ ಪುರಸಭೆ ಸದಸ್ಯೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು.ಈ ವೇಳೆ ಇಲ್ಲಿನ ನಿವಾಸಿ ಎಚ್.ಆರ್.ಬಾಗವಾನ ಮಾತನಾಡಿ, ನಮ್ಮಲ್ಲಿ ಸಾಕಷ್ಟು ಅಭಿವೃದ್ಧಿಯ ಕಾಮಗಾರಿಗಳನ್ನು ನಮ್ಮ ಸದಸ್ಯರು ಮಾಡಿದ್ದಾರೆ. ನಿವಾಸಿಗಳ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಶೌಚಾಲಯ ಸಮಸ್ಯೆ ಬಗ್ಗೆ ಹೇಳುವದಾದರೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಅವುಗಳ ಬಳಕೆಯನ್ನು ಸರಿಯಾಗಿ ಮಾಡುವಲ್ಲಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ ಇಡೀ ಪಟ್ಟಣದಲ್ಲಿಯೇ ಇದೆ. ಮಳೆ, ಗಾಳಿ ಇರೋದರಿಂದ ವಿದ್ಯುತ್ ಸರಿಯಾಗಿ ಇರದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ನೀರು ಸರಿಯಾಗಿ ಬಂದಿಲ್ಲ ಅನ್ನೋದನ್ನೇ ನೆಪವಾಗಿಟ್ಟುಕೊಂಡು ರಾಜಕಾರಣ ಮಾಡಬಾರದು ಎಂದರು.ಮತ್ತೀತರ ನಿವಾಸಿಗಳಾದ ಚೇತನ ಮೋಟಗಿ, ಅಯೂಬ ಬಾಗವಾನ,…
ವಿಜಯಪುರದಲ್ಲಿ ಮುಸ್ಲಿಂ ಸಮುದಾಯದ ಮುಖಂಡರಿಂದ ಪತ್ರಿಕಾಗೋಷ್ಠಿ ವಿಜಯಪುರ: ರಾಜ್ಯದ ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್‌ನ 11 ಜನ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕಾಂಗ್ರೇಸ್ ಪಕ್ಷದಿಂದ 7 ಜನ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶವಿದೆ. ಈ ಪೈಕಿ ವಿಜಯಪುರ ಜಿಲ್ಲೆಯಿಂದ ಮುಸ್ಲಿಂ ಸಮುದಾಯದ ಒರ್ವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ಮುಸಿಂ ಸಮಾಜದ ಮುಖಂಡ ಎಂ.ಸಿ. ಮುಲ್ಲಾ ಕಾಂಗ್ರೇಸ್ ಪಕ್ಷದ ಮುಖಂಡರಿಗೆ ಒತ್ತಾಯಿಸಿದ್ದಾರೆ.ವಿಜಯಪುರ ನಗರದ ಖಾಸಗಿ ಹೋಟೇಲ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಕಳೆದ ಚುನಾವಣೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಸ್ಥಾನಗಳಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಈ 6 ಜನ ಶಾಸಕರ ಆಯ್ಕೆಗೆ ಮುಸ್ಲಿಂ ಸಮುದಾಯದ ಮತಗಳೆ ಕಾರಣ, ಮುಸ್ಲಿಂ ಸಮುದಾಯದ ಬೆಂಬಲದಿಂದಾಗಿ ಕಾಂಗ್ರೇಸ್ ನಾಯಕರು ಗೆಲುವು ಸಾಧಿಸಿದ್ದಾರೆ. ಆದರೆ ಈ 6 ಜನರಲ್ಲಿ ಒರ್ವ ಶಾಸಕನು ಮುಸ್ಲಿಂ ಶಾಸಕ ಇಲ್ಲ ಎಂದರು.ಈ ಹಿಂದೆ ಜ್ಯಾತ್ಯಾತೀತ ಎನಿಸಿಕೊಂಡ ಜೆಡಿಎಸ್ ಪಕ್ಷಕ್ಕೆ ಮುಸ್ಲಿಂ ಸಮುದಾಯದ…
ಬೆಂಗಳೂರು: ಹಿರಿಯ ಪತ್ರಕರ್ತ ಆರ್.ಜಯಕುಮಾರ್ (64)ಅವರು ಅನಾರೋಗ್ಯದ ಕಾರಣದಿಂದಾಗಿ ಶನಿವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.ಕೊಡಗಿನವರಾದ ಜಯಕುಮಾರ್, ಚಳವಳಿ ಮೂಲಕವೇ ಪತ್ರಕರ್ತರಾಗಿ ರೂಪುಗೊಂಡವರು.ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ ಪತ್ರಿಕೆ, ಉದಯ ಟಿವಿ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ರಾಜ್ಯದ ನಾನಾ ಭಾಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ವೃತ್ತಿ ಮಾಡಿದ್ದರು.ಹಿರಿಯ ಮತ್ತು ಕ್ರಿಯಾಶೀಲಪತ್ರಕರ್ತರಾಗಿದ್ದ ಆರ್.ಜಯಕುಮಾರ್ ಅವರ ನಿಧನಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು (ಕೆಯುಡಬ್ಲ್ಯೂಜೆ) ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿಗೆ ಆರ್.ಜಯಕುಮಾರ್ ಭಾಜನರಾಗಿದ್ದರು. ಅನಾರೋಗ್ಯದ ಕಾರಣದಿಂದ ಚಿತ್ರದುರ್ಗದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗದ ಕಾರಣ, ಮೈಸೂರಿನ ಅವರ ತೋಟದ ಮನೆಗೆ ಹೋಗಿ ಅಲ್ಲಿ ಕೆಯುಡಬ್ಲೂಜೆ ಪ್ರಶಸ್ತಿ ಪ್ರದಾನ ಮಾಡಿತ್ತು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.ಜಯಕುಮಾರ್ ನಿಧನದಿಂದ ಕ್ರೀಯಾಶೀಲ ಪತ್ರಕರ್ತನನ್ನು ಸುದ್ದಿಮನೆ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ದುಃಖ ಭರಿಸುವ ಶಕ್ತಿಯನ್ನು ಕುಟುಂಬಕ್ಕೆ ದೇವರು ಕರುಣಿಸಲಿ ಎಂದು…
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ. ಬೆಂಗಳೂರು ದೇವರೆಂದರೇ,ಅರಿಶಿಣ ಕುಂಕುಮ ಹೂವು, ದೇವಸ್ಥಾನ ಕೆತ್ತಿದ ಮೂರ್ತಿ, ಹೋಮ ಹವನ ಅಕ್ಷತೆ ಮಂತ್ರ, ದೀರ್ಘ ದಂಡ ನಮಸ್ಕಾರ, ನಿಂಬೆಹಣ್ಣು ಹಾಲುತುಪ್ಪಗಳ ಸಮರ್ಪಣೆ ಅಷ್ಟೇನೇ..ದೇವರಿಂದರೇ,ಮಂದಿರ ಮಸೀದಿ ಚರ್ಚು, ನಮಾಜು ಗಡ್ಡ ಟೋಪಿ ಕ್ರಾಸು, ಪ್ರಾರ್ಥನೆ ಹಬ್ಬಗಳ ಆಚರಣೆ ಇಷ್ಟೇನೇ..ದೇವರೆಂದರೇ,ಪ್ರಕೃತಿಯ, ಸಮಾಜದ, ಬದುಕಿನ ಎಲ್ಲಾ ಆಗುಹೋಗುಗಳಿಗೆ ಯಾರೋ ಒಬ್ಬರನ್ನ ಹೊಣೆ ಮಾಡಿ ಸಮಾಧಾನಪಟ್ಟು, ಅದನ್ನು ಅನುಭವಿಸುತ್ತಾ ಯಾವುದೋ ನೆಪದಲ್ಲಿ ಮುನ್ನಡೆಯುತ್ತಾ, ಅಂತಿಮ ಯಾತ್ರೆ ಮುಗಿಸುವುದು ಅಷ್ಟೇನೇ..ವಿಚಿತ್ರವೆನಿಸುತ್ತದೆ ಜನರ ನಡವಳಿಕೆಗಳು, ನಂಬಿಕೆಗಳು, ಆಚರಣೆಗಳು. ಸ್ವತಂತ್ರ ಚಿಂತನೆ ಇಲ್ಲ, ಸ್ವಾಭಾವಿಕ ವರ್ತನೆ ಇಲ್ಲ, ಸಮಗ್ರ ದೃಷ್ಟಿ ಕೋನವಿಲ್ಲ. ಕೊನೆಗೆ ತನ್ನ ಅಸ್ತಿತ್ವದ ಅರಿವೇ ಇಲ್ಲ..ಮಾಡಬಾರದ್ದನ್ನೆಲ್ಲಾ ಮಾಡಿ, ಅಹಂಕಾರ ಮೆರೆದು, ಕೊಳಕು ಮನಸ್ಥಿತಿಯಲ್ಲಿ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು, ದೇವಮಂದಿರಗಳಿಗೆ ಸುತ್ತು ಹೊಡೆದು, ವಿಧವಿಧವಾದ ಪೂಜೆ ಪುನಸ್ಕಾರಗಳನ್ನು ಮಾಡುತ್ತಾ, ಪಾಪ ಪರಿಹಾರ ಮಾಡಿಕೊಳ್ಳೋದು ಮತ್ತು ಶಿಕ್ಷೆಯಿಂದ ಪಾರಾಗುವ ಭರವಸೆಯೊಂದಿಗೆ ಆ ದೇವರಿಗೇ ಮುಖವಾಡ ತೊಡಿಸುವುದು, ಅದನ್ನು…
ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ, ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ ಒಮ್ಮೆ ಒಬ್ಬಳು ಗೃಹಿಣಿ ಎರಡು ಮಾವಿನ ಹಣ್ಣುಗಳನ್ನು ತಿಂದು ಅದರ ಗೊರಟುಗಳನ್ನು (ಓಟೆ) ತಿಪ್ಪೆ ಗುಂಡಿಗೆ ಬಿಸಾಡಿದಳು. ಆಗ ಒಂದನೆಯ ಗೊರಟು ಯೋಚನೆ ಮಾಡಿತು ನನ್ನ ಬೇರುಗಳು ಭೂಮಿಯೊಳಕ್ಕೆ ಹೋಗುತ್ತವೆ, ಅಂತರ್ಜಲವನ್ನು ಹೀರಿಕೊಳ್ಳುತ್ತವೆ, ತಿಪ್ಪೆಯು ಗೊಬ್ಬರ ಮತ್ತು ಪೌಷ್ಟಿಕಾಂಶ ಕೊಡುತ್ತದೆ, ಇದರಿಂದ ಸಸಿಯಾಗಿ ಸಣ್ಣ ಗಿಡವಾಗುತ್ತೇನೆ, ಕಾಲಂತರದಲ್ಲಿ ದೊಡ್ಡ ಮರವಾಗಿ ಬೆಳೆಯುತ್ತೇನೆ. ಮಾವಿನ ಸೊಪ್ಪು, ರುಚಿಕರವಾದ ಮಾವಿನ ಹಣ್ಣನ್ನು ಕೋಡುತ್ತೇನೆ. ನೂರಾರು ವರ್ಷಗಳು ಬದುಕುತ್ತೇನೆಂದು ಯೋಚಿಸಿ ಅದರಂತೆಯೇ ಬೆಳೆಯಿತು, ಮತ್ತು ಎಲ್ಲರಿಗೂ ಬೇಕಾದ ಮರ ಮತ್ತು ಹಣ್ಣಾಗಿ ಪರೋಪಕಾರಿಯಾಗಿ ಬಾಳಿ ಬದುಕಿತು.ಅದರ ಪಕ್ಕದಲ್ಲೇ ಇದ್ದ ಎರಡನೆಯ ಗೊರಟು ನನ್ನ ಬೇರುಗಳಿಗೆ ಅಂತರ್ಜಲ ಸಿಗದಿದ್ದರೆ? ಪೌಷ್ಟಿಕಾಂಶ ಸಿಗದಿದ್ದರೆ? ಗಿಡವಾದಾಗ ಹಸು, ಕುರಿ ಮೇಕೆಗಳು ಬಂದು ತಿಂದರೆ, ಮರವಾಗಿ ಹಣ್ಣು ಬಿಡುವಾಗ, ಜನ ಹಣ್ಣು ಉದುರಿಸಲು ನನಗೆ ಕಲ್ಲು ಹೊಡೆದರೆ ನನಗೆ ನೋವಾಗುದಿಲ್ಲವೇ? ಎಂದೆಲ್ಲ ಯೋಚಿಸಿ ಬೇರನ್ನು…
ವಿಜಯಪುರದಲ್ಲಿ ನಡೆದ ನಾರದ ಜಯಂತಿ ಕಾರ್ಯಕ್ರಮದಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ಅಭಿಮತ ವಿಜಯಪುರ: ಧೃವ ಒಂದು ತಾರೆಯಾಗಲು, ಪ್ರಹ್ಲಾದ ಭಕ್ತ ಪ್ರಹ್ಲಾದನಾಗಲು ಪ್ರೇರಣೆಯಾಗಿದ್ದೇ ನಾರದ ಮುನಿ, ನಾರದ ಮುನಿಗಳು ಅನೇಕರ ಬದುಕನ್ನೇ ಉದ್ಧಾರಗೊಳಿಸಿದವರು ಎಂದು ಡಾ.ಸಂಜೀವ ಜೋಶಿ ಹೇಳಿದರು.ಮಂಥನ ವಿಜಯಪುರ ಘಟಕದ ಆಶ್ರಯದಲ್ಲಿ ವಿಜಯಪುರದ ಶುಭಶ್ರೀ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾರದ ಜಯಂತಿ ಪ್ರಯುಕ್ತ ನಡೆದ ಉಪನ್ಯಾಸಗೋಷ್ಠಿಯಲ್ಲಿ ತಮ್ಮ ವಿಚಾರ ಪ್ರತಿಪಾದಿಸಿದ ಅವರು,ನಾರದ ಮುನಿ ಎಂದರೆ ಈ ವಿಷಯ ಅಲ್ಲಿಗೆ, ಅಲ್ಲಿನ ವಿಷಯ ಇಲ್ಲಿಗೆ ಹೇಳುತ್ತಾರೆ ಎಂಬುದು ಪ್ರಚಲಿತದಲ್ಲಿದೆ. ಆದರೆ ಅವರು ಬುದ್ದಿವಾದದ ಮೂಲಕ ಲೋಕೋದ್ದಾರ ಮಾಡಿದ ಶ್ರೇಯಸ್ಸು ನಾರದರಿಗೆ ಸಲ್ಲುತ್ತದೆ, ಧೃವ ಕಾಡಿನಲ್ಲಿ ಅಲೆದಾಡುತ್ತಿರುವಾಗ ಅವನಿಗೆ ಓಂ ನಮೋ ಭಗವತೇ ವಾಸುದೇವಾಯಃ ನಮಃ ಎಂಬ ಕಾರಣ ಆತ ಧೃವತಾರೆಯಾಗಲು ಕಾರಣವಾಯಿತು, ಅದೇ ತೆರನಾಗಿ ಪ್ರಹ್ಲಾದನಲ್ಲಿ ಅದಮ್ಯ ಭಕ್ತಿ ಪ್ರವಹಿಸುವಂತೆ ಮಾಡಿ ಅವನನ್ನು ಭಕ್ತ ಪ್ರಹ್ಲಾದವನ್ನಾಗಿ ಮಾಡಿದ್ದು ಸಹ ನಾರದರೇ ಎಂದರು.ಧರ್ಮದ ಪರವಾಗಿ ನಾರದರು ಸದಾ ಇದ್ದರು, ನದಿ, ಗಿಡಮರಗಳಂತೆ ನಾರದರು…
ವಿಜಯಪುರ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು(ಇಗ್ನೊ) 2024 ಜೂನ್ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪ್ರಾರಂಭವಾಗಿದ್ದು, ಜೂನ್ 30, 2024 ಕೊನೆಯ ದಿನವಾಗಿದೆ.ಕೋರ್ಸುಗಳ ಪ್ರವೇಶ ಮತ್ತೀತರ ಮಾಹಿತಿಗಾಗಿ ಇಗ್ನೋ ಅಧ್ಯಯನ ಕೇಂದ್ರ- 1307 ಬಿ. ಎಲ್. ಡಿ. ಈ ಸಂಸ್ಥೆಯ ಜೆ. ಎಸ್. ಎಸ್ ಶಿಕ್ಷಣ ಮಹಾವಿದ್ಯಾಲಯ, ರಾಮ ಮಂದಿರ ರಸ್ತೆ, ಎಸ್. ಎಸ್. ಕ್ಯಾಂಪಸ್, ವಿಜಯಪುರ ಸಂಪರ್ಕಿಸಬಹುದಾಗಿದೆ. ಅಲ್ಲದೇ, ಪ್ರವೇಶ ಪಡೆಯಲು ಬಯಸುವರು www.ignou.ac.in ನಲ್ಲಿ ಲಾಗಿನ್ ಆಗಿ ಆನಲೈನ್ ಮೂಲಕ ನೋಂದಣಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9980691291 ದೂರವಾಣಿಯ ಮೂಲಕವೂ ಸಂಪರ್ಕಿಸಬಹುದು ಎಂದು ಇಗ್ನೋ ಕೇಂದ್ರದ ಸಂಯೋಜಕ ಡಾ. ಮಂಜುನಾಥ ಬಿ. ಕೋರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ತಾ ಇಲಾಖೆ ಆಯುಕ್ತ ಸೂರಳ್‌ಕರ್ ಜೊತೆ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಚರ್ಚೆ ಬೆಂಗಳೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯೂಡಬ್ಲ್ಯೂಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದ ನಿಯೋಗವು, ವಾರ್ತಾ ಇಲಾಖೆಯ ಆಯುಕ್ತ ಸೂರಳ್‌ಕರ್ ವಿಕಾಸ್ ಕಿಶೋರ್ ಅವರನ್ನು ಭೇಟಿ ಮಾಡಿ ಪತ್ರಕರ್ತರ ಸಮಸ್ಯೆ ಮತ್ತು ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿತು.ನಿವೃತ್ತರಾಗಿರುವ ಹಿರಿಯ ಪತ್ರಕರ್ತರುಗಳಿಗೆ ಸರ್ಕಾರದಿಂದ ಪ್ರತಿ ತಿಂಗಳು ಬರಬೇಕಾಗಿರುವ ಮಾಸಾಶನ ಹಣ 2-3 ತಿಂಗಳಾದರೂ ಬರುತ್ತಿಲ್ಲ. ಇದರಿಂದಾಗಿ ಅನೇಕರಿಗೆ ಜೀವನ ನಿರ್ವಹಣೆ ಮಾಡಲು ಔಷಧಿ ಖರೀದಿಸಲು ಹಣವಿಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ. ಆದ್ದರಿಂದ ಕೂಡಲೇ ಈ ಬಗ್ಗೆ ಆಗಿರುವ ಸಮಸ್ಯೆಯನ್ನು ಸರಿಪಡಿಸಿ ಪ್ರತಿ ತಿಂಗಳು ಸರಿಯಾಗಿ ಮಾಸಾಶನವನ್ನು ಅವರ ಅಕೌಂಟ್‌ಗೆ ಜಮೆ ಮಾಡಿಸಬೇಕು ಎಂದು ಆಯುಕ್ತರಿಗೆ ವಾಸ್ತವ ಸಮಸ್ಯೆ ಮನವರಿಕೆ ಮಾಡಿಕೊಡಲಾಯಿತು. ಈ ಬಗ್ಗೆ ತಕ್ಷಣವೇ ಕ್ರಮ ಕೈಗೊಂಡು, ಮಾಸಾಶನ ಪ್ರತೀ ತಿಂಗಳು ದೊರೆಯಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.ಮಾಸಾಶನ ಸಮಿತಿಯಲ್ಲಿ ಅರ್ಹರನ್ನು…
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ವತಿಯಿಂದ ಮೇ 22 ರಂದು ಬುಧವಾರ ಉದ್ಘಾಟನೆ ನಡೆಯಿತು.ಓಪನ್ ಡೇ ಇವೆಂಟ್ ಅಂಗವಾಗಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ನಾನಾ ಮಾದರಿಗಳ ಪ್ರದರ್ಶನ ನಡೆಯಿತು. ಕಾಲೇಜಿನ ನಾನಾ ವಿಭಾಗಳ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಟ್ಟು 201 ಮಾದರಿಗಳನ್ನು ತಯಾರಿಸಿದ್ದರು. 79 ನಾವೀನ್ಯತೆ, 54 ಸಾಮಾಜಿಕ ಪರಿಣಾಮ, 15 ಪರಿಸರ ಕೇಂದ್ರಿತ ಹಾಗೂ 53 ಅನ್ವಯಿಕೆ(ಅಪ್ಲಿಕೇಶನ್) ವಿಭಾಗಗಳಲ್ಲಿ ಮಾದರಿಗಳು ಪ್ರದರ್ಶನವಾದವು.ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಬೈಸಿಕಲ್ ಚಾಲಿತ ನೀರು ಶುದ್ಧೀಕರಣ ವ್ಯವಸ್ಥೆಯ ಅಭಿವೃದ್ಧಿ ಮತ್ತು ನಿರ್ಮಾಣ, ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದಿಂದ ಐಒಟಿ ಆಧಾರಿತ ಹೊಗೆ ವಲಯ ಮೇಲ್ವಿಚಾರಣಾ ವ್ಯವಸ್ಥೆ, ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿಭಾಗದಿಂದ ಅಂಧರಿಗೆ ಸ್ಮಾರ್ಟ್ ಧರಿಸಬಹುದಾದ ಸಾಧನಗಳು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಿಂದ ಎಲೆಕ್ಟ್ರಿಕ್ ವಾಹನಗಳಲ್ಲಿ ಬ್ಯಾಟರಿ ಮೇಲ್ವಿಚಾರಣಾ ವ್ಯವಸ್ಥೆಯ ವಿನ್ಯಾಸ ಮತ್ತು…
