Subscribe to Updates
Get the latest creative news from FooBar about art, design and business.
Author: editor.udayarashmi@gmail.com
ದೇವರಹಿಪ್ಪರಗಿ: ಪ್ರತಿಭಾವಂತ ಕ್ರೀಡಾಳುಗಳನ್ನು ಗುರುತಿಸಿ ಬೆಳೆಸುವುದರ ಮೂಲಕ ಕಾಲೇಜು ಸೇರಿದಂತೆ ಪಟ್ಟಣದಲ್ಲಿ ಕ್ರೀಡಾ ಮೌಲ್ಯವನ್ನು ಹೆಚ್ಚಿಸಿದ ಹಿರಿಮೆ ದೈಹಿಕ ಶಿಕ್ಷಣ ನಿರ್ದೇಶಕ ಅಶೋಕಕುಮಾರ ಜಾಧವ ಅವರದ್ದಾಗಿದೆ ಎಂದು ಪ್ರಾಂಶುಪಾಲ ಅಶೋಕ ಹೆಗಡೆ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎ.ಆರ್.ಜಾಧವ ಶುಕ್ರವಾರ ಸೇವಾನಿವೃತ್ತಿ ಹೊಂದಿದ ನಿಮಿತ್ಯ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿ ಮಾತನಾಡಿದರು. ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳನ್ನು ತಮ್ಮ ಕ್ರೀಡಾ ಚಟುವಟಿಕೆಗಳ ಮೂಲಕ ವಿಶ್ವವಿದ್ಯಾಲಯಕ್ಕೆ ಪರಿಚಯಿಸಿ ಕ್ರೀಡಾ ಸೇವೆ ಸಲ್ಲಿಸಿದ ನಿರ್ದೇಶಕರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಅಧಿಕ್ಷಕ ಜಗನ್ನಾಥ ಸಜ್ಜನ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಪುತ್ರ ಜಾಲವಾದಿ, ಅತಿಥಿ ಉಪನ್ಯಾಸಕ ಭೀಮನಗೌಡ ಬಿರಾದಾರ ಮಾತನಾಡಿ, ಕ್ರೀಡಾಕ್ಷೇತ್ರಕ್ಕೆ ದೈಹಿಕ ಶಿಕ್ಷಣ ನಿರ್ದೇಶಕರು ನೀಡಿದ ಕೊಡುಗೆಯನ್ನು ಸ್ಮರಿಸಿ ಭಾವುಕರಾದರು.ಸನ್ಮಾನಿತ ಎ.ಆರ್.ಜಾಧವ ಮಾತನಾಡಿ, ಸಾಧನೆ ಮಾಡಲೇಬೇಕು ಎಂಬ ಛಲದಿಂದ ಬಂದು ಇಲ್ಲಿ ಸಾಧನೆ ಮಾಡಿದ್ದೇನೆ. ಇದು ನನಗೆ ಅತ್ಯಂತ ತೃಪ್ತಿನೀಡಿದೆ. ಈವರೆಗಿನ ಕಾಲೇಜಿನ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ…
ಆಲಮೇಲ: ಪಟ್ಟಣದ ಬಣಜಿಗ ಸಮಾಜದ ಹಿರಿಯರು, ಹಿರಿಯ ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ ಅವರ ಸಹೋದರರಾದ ಬಸವರಾಜ್ ಉಪ್ಪಿನ(70) ಅವರು ಬುಧವಾರ ನಿಧನರಾದರು.ಮೃತರು ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಪತ್ರಕರ್ತ ಸುನೀಲ ಉಪ್ಪಿನ ಅವರ ತಂದೆ. ಹಿರಿಯ ಪತ್ರಕರ್ತ ಶಿವಕುಮಾರ ಉಪ್ಪಿನ, ಚಿತ್ರನಟ ಸಂತೋಷ ಉಪ್ಪಿನ ಅವರ ಚಿಕ್ಕಪ್ಪನವರು.ಸಂತಾಪ: ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ಅಶೋಕ ಶಾಬಾದಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹಾಗೂ ಆಲಮೇಲ ಪತ್ರಿಕಾ ಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬಬಲೇಶ್ವರ: ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಮಕ್ಕಳಿಗೆ ಸೀಗುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕು ಎಂದು ವಿಜಯಪುರ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳಿದರು.ಬಬಲೇಶ್ವರ ಪಟ್ಟಣದ ಸರ್ಕಾರಿ ಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವನ್ನು ಡೋಲು ಬಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶ ಅಭಿವೃದ್ಧಿ ಹೊಂದಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.ಸಾಂಕೇತಿಕವಾಗಿ ಎಲ್ಲ ಮಕ್ಕಳಿಗೆ ಫಲ ಪುಷ್ಪ, ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ನೀಡಿದರು.ಈ ಸಂದರ್ಭದಲ್ಲಿ ಗ್ರಾಮೀಣವಲಯದ ಬಿಇಓ ಪ್ರಮೋಧಿನಿ ಬಳೋಲಮಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ ಮಂಗಳವೆಡೆ, ಮುಖ್ಯೋಪಾಧ್ಯಾಯ ಎಚ್.ವಿ.ಮಾಲಗಾರ, ಅಶೋಕ ಬೂದಿಹಾಳ, ಇಸಿಓ ಪ್ರಭು ಬಿರಾದಾರ, ಬಿಆರ್ಪಿ ಕುಲಕರ್ಣಿ, ವಿಜಯಲಕ್ಷ್ಮಿ ಪಾಟೀಲ ಇದ್ದರು.ಸಿಹಿ ತಿನ್ನಿಸಿ ಮಕ್ಕಳಿಗೆ ಸ್ವಾಗತ: ತಿಕೋಟಾ ಪಟ್ಟಣದ ಸರ್ಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ತಿನ್ನಿಸುವ ಮೂಲಕ ಶಿಕ್ಷಣ ಸಂಯೋಜಕ ರವೀಂದ್ರ ಚಿಕ್ಕಮಠ ಹಾಗೂ ಜಿ.ಟಿ.ಕಾಗವಾಡ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ…
೨೦೨೪-೨೫ ನೇ ಸಾಲಿನ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜಯಪುರ: ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ ನಮ್ಮ ಬದುಕು ಅಭಿವೃದ್ಧಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.ಜಿಲ್ಲಾ ಪಂಚಾಯತ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ನಗರ ವಲಯ ವಿಜಯಪುರ ಹಾಗೂ ಕೆ. ಪಿ. ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ) ಗಾಂಧಿ ವೃತ್ತ ವಿಜಯಪುರ ಇವರ ಸಹಯೋಗದಲ್ಲಿ ಗಾಂಧಿ ಚೌಕ್‌ನ ಕೆ. ಪಿ. ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ)ನಲ್ಲಿ ಶುಕ್ರವಾರ ನಡೆದ ೨೦೨೪-೨೫ ನೇ ಸಾಲಿನ ದಾಖಲಾತಿ ಆಂಧೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿಯೂ ಆಸಕ್ತಿ ವಹಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಪುಸ್ತಕಗಳು, ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಅದನ್ನು ಉಪಯೋಗಿಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.…
“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ, ಮುಂಡರಗಿ-ಗದಗ ಘಟನೆ ಒಂದು… ಶುಭ ಕಾರ್ಯಕ್ರಮರಲ್ಲಿ ಭಾಗವಹಿಸಿದ್ದ ಆಕೆಗೆ ಕುಂಕುಮ, ಹೂವು ಕೊಡಲು ತಡವರಿಸಿದಾಗ ಅವರನ್ನು ಮುಂದಕ್ಕೆ ಕಳುಹಿಸಿದ ಆ ಹೆಣ್ಣು ಮಗಳು ಹುಸಿ ನಕ್ಕ ಘಳಿಗೆ ಮರೆಯಲಾಗದು.ಘಟನೆ ಎರಡು….ತನ್ನದೇ ಮಗನ ಮದುವೆಯಲ್ಲಿ ಆಮಂಗಳೆಯಾದ ತನ್ನಿಂದ ಅಶುಭವಾಗಬಾರದೆಂದು ಮಂಟಪದಿಂದ ತುಸು ದೂರವೇ ಕುಳಿತ ತಾಯಿ.ಘಟನೆ ಮೂರು… ಮದುವೆಯಾಗಿ ಕೆಲವೇ ತಿಂಗಳಲ್ಲಿ ಗಂಡನನ್ನು ಕಳೆದುಕೊಂಡು ಓದು ಮುಂದುವರಿಸಿ ಉದ್ಯೋಗ ಹೊಂದಿ ತನ್ನ ಮಗನೊಂದಿಗೆ ಬದುಕು ಕಟ್ಟಿಕೊಂಡಿರುವ ಹೆಣ್ಣು ಮಗಳು ಸಂಬಂಧಿಕರೊಂದಿಗೆ ಹೋಗಿದ್ದ ಪ್ರವಾಸದಲ್ಲಿ ತನಗೆ ಅನುಕೂಲಕರವಾದ ಸಭ್ಯ ಬಟ್ಟೆ ಧರಿಸಿದಾಗ್ಯ್ಯೂ ಸ್ವತಹ ಒಡಹುಟ್ಟಿದವರೇ ಹೀಯಾಳಿಸಿ ಮಾತನಾಡಿದ್ದು.ಘಟನೆ ನಾಲ್ಕು…. ಗಂಡ ಸತ್ರು ಆಕೆಯ ಸೊಕ್ಕು ಅಡಗಿಲ್ಲ…ಉರೀತಾಳೆ ಎಂದು ಆಕೆಯ ಆತ್ಮಾಭಿಮಾನವನ್ನು ಸೊಕ್ಕೆಂದು ಪರಿಗಣಿಸಿದ್ದು.ಒಂದೇ ಎರಡೇ ಇಂಥ ನೂರು ಸಾವಿರ ಉದಾಹರಣೆಗಳು ಈ ಸಮಾಜದಲ್ಲಿ ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳು ಅನುಭವಿಸುವುದನ್ನು ಕಾಣುತ್ತೇವೆ.ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ್ರು ಎಂಬ ಘನಂದಾರಿ ಕೆಲಸ ಶತಶತಮಾನಗಳಿಂದ ಭಾರತ ದೇಶದಲ್ಲಿ…
ಭೂಮಾಫಿಯಾ ಪ್ರಕರಣದ ತನಿಖೆ ಸಿ.ಓ.ಡಿಗೆ ವಹಿಸುವಂತೆ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ವಿಜಯಪುರ: ನಗರ ಮತ್ತು ಜಿಲ್ಲೆಯಲ್ಲಿ ನಕಲಿ ಭೂಧಾಖಲೆ ಸೃಷ್ಟಿಸಿ ಜನರನ್ನು ವಂಚಿಸುತ್ತಿರುವ ಭೂಮಾಫಿಯಾ ಮಟ್ಟ ಹಾಕಲು ಈ ಪ್ರಕರಣದ ಸಮಗ್ರ ತನಿಖೆಯನ್ನು ಹಾಕಲು ಸಿ.ಓ.ಡಿಗೆ ವಹಿಸುವಂತೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು.ಜಿಲ್ಲೆಯಲ್ಲಿ ಭೂ ಅಕ್ರಮಗಳ ಕುರಿತು ಮುಖ್ಯಮಂತ್ರಿಗಳಿಗೆ ಸುದೀರ್ಘವಾಗಿ ವಿವರಿಸಿದರು.ವಿಜಯಪುರ ನಗರ ಮತ್ತು ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಭೂದಾಖಲೆ ಸೃಷ್ಟಿಸಿ ಜಿಲ್ಲೆಯಲ್ಲಿ ಭೂಮಿ ಮತ್ತು ನಿವೇಶನ ಮಾರಾಟ ಮಾಡಿರುವ ನೂರಾರು ಪ್ರಕರಣಗಳು ನಡೆದಿದ್ದು ಕೆಲವೊಂದು ಪ್ರಕರಣಗಳು ಮಾತ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇನ್ನೂ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ, ಇಂತಹ ಪ್ರಕರಣಗಳಿಗೆ ನೂರಾರು ಜನ ತಮ್ಮ ಜಮೀನು ಮತ್ತು ನಿವೇಶನಗಳು ಕಳೆದುಕೊಂಡಿದ್ದಾರೆ, ಖೋಟ್ಟಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣಗಳು ನನ್ನ ಗಮನಕ್ಕೆ ನಾನು ಹಲವಾರು ಬಾರಿ ಪತ್ರಿಕಾಗೋಷ್ಠಿ ಮುಖಾಂತರ ಹಾಗೂ ನಾನು ಪ್ರತ್ಯಕ್ಷವಾಗಿ ಹಿಂದಿನ ಸರ್ಕಾರದ ಗಮನಕ್ಕೂ ತಂದರೂ…
ವಿಜಯಪುರದಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅವಲೋಕನ ಸಭೆ ವಿಜಯಪುರ:`ನನಗೆ ಸೋಲು ಗೆಲುವು ಮುಖ್ಯವಲ್ಲ, ನನ್ನ ಕಾರ್ಯಕರ್ತ ಬಂಧುಗಳ ಸ್ಪೂರ್ತಿ ಸದಾ ನನ್ನ ಜೊತೆಗಿರುವುದೇ ನನ್ನ ಆಸ್ತಿ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ವಿಜಯಪುರದ ಗುರುದತ್ತ ಮಂಗಲ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಭಾರತೀಯ ಜನತಾ ಪಕ್ಷದ ಅವಲೋಕನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದಲಿತನಾದ ನಾನು ಈ ಮಟ್ಟಕ್ಕೆ ಬೆಳೆಯಲು ಕಾರ್ಯಕರ್ತ ಬಂಧುಗಳ ಅನುಗ್ರಹವೇ ಕಾರಣ, ರಾಜಕಾರಣದಲ್ಲಿ ಜಾತಿ ಎಂಬುದು ಮುಖ್ಯವಲ್ಲ, ಕೇವಲ ಒಂದೇ ಸಮಾಜದ ಬೆಂಬಲದಿಂದ ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಿಲ್ಲ, ಉತ್ತಮ ನಾಯಕನಾಗಿ ಬೆಳೆದು ಬರಲು ಎಲ್ಲ ಸಮಾಜಗಳ ಆಶೀರ್ವಾದ, ಬೆಂಬಲವೇ ಕಾರಣ ಎಂದರು.ನನ್ನ ಅನುಭವ ಚುನಾವಣೆಗಳಲ್ಲಿ ಪ್ರಸಕ್ತ ಚುನಾವಣೆ ಅತ್ಯಂತ ಮಹತ್ವದ್ದು, ಸಣ್ಣ ಪುಟ್ಟ ಗೊಂದಲಗಳು ಸಹ ಇಲ್ಲದೇ ಅತ್ಯಂತ ಸುಸೂತ್ರವಾಗಿ ನಡೆದ ಚುನಾವಣಾ ಇದಾಗಿದೆ, ಕಾರ್ಯಕರ್ತರ, ಮುಖಂಡರ ಶ್ರಮಕ್ಕೆ ನಾನು ಬೆಲೆ ಕಟ್ಟಲು ಸಾಧ್ಯವಿಲ್ಲ, ಈ ಋಣವನ್ನು ನಾನು ಜೀವನದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು…
ಕೇರಳದಲ್ಲಿ ತಂತ್ರಿಗಳಿಂದ “ಶತ್ರು ಭೈರವಿ ಯಾಗ” | 21ಮೇಕೆ, 3ಎಮ್ಮೆ, 21 ಕುರಿ & 5ಹಂದಿಗಳ ಬಲಿ | ಡಿಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ಬೆಂಗಳೂರು: ನನ್ನ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಕೇರಳದಲ್ಲಿ ತಂತ್ರಿಗಳನ್ನು ಬಳಸಿಕೊಂಡು “ಶತ್ರು ಭೈರವಿ ಯಾಗ” ಪ್ರಯೋಗ ನಡೆಸ ಲಾಗುತ್ತಿದೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ನಂಬಿರುವ ಶಕ್ತಿ, ದೇವರು ಹಾಗೂ ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.ಈ ಕುರಿತು ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಜತೆ ಗುರುವಾರ ಮಾತನಾಡಿದ ಶಿವಕುಮಾರ್ ಅವರು, ಕೇರಳದಲ್ಲಿ ನನ್ನ, ಮುಖ್ಯಮಂತ್ರಿಗಳ ಮತ್ತು ಕಾಂಗ್ರೆಸ್ ಸರ್ಕಾರದ ವಿರುದ್ಧ ಯಾಗ ಮಾಡಲಾಗುತ್ತಿದೆ. ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ “ರಾಜಕಂಟಕ”, “ಮಾರಣ ಮೋಹನ ಸ್ತಂಭನ” ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆ ಎಂಬ ವಿವರವನ್ನು ಈ ಯಾಗದಲ್ಲಿ ಪಾಲ್ಗೊಂಡವರೇ ನಮಗೆ ತಿಳಿಸಿದ್ದಾರೆ ಎಂದರು.ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ.…
ಮುದ್ದೇಬಿಹಾಳ: ಪಟ್ಟಣದ ಹೊರಪೇಟ ಗಲ್ಲಿಯಲ್ಲಿರುವ ಸಿದ್ಧಗಾಂಗಾ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಮೆ೩೧ ರಂದು ಬೆಳಿಗ್ಗೆ ೧೦ ಗಂಟೆಗೆ ವಿಶ್ವ ತಂಬಾಕು ನಿಷೇಧ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ.ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿದ್ಧಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ರವೀಂದ್ರಕುಮಾರ ಕಟ್ಟಿಮನಿ ಉದ್ಘಾಟಿಸುವರು, ಕಿರಿಯಶ್ರೇಣಿ ಸಿವಿಲ್ ನ್ಯಾಯಾಧೀಶ ಸಂಪತ್ತಕುಮಾರ ಬಳೂಲಗಿಡದ ಉಪಸ್ಥಿತಿಯಲ್ಲಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಅಧ್ಯಕ್ಷತೆ ವಹಿಸಲಿದ್ದು ಅತಿಥಿಗಳಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಾಗರಾಜ ಪೂಜಾರ ಮತ್ತು ಬಸವರಾಜ ಆಹೇರಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ತಹಶೀಲ್ದಾರ ಬಸವರಾಜ ನಾಗರಾಳ, ಪ್ರಭಾರ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್.ಕಲ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸತೀಶ ತಿವಾರಿ, ವಿ.ವಿ ಸಂಘದ ಅಧ್ಯಕ್ಷ ವಿ.ಎಸ್.ಮೇಟಿ, ಪ್ರಾಂಶುಪಾಲೆ ರಾಜಶ್ರೀ ಮೇಟಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ,…
