ಬಬಲೇಶ್ವರ: ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಮಕ್ಕಳಿಗೆ ಸೀಗುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕು ಎಂದು ವಿಜಯಪುರ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳಿದರು.
ಬಬಲೇಶ್ವರ ಪಟ್ಟಣದ ಸರ್ಕಾರಿ ಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವನ್ನು ಡೋಲು ಬಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶ ಅಭಿವೃದ್ಧಿ ಹೊಂದಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಸಾಂಕೇತಿಕವಾಗಿ ಎಲ್ಲ ಮಕ್ಕಳಿಗೆ ಫಲ ಪುಷ್ಪ, ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣವಲಯದ ಬಿಇಓ ಪ್ರಮೋಧಿನಿ ಬಳೋಲಮಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ ಮಂಗಳವೆಡೆ, ಮುಖ್ಯೋಪಾಧ್ಯಾಯ ಎಚ್.ವಿ.ಮಾಲಗಾರ, ಅಶೋಕ ಬೂದಿಹಾಳ, ಇಸಿಓ ಪ್ರಭು ಬಿರಾದಾರ, ಬಿಆರ್ಪಿ ಕುಲಕರ್ಣಿ, ವಿಜಯಲಕ್ಷ್ಮಿ ಪಾಟೀಲ ಇದ್ದರು.
ಸಿಹಿ ತಿನ್ನಿಸಿ ಮಕ್ಕಳಿಗೆ ಸ್ವಾಗತ: ತಿಕೋಟಾ ಪಟ್ಟಣದ ಸರ್ಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ತಿನ್ನಿಸುವ ಮೂಲಕ ಶಿಕ್ಷಣ ಸಂಯೋಜಕ ರವೀಂದ್ರ ಚಿಕ್ಕಮಠ ಹಾಗೂ ಜಿ.ಟಿ.ಕಾಗವಾಡ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಬೇಕು ಎಂದರು.
ಪಟ್ಟಣದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಟ್ಯಾಕ್ಟರ್ ಮೂಲಕ ದಾಖಲಾತಿ ಆಂದೋಲನ ಮಾಡಿದರು. ಶಾಲೆಯು ತಳಿರು ತೋರಣಗಳಿಂದ ಸಿಂಗಾರಗೊಂಡು ಮಕ್ಕಳನ್ನು ಶಾಲಾ ವಾತಾವರಣ ಆಕರ್ಷಿಸಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ವೈ.ಬಿ.ವಾಲಿಕಾರ, ವಿ.ಎಂ.ಸವನಳ್ಳಿ, ಸಿಆರ್ಪಿ ಸುಜಾತಾ ಬಾಗಲಕೋಟ, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

