ಮುದ್ದೇಬಿಹಾಳ: ಕಳೆದ ಕೆಲವು ದಿನಗಳ ಹಿಂದೆ ಇಲ್ಲಿನ ವಾರ್ಡ ನಂ ೧೫ ರ ಕೆಲ ನಿವಾಸಿಗಳು ಸರಿಯಾಗಿ ನೀರು ಬರುತ್ತಿಲ್ಲ ಎಂದು ಆರೋಪಿಸಿ ಖಾಲಿ ಕೊಡಗಳನ್ನು ಪುರಸಭೆಗೆ ತಂದು ದಿಢೀರ ಪ್ರತಿಭಟನೆ ನಡೆಸಿದ ಹಿನ್ನೆಲೆ ಇದೇ ವಾರ್ಡನ ಕೆಲ ನಿವಾಸಿಗಳು ಮತ್ತು ವಾರ್ಡ ನ ಪುರಸಭೆ ಸದಸ್ಯೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದರು.
ಈ ವೇಳೆ ಇಲ್ಲಿನ ನಿವಾಸಿ ಎಚ್.ಆರ್.ಬಾಗವಾನ ಮಾತನಾಡಿ, ನಮ್ಮಲ್ಲಿ ಸಾಕಷ್ಟು ಅಭಿವೃದ್ಧಿಯ ಕಾಮಗಾರಿಗಳನ್ನು ನಮ್ಮ ಸದಸ್ಯರು ಮಾಡಿದ್ದಾರೆ. ನಿವಾಸಿಗಳ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುತ್ತಾರೆ. ಶೌಚಾಲಯ ಸಮಸ್ಯೆ ಬಗ್ಗೆ ಹೇಳುವದಾದರೆ ಪ್ರತ್ಯೇಕ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಿದ್ದಾರೆ. ಅವುಗಳ ಬಳಕೆಯನ್ನು ಸರಿಯಾಗಿ ಮಾಡುವಲ್ಲಿ ನಮ್ಮ ಜವಾಬ್ದಾರಿಯೂ ಹೆಚ್ಚಿದೆ. ಇನ್ನು ಕುಡಿಯುವ ನೀರಿನ ಸಮಸ್ಯೆ ನಮ್ಮಲ್ಲಿ ಮಾತ್ರವಲ್ಲ ಇಡೀ ಪಟ್ಟಣದಲ್ಲಿಯೇ ಇದೆ. ಮಳೆ, ಗಾಳಿ ಇರೋದರಿಂದ ವಿದ್ಯುತ್ ಸರಿಯಾಗಿ ಇರದ ಕಾರಣ ಈ ಸಮಸ್ಯೆ ಉದ್ಭವಿಸಿದೆ. ನೀರು ಸರಿಯಾಗಿ ಬಂದಿಲ್ಲ ಅನ್ನೋದನ್ನೇ ನೆಪವಾಗಿಟ್ಟುಕೊಂಡು ರಾಜಕಾರಣ ಮಾಡಬಾರದು ಎಂದರು.
ಮತ್ತೀತರ ನಿವಾಸಿಗಳಾದ ಚೇತನ ಮೋಟಗಿ, ಅಯೂಬ ಬಾಗವಾನ, ಇಸ್ರಾಯಿಲ್ ಇಂಡಿಕಾರ, ಅಬ್ದುಲ್‌ಅಜೀಜ ಬಾಗವಾನ ನೂರಜಾನ ಬಾಗವಾನ, ಲಕ್ಷ್ಮೀ ಶಿವಯೋಗಿಮಠ ಮತ್ತೀತರರು ಮಾತನಾಡಿ, ನಿವಾಸಿಗಳ ಏನೇ ಸಮಸ್ಯೆ ಇದ್ದರೂ ಇಲ್ಲಿನ ಸದಸ್ಯರಿಗೆ ತಿಳಿಸಿದಾಗ ಕೂಡಲೇ ಸ್ಪಂದಿಸುತ್ತಾರೆ. ಕೆಲ ಸಮಸ್ಯೆಯಲ್ಲಿ ಸದಸ್ಯರ ಪತಿ ಸ್ವತಃ ತಾವೇ ಕೈಜೋಡಿಸಿ ರಿಪೇರಿ ಮಾಡಿಸಿದ ಉದಾಹರಣೆಗಳಿವೆ. ಬಳಕೆಯ ನೀರಿಗಾಗಿ ಅಲ್ಲಲ್ಲಿ ಟ್ಯಾಂಕರ್‌ಗಳನ್ನು ಜೋಡಿಸಲಾಗಿದೆ. ಬಟನ್ ಹೊಡೆದರೆ ನೀರು ಬರುತ್ತೆ. ಅಲ್ಲದೇ ಬೀದಿ ದೀಪಗಳದ್ದೂ ಯಾವುದೇ ಸಮಸ್ಯೆ ನಮ್ಮಲ್ಲಿ ಇಲ್ಲ. ಸ್ವಾರ್ಥಿಯೊಬ್ಬ ಪುರಸಭೆ ಅಧ್ಯಕ್ಷರ ಹೆಸರು ಕೆಡಿಸಲು ಈ ರೀತಿ ಮಾಡಿದ್ದಾರೆ ಎಂದರು.
ವಾರ್ಡ ನ ಸದಸ್ಯೆ ಮತ್ತು ಮಾಜಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿ, ನಮ್ಮ ವಾರ್ಡ ನಲ್ಲಿ ನಾನು ಎಲ್ಲ ಅಭಿವೃದ್ಧಿಯ ಕಾರ್ಯಗಳನ್ನು ಮಾಡಿದ್ದೇನೆ. ನಾನು ಸದಸ್ಯಳಾಗುವ ಮೊದಲು ಈ ವಾರ್ಡ ಹೇಗಿತ್ತು ಸಧ್ಯ ಹೇಗಿದೆ ಎಂದು ಸ್ವಲ್ಪ ನೆನಪಿಸಿಕೊಳ್ಳಬೇಕು. ನೀರಿನ ಸಮಸ್ಯೆ ಎದುರಿಸುತ್ತಿರುವಾಗ ನಮ್ಮ ಗಮನಕ್ಕೆ ತಂದಿದ್ದರೆ ಕೂಡಲೇ ಸರಿಪಡಿಸುತ್ತಿದ್ದೆವು. ಕೆಲವರು ಏಕಾಏಕಿ ಪುರಸಭೆಗೆ ತೆರಳಿ ಹೋರಾಟ ನಡೆಸಿದ್ದರ ಹಿಂದೆ ಏನಿದೆ ಎಂದು ತಿಳಿದಿಲ್ಲ ಎಂದರು.
ಈ ವೇಳೆ ಕಮರು ಮೋಮಿನ, ವಿಜಯ ಬೈಲಾದ, ಮಹಮ್ಮದಹುಸೇನ ಬಾಗವಾನ, ಮುನಾಪ ಮುರಾಳ, ಲತೀಫ್ ನಾಲಬಂದ, ಮಲ್ಲಣ್ಣ ಕುಂಬಾರ, ದ್ಯಾಮಣ್ಣ ಕುಂಬಾರ, ಶಂಕ್ರಮ್ಮ ಕುಂಬಾರ, ಶಿವಗಂಗವ್ವ ಕುಂಬಾರ, ಶೋಭಾ ಕುಂಬಾರ, ಅಮರಮ್ಮ ಮಡಿವಾಳರ, ಕಾಶಿಬಾಯಿ ನಾಡಗೌಡ, ಸುವರ್ಣ ಅಮರಣ್ಣವರ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

