ದೇವರಹಿಪ್ಪರಗಿ: ಪ್ರತಿಭಾವಂತ ಕ್ರೀಡಾಳುಗಳನ್ನು ಗುರುತಿಸಿ ಬೆಳೆಸುವುದರ ಮೂಲಕ ಕಾಲೇಜು ಸೇರಿದಂತೆ ಪಟ್ಟಣದಲ್ಲಿ ಕ್ರೀಡಾ ಮೌಲ್ಯವನ್ನು ಹೆಚ್ಚಿಸಿದ ಹಿರಿಮೆ ದೈಹಿಕ ಶಿಕ್ಷಣ ನಿರ್ದೇಶಕ ಅಶೋಕಕುಮಾರ ಜಾಧವ ಅವರದ್ದಾಗಿದೆ ಎಂದು ಪ್ರಾಂಶುಪಾಲ ಅಶೋಕ ಹೆಗಡೆ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎ.ಆರ್.ಜಾಧವ ಶುಕ್ರವಾರ ಸೇವಾನಿವೃತ್ತಿ ಹೊಂದಿದ ನಿಮಿತ್ಯ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿ ಮಾತನಾಡಿದರು. ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳನ್ನು ತಮ್ಮ ಕ್ರೀಡಾ ಚಟುವಟಿಕೆಗಳ ಮೂಲಕ ವಿಶ್ವವಿದ್ಯಾಲಯಕ್ಕೆ ಪರಿಚಯಿಸಿ ಕ್ರೀಡಾ ಸೇವೆ ಸಲ್ಲಿಸಿದ ನಿರ್ದೇಶಕರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ಅಧಿಕ್ಷಕ ಜಗನ್ನಾಥ ಸಜ್ಜನ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಪುತ್ರ ಜಾಲವಾದಿ, ಅತಿಥಿ ಉಪನ್ಯಾಸಕ ಭೀಮನಗೌಡ ಬಿರಾದಾರ ಮಾತನಾಡಿ, ಕ್ರೀಡಾಕ್ಷೇತ್ರಕ್ಕೆ ದೈಹಿಕ ಶಿಕ್ಷಣ ನಿರ್ದೇಶಕರು ನೀಡಿದ ಕೊಡುಗೆಯನ್ನು ಸ್ಮರಿಸಿ ಭಾವುಕರಾದರು.
ಸನ್ಮಾನಿತ ಎ.ಆರ್.ಜಾಧವ ಮಾತನಾಡಿ, ಸಾಧನೆ ಮಾಡಲೇಬೇಕು ಎಂಬ ಛಲದಿಂದ ಬಂದು ಇಲ್ಲಿ ಸಾಧನೆ ಮಾಡಿದ್ದೇನೆ. ಇದು ನನಗೆ ಅತ್ಯಂತ ತೃಪ್ತಿನೀಡಿದೆ. ಈವರೆಗಿನ ಕಾಲೇಜಿನ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ ಸಹಕಾರ ನೀಡಿದ ಉಪನ್ಯಾಸಕವೃಂದ, ಪಟ್ಟಣದ ಜನತೆ, ಮುಖ್ಯವಾಗಿ ವಿದ್ಯಾರ್ಥಿ ವೃಂದಕ್ಕೆ ಅಭಿನಂದನೆ ಸಲ್ಲಿಸಿದರು. ನಂತರ ದೇವರಹಿಪ್ಪರಗಿ ನಾಗರೀಕ ಬಳಗದ ವತಿಯಿಂದ ಅದ್ಧೂರಿಯಾಗಿ ಸನ್ಮಾನಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಎಸ್.ಕೆ.ಬಾಗಿ, ಸಹಾಯಕ ಕನ್ನಡ ಪ್ರಾಧ್ಯಾಪಕಿ ಪ್ರೇಮಕುಮಾರಿ, ಅತಿಥಿ ಉಪನ್ಯಾಸಕರಾದ ಮಹಾದೇವಪ್ಪ ಶಿವಶರಣರ, ಶಂಕರಗೌಡ ಗದಿಗೆಪ್ಪಗೌಡರ, ಗೋಪಾಲ ಚಕ್ರಸಾಲಿ, ಬಸವರಾಜ ಹೊನಮಟ್ಟಿ, ಜ್ಯೋತಿ ಹೂಗಾರ, ಸರಿತಾ ಪಾಟೀಲ, ವಿಜಯಲಕ್ಷ್ಮಿ ಪಾಟೀಲ, ಯಾಸ್ಮೀನ್ ನದಾಫ್, ರಾಜೇಶ್ವರಿ, ಯಾಸ್ಮೀನ್ ಗಿರಗಾಂವ, ಪದ್ಮಜಾ ಬೆಳ್ಳಿಕಟ್ಟಿ, ಶಾರದಾ ಸೋಮಾಪೂರ, ಮಂಜುನಾಥ ಮಾನೆ ಸೇರಿದಂತೆ ಭೋಧಕ, ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನೀಯರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

