ಸಿಂದಗಿ: ಎಲ್ಲೆಡೆ ಸ್ಚಚ್ಚತೆ ಕಾಪಾಡಬೇಕು. ರೋಗಿಗಳಿಗೆ ಸರಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ಯಾವುದೇ ಕಾರಣಕ್ಕೂ ತಾರತಮ್ಯ ಸಲ್ಲದು. ಸಿಬ್ಬಂದಿಯವರು ನಿಯಮಿತವಾಗಿ ಕರ್ತವ್ಯ ನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಆಸ್ಪತ್ರೆಯ ಅಧಿಕಾರಿಗಳಿಗೆ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ ಸೂಚಿಸಿದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಬೇಟಿ ನೀಡಿ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಆಸ್ಪತ್ರೆಯಲ್ಲಿನ ಅವಧಿ ಮೀರಿದ ಇಂಜೆಕ್ಷನ್ ಕಂಡು ಸಂಬಂಧಿಸಿದ ಅಧಿಕಾರಿಗಳ ಮೇಲೆ ಲೋಕಾಯುಕ್ತರು ಕೆಂಡಾಮಂಡಲವಾದರು. ಇದನ್ನು ನೀವು ಹೇಗೆ ಇಟ್ಟುಕೊಂಡಿದ್ದೀರಿ ಇರುವ ನಾಲ್ಕು ಬಾಕ್ಸ್ಗಳು ಹಾಗೆ ಇವೇ ಅವುಗಳನ್ನು ನೀವು ಉಪಯೋಗಿಸಲ್ಲ ಎಂದ ಮೇಲೆ ತರಿಸಿಕೊಂಡು ಹಾಳು ಮಾಡಿ ಸರಕಾರಕ್ಕೆ ನಷ್ಟವನ್ನುಂಟು ಮಾಡುವುದೇಕೆ ಎಂದು ಪ್ರಶ್ನೀಸಿದರು.
ಮಹಿಳಾ ವಾರ್ಡ್, ಪುರುಷರ ವಾರ್ಡ್, ಐಸಿಯು ಘಟಕ, ಎಆರ್‌ಟಿ ಕೇಂದ್ರ, ಔಷಧಿ ವಿತರಣಾ ಕೇಂದ್ರ, ತುರ್ತು ಪರಿಸ್ಥಿತಿ ನಿಗಾ ಘಟಕ, ಹೆರಿಗೆ ಘಟಕ, ನವಜಾತ ಶಿಶು ಘಟಕ ಸೇರಿದಂತೆ ವಿವಿಧ ವಿಭಾಗಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವೆ ಮತ್ತು ಸೌಲಭ್ಯಗಳ ಕುರಿತಾಗಿ ಚಿಕಿತ್ಸೆಗೆ ಬಂದಿದ್ದ ರೋಗಿಗಳಿಂದ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಯಲ್ಲಿನ ಅಶುಚಿತ್ವ ವಾತವಾರಣ ಕಂಡು . ಆಸ್ಪತ್ರೆಯನ್ನು ಪರಿಶೀಲನೆ ಮಾಡಿದಾಗ ಇಲ್ಲಿ ಹೆಚ್ಚು ಸ್ವಚ್ಚತೆ, ನೈರ್ಮಲ್ಯ ಮತ್ತು ವಿದ್ಯುತ್ತಿನ ಸಮಸ್ಯೆ ಹೆಚ್ಚಾಗಿದೆ ಅದರ ವರದಿಯನ್ನು ಹಿರಿಯ ಲೋಕಾಯುಕ್ತ ಕಛೇರಿಗೆ ಮತ್ತು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಲೋಕಾಯುಕ್ತ ಎಸ್ಪಿ ತಿಳಿಸಿದರು. ಆಸ್ಪತ್ರೆಯಲ್ಲಿ ಹಾಸಿಗೆ, ಹೊದಿಕೆಗಳಲ್ಲಿ ಇನ್ನಷ್ಟು ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸೂಚಿಸಿದರು. ಆಸ್ಪತ್ರೆಯ ಅಧಿಕಾರಿ/ಸಿಬ್ಬಂದಿಗಳ ಚಲನವಹಿ, ನಗದು ಪುಸ್ತಕಗಳನ್ನು ಲೋಕಾಯುಕ್ತರು ಪರಿಶಿಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಸುರೇಶ ರೆಡ್ಡಿ, ಲೋಕಾಯುಕ್ತ ಪಿಎಸ್‌ಐ ಆನಂದ ಟಕ್ಕಣ್ಣನವರ, ಆನಂದ ಡೋಣಿ, ಸೇರಿದಂತೆ ಲೋಕಾಯುಕ್ತ ಸಿಬ್ಬಂದಿಗಳು, ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.
Subscribe to Updates
Get the latest creative news from FooBar about art, design and business.
ಸಿಂದಗಿ ಸಾರ್ವಜನಿಕ ಆಸ್ಪತ್ರೆಗೆ ಲೋಕಾಯುಕ್ತ ಎಸ್ಪಿ ಭೇಟಿ-ಪರಿಶೀಲನೆ
Related Posts
Add A Comment

