Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಚಡಚಣ: ಸರ್ಕಾರಿ ಶಾಲೆಗಳು ಸ್ವಚ್ಛವಾಗಿರುವಂತೆ ಮಾಡಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸ್ಥಳೀಯ ನಿವಾಸಿಗಳ ಸಹಕಾರ ಅಗತ್ಯ ಎಂದು ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಆರ್.ಎನ್.ಹತ್ತಳ್ಳಿಯವರು ಹೇಳಿದರು.ಶಾಲಾ ಆರಂಭೋತ್ಸವದ ಮನ್ನ ದಿನವಾದ ಬುಧವಾರದಂದು ಶಾಲಾ ಆವರಣ ಹಾಗೂ ಶಾಲೆಗಳ ಕೋಣೆಗಳ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಾತನಾಡಿದ ಅವರು. ಸರ್ಕಾರಿ ಶಾಲೆಗಳು ಸಾರ್ವಜನಿಕರ ಆಸ್ತಿ. ಇದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಶಾಲೆಯ ಜವಾಬ್ಧಾರಿಯಾಗಿದೆ. ಸಾರ್ವಜನಿಕರು ಶಾಲಾ ಆವರಣದಲ್ಲಿ ಕಸ ಕಡ್ಡಿ ಹಾಕದಂತೆ ತಡೆಯುವ ಕಾರ್ಯ ಆಗಬೇಕು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಗೆ ಪೂರಕ ಪರಿಸರ ಕಲ್ಪಿಸುವ ಕರ್ತವ್ಯ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳು ಹಾಗೂ ಯುವಕರದ್ದು ಆಗಿರಬೇಕು ಎಂದು ಹೇಳಿದರು.ಈ ವೇಳೆಯಲ್ಲಿ ಶಾಲೆಯ ಶಿಕ್ಷಕರಾದ ಎಸ್.ಡಿ.ಆದಿಗೊಂಡೆಯವರು ಮಾತನಾಡುತ್ತ. ಶಾಲೆ ಸುತ್ತಮುತ್ತಲಿನ ಯುವ ಮುಖಂಡರು ಸೇರಿದಂತೆ ಸಂಘ, ಸಂಸ್ಥೆ ಪದಾಧಿಕಾರಿಗಳ ನೆರವನ್ನು ಪಡೆದು ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಕಲ್ಪಿಸುವ ಅಗತ್ಯವಿದೆ. ತಾವು ವಾಸಿಸುವ ಸುತ್ತಮುತ್ತಲಿನ ಸ್ಥಳ ಮತ್ತು…
ಇಂಡಿ: ಇಸ್ಲಾಂ ಕಮೀಟಿ ಅಧ್ಯಕ್ಷರಾಗಿ ಇಬ್ರಾಹಿಂ ಚಪ್ಪರಬಂದ ಅವರನ್ನು ಹಾಗೂ ಉಪಾಧ್ಯಕ್ಷರಾಗಿ ಬಾಬು ಹುಸೇನಸಾಬ ಮಕಾಂದರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ತಾಲ್ಲೂಕಿನ ಲಚ್ಯಾಣ ಗ್ರಾಮದ ಇಸ್ಲಾಂ ಕಮೀಟಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ಶುಕ್ರವಾರ ಸಮುದಾಯದ ಹಿರಿಯರು ಆಯ್ಕೆ ಮಾಡಿದರು.ಇನ್ನು ಸದಸ್ಯರಾಗಿ ಬಾಬುಲಾಲ ಮುಜಾವರ, ಮದರಸಾಬ ಮಕಾಂದಾರ, ಬಾಬುಸಾಬ ಅತ್ತಾರ, ಹಾಜಿಸಾಬ, ಶೇಖ್, ದಸಗೀರಸಾಬ, ಶೇಖ್, ಸೈಪನಸಾಬ ಚಪ್ಪರಬಂದ, ಲಾಡ್ಲೆಮಶಾಕ ನದಾಪ, ಸೈಪನಸಾಬ ಮುಲ್ಲಾ ಅವರನ್ನು ಜಮಾತೆ ಇಸ್ಲಾಂ ಕಮೀಟಿಯ ಸರ್ವ ಸದಸ್ಯರು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ 2024 ರಿಂದ ಮುಂದಿನ 3 ವರ್ಷಗಳ ಕಾಲದ ಅವಧಿ ವರೆಗೆ ಆಯ್ಕೆ ಮಾಡಲಾಗಿದೆ.
ದೇವರಹಿಪ್ಪರಗಿ: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಜಿಲ್ಲೆಯ ಅಹಿಂದ ವರ್ಗಕ್ಕೆ ಪ್ರಾಧಾನ್ಯತೆ ನೀಡಬೇಕು ಎಂದು ಕೋಲಿ ಕಬ್ಬಲಿಗ ಯುವ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಶಿವಾಜಿ ಮೆಟಗಾರ ಹೇಳಿದ್ದಾರೆ.ಪಟ್ಟಣದಲ್ಲಿ ಬುಧವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿಕೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಯಲ್ಲಿ ಅಹಿಂದ ಮತಗಳ ಮೂಲಕ ಗಮನಾರ್ಹ ಸಾಧನೆ ಮಾಡಿದೆ. ಜೊತೆಗೆ ಜಿಲ್ಲೆಯಲ್ಲಿ ಅಹಿಂದ ಮತದಾರರ ಸಂಖ್ಯೆಯೂ ಸಹ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ, ಹಿಂದುಳಿದ, ದಲಿತಪರ ನಾಯಕರು ಸಹ ಸಾಕಷ್ಟು ಅವಕಾಶವಂಚಿತರಾಗಿದ್ದಾರೆ.ಜಿಲ್ಲೆಯ ದೇವರಹಿಪ್ಪರಗಿ, ವಿಜಯಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯದಡಿ ಅಹಿಂದ ಅಭ್ಯರ್ಥಿಗಳಿಗೆ ಅವಕಾಶ ನೀಡಿತ್ತು. ಈ ಕಾರಣದಿಂದ ಜಿಲ್ಲೆಯ ಎಲ್ಲ ಅಹಿಂದ ಮತಗಳು ಒಂದಾಗಿ ಇತರ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸುವಂತಾಯಿತು.ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಅಹಿಂದ ವರ್ಗಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದು ಈಗ ಅವುಗಳಿಗೆ ಕೃತಜ್ಞತೆ ಸಲ್ಲಿಸುವ ಅವಕಾಶ ತಾನಾಗಿ ಒದಗಿ ಬಂದಿದ್ದು,ಈ ಮೂಲಕ ಜಿಲ್ಲೆಯ ಅಹಿಂದ ವರ್ಗದ ಯಾವುದೇ ಸೂಕ್ತ ನಾಯಕರಿಗೆ ಅವಕಾಶ…
ವರ್ಷದಿಂದ ಸ್ಥಗಿತಗೊಂಡ ರಸ್ತೆ ಕಾಮಗಾರಿ | ಪರದಾಡುತ್ತಿರುವ ಸಾರ್ವಜನಿಕರು ಚಿಮ್ಮಡ: ಗ್ರಾಮದ ಘಟಪ್ರಭಾ ಎಡದಂಡೆ ಕಾಲುವೆಯ ಜಮಖಂಡಿ ಉಪಕಾಲುವೆಯಿಂದ ಚಿಮ್ಮಡ-ಜಗದಾಳ ಹೊರವಲಯ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಬೇಕೆಂದು ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.ತಗ್ಗು ದಿನ್ನೆಗಳಿಂದ ಕೂಡಿದ ಈ ರಸ್ತೆಯನ್ನು ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದ ಹಿನ್ನೆಲೆ ಕಳೆದ ವರ್ಷವೇ ಗುಂಪು ಕಾಮಗಾರಿಯೊಂದಿಗೆ ಸೇರಿಸಿ ಟೆಂಡರ್ ಮಾಡಲಾಗಿತ್ತು. ಗುತ್ತಿಗೆದಾರರು ಕೂಡ ೯೦೦ ಮೀ. ಉದ್ದದ ಈ ರಸ್ತೆಗೆ ದಪ್ಪ ಜಲ್ಲಿ ಸುರಿಯುವ ಮೂಲಕ ಕಾಮಗಾರಿಯನ್ನು ಪ್ರಾರಂಭಿಸಿದ್ದರು, ಆದರೆ ಕಳೆದ ಒಂದು ವರ್ಷದಿಂದ ಯಾವುದೇ ಚಟುವಟಿಕೆ ಇಲ್ಲದೇ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ಈ ಜಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುವುದು ದುಸ್ತರವಾಗಿದೆ. ಈ ಭಾಗದ ರೈತರು ತಮ್ಮ ಹೊಲ ಗದ್ದೆಗಳಿಗೆ ತೆರಳಲು ಏಕೈಕ ಮಾರ್ಗ ಇದಾಗಿದ್ದರಿಂದ ಕೃಷಿಕರ ಗೋಳು ಹೇಳತೀರದು, ಅಲ್ಲದೇ ಸೀಮಿ ಲಕ್ಕವ್ವದೇವಿ ದೇವಸ್ಥಾನಕ್ಕೆ, ಹಾಗೂ ಪ್ರಾಥಮಿಕ ಶಾಲೆಗೆ ಬರಲು ಈ ಮಾರ್ಗವನ್ನೇ ಅವಲಂಭಿಸಿರುವುದರಿಂದ ಈ ಜಲ್ಲಿ ತುಂಬಿದ…
ಇಂಡಿ: ಮಕ್ಕಳಲ್ಲಿ ಜ್ಞಾನದ ಶಕ್ತಿ ಹೊರಹೊಮ್ಮಬೇಕಾದರೆ ಪಾಲಕರು ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿ ಮಕ್ಕಳ ಜ್ಞಾನಾರ್ಜನೆಗೆ ಒತ್ತು ನೀಡಬೇಕು ಎಂದು ಪಿಡಿಓ ಬಸವರಾಜ ಬಬಲಾದ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದಲ್ಲಿ ಶ್ರೀ ಜಟ್ಟಿಂಗೇಶ್ವರ ಕೋಚಿಂಗ್ ಕ್ಲಾಸಿಸ್ ವತಿಯಿಂದ ಹಮ್ಮಿಕೊಂಡ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಎಸ್ಸೆಸ್ಸೆಲ್ಸಿ -ಪಿಯುಸಿ ಸಾಧಕ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಯುವ ಶಿಕ್ಷಕರ ನಿಸ್ವಾರ್ಥ ಶೈಕ್ಷಣಿಕ ಸೇವೆ ಗ್ರಾಮದ ಪ್ರಗತಿಯ ಸಂಕೇತವಾಗಿದೆ. ಕಠಿಣ ಪರಿಶ್ರಮದಿಂದ ಮಹೋನ್ನತ ಸಾಧನೆ ಮಾಡುವ ಛಲ ವಿದ್ಯಾರ್ಥಿಗಳಲ್ಲಿ ಗಟ್ಟಿಯಾಗಬೇಕು. ಜೀವನದ ಗುರಿ ಸಾಧನೆಗೆ ನಿರಂತರ ಪ್ರಯತ್ನಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.ಇಂಡಿ ಬಸವೇಶ್ವರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜಟ್ಟೆಪ್ಪ ಕೋಟಗೊಂಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳ ಜತೆಗೆ ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಲು ಪೋಷಕರು ಮುಂದಾಗಬೇಕು ಎಂದು ಹೇಳಿದರು.ಎಸ್ಸೆಸ್ಸೆಲ್ಸಿ-ಪಿಯುಸಿ ವಿಭಾಗದ ಸಾಧಕ ವಿದ್ಯಾರ್ಥಿಗಳಾದ ಸಮರ್ಥ ಡಂಗಿ,ಸೌಮ್ಯ ರೂಗಿ, ಜ್ಯೋತಿ ಮಾವಿನಹಳ್ಳಿ, ಪ್ರಿಯಾಂಕ ಗಿಣ್ಣಿ, ಆರತಿ ಪೂಜಾರಿ, ಮಂಜುನಾಥ ಪೂಜಾರಿ,…
ಇಂಡಿ: ತಾಲೂಕಿನ ಬಬಲಾದ ಸಸ್ಯಕ್ಷೇತ್ರದಿಂದ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ೪೭ ಸಾವಿರ ಸಸಿಗಳನ್ನು ವಿತರಿಸಲಾಗುವದೆಂದು ವಲಯ ಅರಣ್ಯ ಆಧಿಕಾರಿ ಮಂಜುನಾಥ ಧುಳೆ ತಿಳಿಸಿದ್ದಾರೆ.ಪಟ್ಟಣದ ಸಾಮಾಜಿಕ ಅರಣ್ಯ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು ಜೂ.೩ ರಿಂದ ರೈತರಿಗೆ, ಸಂಘಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ಸಸಿಗಳನ್ನು ವಿತರಿಸಲಾಗುವದು.ಸಸಿಗಳು ೬೯ ಮತ್ತು ೮ ೧೨ ಬ್ಯಾಗ್ ಸೈಜ್ ನಲ್ಲಿ ವಿತರಿಸಲಾಗುವದು. ೬೯ ಬ್ಯಾಗ ಸೈಜ್ ಗೆ ದರ ರೂ ೩ ರೂ ಮತ್ತು ೮೧೨ ಬ್ಯಾಗ ಸೈಜ್ ಗೆ ದರ ರೂ ೬ ರೂ ನಿಗದಿಪಡಿಸಲಾಗಿದೆ ಎಂದರು.ನುಗ್ಗೆ, ಸಾಗವಾನಿ, ಮಹಾಗನಿ, ತಪಸಿ, ಹುಣಸೆ, ಸಸಿಗಳು ೬೯ ಬ್ಯಾಗ ಸೈಜಿನಲ್ಲಿ ಮತ್ತು ಮಹಾಗನಿ, ಸಾಗವಾನಿ, ಹುಣಸೆ, ಬದಾಮ, ಮೆಹಂದಿ, ಶ್ರೀಗಂಧ, ರಕ್ತ ಚಂದನ, ಬಾರೆ, ಪೆರು, ನಿಂಬೆ, ನುಗ್ಗೆ ೮೧೨ ಬ್ಯಾಗ ಸೈಜ್ ನಲ್ಲಿ ದೊರೆಯುತ್ತವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಹೋರ್ತಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಎಲ್.ಜಿ.ನಾದ, ಗಸ್ತು ವನಪಾಲಕ ಡಿ.ಎ.ಮುಜಗೊಂಡ, ಇಂಡಿ ಉಪ…
“ಜಯ್ ನುಡಿ” (ವ್ಯಕ್ತಿತ್ವ ವಿಕಸನ ಮಾಲಿಕೆ)- ಜಯಶ್ರೀ.ಜೆ. ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ, ಮೊ:9449234142 ಕರ್ತವ್ಯಕ್ಕೆ ಬೇಕು ಪ್ರೀತಿಯ ಕೀಲೆಣ್ಣೆ
ಇಂಡಿ: ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ನೀವು ಮಾಡುವ ರಕ್ತದಾನ ಇನ್ಯಾರದೋ ಜೀವಕ್ಕೆ ವರದಾನ ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ, ನೀವು ಉಡುಗೊರೆಯಾಗಿ ನೀಡಲಿರುವ ರಕ್ತಕ್ಕಾಗಿ ಒಂದು ಅಮೂಲ್ಯ ಜೀವ ಕಾಯುತ್ತಿದೆ ಎಂದು ಆಧ್ಯಾತ್ಮ ಪ್ರವಚನಕಾರ ಮೈತ್ರಾದೇವಿ ಹೇಳಿದರು.ಸೋಮವಾರ ತಾಲೂಕಿನ ಹಿರೇಮಸಳಿ ಗ್ರಾಮದ ಶರಣಬಸವೇಶ್ವರ ಜಾತ್ರೆಯಲ್ಲಿ ನಡೆದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅನ್ನದಾನ, ವಿದ್ಯಾದಾನ, ನೇತ್ರದಾನ ಹಾಗೂ ರಕ್ತದಾನವು ಅತಂತ್ಯ ಶ್ರೇಷ್ಠವಾದ ಕಾರ‍್ಯಗಳಾಗಿವೆ. ಪ್ರತಿಯೊಬ್ಬರು ಇಂತಹ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದ್ಯೆಂದು ಹೇಳಿದರು.ವಿಜಯಪುರದ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯರ ತಂಡ ಜನರ ಆರೋಗ್ಯ ತಪಾಸಣೆ ನಡೆಸಿ ಔಷಧೋಪಚಾರ ನೀಡಿದರು. ಉಚಿತ ಕಣ್ಣಿನ ಪೊರೆ ತಪಾಸಣೆ ನಡೆಸಿ, ಶಸ್ತ್ರ ಚಿಕಿತ್ಸೆಯ ಅಗತ್ಯವುಳ್ಳವರಿಗೆ ಆಸ್ಪತ್ರೆಗೆ ಬರುವಂತೆ ತಿಳಿಸಿದರು.ಶಿಬಿರದಲ್ಲಿ ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ ದೊಡಮನಿ, ಗ್ರಾಪಂ ಸದಸ್ಯರಾದ ಶಿವನಗೌಡ ಪಾಟೀಲ, ಮಹಮ್ಮದಲಿ ಗೊಗಿಹಾಳ, ಶ್ರೀಕೃಷ್ಣ ಸುಣಗಾರ, ಬೊಜಪ್ಪ ಚಾಣಕೊಟೆ, ಅಶೋಕ ಮರಡಿ, ರಾಜಕುಮಾರ ಹುಬ್ಬಳ್ಳಿ, ಶಿವಾನಂದ ಕ್ಷತ್ರಿ, ಪ್ರವೀಣ…
ಸಿಂದಗಿ: ಎಲ್ಲೆಡೆ ಸ್ಚಚ್ಚತೆ ಕಾಪಾಡಬೇಕು. ರೋಗಿಗಳಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಸಲ್ಲದು. ಸಿಬ್ಬಂದಿಯವರು ನಿಯಮಿತವಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆಸ್ಪತ್ರೆಯ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಸೂಚಿಸಿದರು.ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಬೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿನ ಅವಧಿ ಮೀರಿದ ಇಂಜೆಕ್ಷನ್ ಕಂಡು ಸಂಬಂಧಿಸಿದ ಅಧಿಕಾರಿಗಳ ಮೇಲೆ ಲೋಕಾಯುಕ್ತರು ಕೆಂಡಾಮಂಡಲವಾದರು. ಇದನ್ನು ನೀವು ಹೇಗೆ ಇಟ್ಟುಕೊಂಡಿದ್ದೀರಿ ಇರುವ ನಾಲ್ಕು ಬಾಕ್ಸ್ಗಳು ಹಾಗೆ ಇವೇ ಅವುಗಳನ್ನು ನೀವು ಉಪಯೋಗಿಸಲ್ಲ ಎಂದ ಮೇಲೆ ತರಿಸಿಕೊಂಡು ಹಾಳು ಮಾಡಿ ಸರಕಾರಕ್ಕೆ ನಷ್ಟವನ್ನುಂಟು ಮಾಡುವುದೇಕೆ ಎಂದು ಪ್ರಶ್ನೀಸಿದರು.ಮಹಿಳಾ ವಾರ್ಡ್, ಪುರುಷರ ವಾರ್ಡ್, ಐಸಿಯು ಘಟಕ, ಎಆರ್‌ಟಿ ಕೇಂದ್ರ, ಔಷಧಿ ವಿತರಣಾ ಕೇಂದ್ರ, ತುರ್ತು ಪರಿಸ್ಥಿತಿ ನಿಗಾ ಘಟಕ, ಹೆರಿಗೆ ಘಟಕ, ನವಜಾತ ಶಿಶು ಘಟಕ ಸೇರಿದಂತೆ ವಿವಿಧ ವಿಭಾಗಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆ ಮತ್ತು ಸೌಲಭ್ಯಗಳ ಕುರಿತಾಗಿ ಚಿಕಿತ್ಸೆಗೆ…
