Author: editor.udayarashmi@gmail.com

ವಿಜಯಪುರ: ಸಾರ್ವತ್ರಿಕ ಲೋಕಸಭೆ ಚುನಾವಣೆ -೨೦೨೪ ಪ್ರಯುಕ್ತ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಸಾರ್ವಜನಿಕರು ಪಡೆದಂತಹ ಪರವಾನಿಗೆ ಪಡೆದ ಶಸ್ತ್ರಾಸ್ತಗಳ ಠೇವಣಿ ಕುರಿತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಸ್ಕ್ರೀನಿಂಗ್ ಕಮಿಟಿ ರಚಿಸಲಾಗಿದೆ.ಸಾರ್ವಜನಿಕರು ಪರವಾನಿಗೆ ಪಡೆದ ಶಸ್ತ್ರಾಸ್ತಗಳ ಠೇವಣಿಯಿಂದ ವಿನಾಯತಿ ಪಡೆಯ ಬಯಸುವವರು ಮಾ.೨೫ ಒಳಗಾಗಿ ತಮ್ಮ ಮನವಿಗಳನ್ನು ಪೊಲೀಸ್ ಉಪಾಧೀಕ್ಷಕರ ಕಚೇರಿಗೆ ಮನವಿ ಸಲ್ಲಿಸಬಹುದಾಗಿದೆ. ಸಾರ್ವಜನಿಕರಿಂದ ಸ್ವಿಕೃತವಾದ ಮನವಿಗಳನ್ನು ಸ್ಕ್ರೀನಿಂಗ್ ಯಲ್ಲಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದ ದರಬಾರ ಹಾಗೂ ಲೋಯಾಲ ಕಾಲೇಜುಗಳಲ್ಲಿ ಸ್ಥಾಪಿಸಲಾಗಿರುವ ದ್ವಿತೀಯ ಪಿ ಯು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ಸೋಮವಾರದಂದು ಭೇಟಿ ನೀಡಿ ಪರೀಕ್ಷಾ ಕೇಂದ್ರಗಳ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.

Read More

ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಮುಸ್ಲಿಂ ವಸತಿ (ಆಂಗ್ಲ ಮಾಧ್ಯಮ) ಶಾಲೆ ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಗಳ ೨೦೨೪-೨೫ನೇ ಸಾಲಿನ ಶೈಕ್ಷಣಿಕ ವರ್ಷದ ೬ನೇ ತರಗತಿ ಪ್ರವೇಶಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಮಾ.೩೧ ರವರೆಗೆ ವಿಸ್ತರಿಸಲಾಗಿದೆ.ಅರ್ಜಿಯನ್ನು ಸೇವಾ ಸಿಂಧು ಪೋರ್ಟಲ್ website:https://sevasindhuservices.Karnataka.gov.inಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಗೆ ಶೇ.೭೫ರಷ್ಟ್ಟು ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳಿಗೆ ಶೇ.೨೫ರಷ್ಟು ಮೆರಿಟ್ ಅಥವಾ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುವುದು. ವಸತಿ ಶಾಲೆಗಳಲ್ಲಿ ಶೇ.೫೦ರಷ್ಟು ಹೆಣ್ಣು ಮಕ್ಕಳಿಗಾಗಿ ಮೀಸಲಿರಿಸಿದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ, ಉಚಿತ ಸಮವಸ್ತ್ರ, ಪಠ್ಯಪುಸ್ತಕ, ನೋಟ್‌ಬುಕ್, ಲೇಖನಿ ಸಾಮಗ್ರಿಗಳು, ಸ್ಕೂಲ್ ಬ್ಯಾಗ್ ಹಾಗೂ ಊಟ ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಮೌಲಾನಾ ಆಝಾಧ ಭವನ,…

Read More

ವಿಜಯಪುರ: ಇದೇ ಮಾ.೨೫ರಿಂದ ಏ.೬ ರವರೆಗೆ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ನಡೆಯಲಿದ್ದು, ವ್ಯವಸ್ಥಿತ ಹಾಗೂ ಸೂಸೂತ್ರವಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಸೋಮವಾರ ನಗರದ ಕಂದಗಲ್ ಹಣಮಂತರಾಯ ರಂಗಮಂದಿರದಲ್ಲಿ ನಡೆದ ಎಸ್‌ಎಸ್ ಎಲ್ ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರುಜಿಲ್ಲೆಯಲ್ಲಿ ೧೨೭ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು ೪೧,೭೪೯ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸುವ ಕಾರ್ಯವಾಗಬೇಕು. ಪರೀಕ್ಷೆಯ ವೇಳೆ ಯಾವ ಲೋಪವಾಗದಂತೆ ಹಾಗೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಹಂತದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನೊಳಗೊಂಡ ೮ ಜಿಲ್ಲಾ ಮಟ್ಟದ ಜಾಗೃತದಳ, ತಾಲೂಕು ಮಟ್ಟದಲ್ಲಿ ಪ್ರತಿ ತಾಲೂಕಿಗೂ ೩ ಜಾಗೃತದಳ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಯಾವುದೇ ಅಧಿಕಾರಿ ಅಥವಾ. ಸಿಬ್ಬಂದಿ ಮೊಬೈಲ್ ಪೋನ್ ತರುವುದನ್ನು ಹಾಗೂ ಬಳಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳು ಪರೀಕ್ಷೆ ಅವಧಿಯಲ್ಲಿ…

Read More

ವಿಜಯಪುರ: ಜಿಲ್ಲಾ ಅಧ್ಯಕ್ಷರ ಸೂಚನೆ ಮೇರೆಗೆ ಬಿಜೆಪಿ ನಗರ ಮಂಡಲದ ಓಬಿಸಿ ಮೋರ್ಚಾ, ಅಲ್ಪಸಂಖ್ಯಾತರ ಮೋರ್ಚಾ, ರೈತ ಮೋರ್ಚಾ, ಮಹಿಳಾ ಮೋರ್ಚಾಗೆ, ಈ ಕೆಳಕಂಡ ಮುಖಂಡರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ ಆದೇಶ ಹೊರಡಿಸಿದ್ದಾರೆ.ಹಿಂದುಳಿದ ವರ್ಗಗಳ ಮೋರ್ಚಾ:ಉಪಾಧ್ಯಕ್ಷರು ನೀತಿನಖಂಡಾಗಳೆ, ಭೀಮರಾಯ ಮಾಶ್ಯಾಳ, ಸಂಜು ಬಡಿಗೇರ (ಜೈ ಜನುಮಾನ ನಗರ), ಸತೀಶ ಅಗಸರ, ರಾಹುಲ ಪನಾಳಕರ, ಕಾರ್ಯದರ್ಶಿಗಳು ಪ್ರಭಾಕರ ಪೂಜಾರಿ, ಮಹಾರಾಜ ಕೋಟಗೊಂಡ, ಜಟ್ಟಿಂಗರಾಯ ಹುಲ್ಲೂರ, ನಾಗರಾಜ ನಿಂಬಾಳ, ಶ್ರೀಧರ ಮಹೀಂದ್ರಕರ, ಕೋಶಾಧ್ಯಕ್ಷರು ಧನಂಜಯ ನಿಮಾಗ್ರೆ.ಅಲ್ಪಸಂಖ್ಯಾತರ ಮೋರ್ಚಾ:ಉಪಾಧ್ಯಕ್ಷರು ಪಾರೀಶ ಶಿರಹಟ್ಟಿ, ಭರಮಣ್ಣ ಶೆಟ್ಟಿ, ಶೀತಲ ಮಹಾವೀರ ಪಾಟೀಲ, ಸಿಮೋನ್ ಗೌಡಲ್ಲರ್, ಕಾರ್ಯದರ್ಶಿಗಳು ಜಾನ್ಸನ್ ಗೌಡ್ಯಾಳರ, ಸಂಪತ್ ವಣಕುದರಿ, ಸನ್ನಿ ಪೋರವಾಲ, ಪ್ರಶಾಂತ ಕೇಶಿ, ಮಂಜುನಾಥ ಸೌದಿ, ಕೋಶಾಧ್ಯಕ್ಷರು ಅನೀಲ ಬಾಗೇವಾಡಿ.ಮಹಿಳಾ ಮೋರ್ಚಾ:ಉಪಾಧ್ಯಕ್ಷರು ಮೀನಾ ಕುಂದನಗಾರ, ಮೀತಾ ದೇಸಾಯಿ, ಮಂಗಲಾಬಾಯಿ ಚವ್ಹಾಣ, ಕಾವೇರಿ ದಯಾನಂದ ಸ್ವಾಮಿ, ರಶ್ಮೀ ಆಳಗಿ, ಕಾರ್ಯದರ್ಶಿಗಳು ಭಾರತಿ ತೇಲಿ, ವೈಶಾಲಿ ಅಗಸರ, ಶುಭಾಂಗಿ ಇಂಗಳೆ,…

Read More

ಸಿಂದಗಿಯ ಬ್ರಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಕವಿಗೋಷ್ಠಿ & ಕಾವ್ಯ ಕುಂಚ ಕಾರ್ಯಕ್ರಮ ವಿಜಯಪುರ: ಕಾವ್ಯ ಸಂಸಾರಕ್ಕೆ ಕವಿಯೇ ಬ್ರಹ್ಮ. ಅವನಿಗೆ ರುಚಿಸುವಂತೆ ಇಡೀ ವಿಶ್ವವನ್ನೇ ಬದಲಿಸುವವನೇ ಕವಿ ಎಂದು ಆದರ್ಶ ವಿದ್ಯಾಲಯದ ಪ್ರಾಚಾರ್ಯ ಶಿವಪ್ಪಗೌಡ ಬಿರಾದಾರ ಹೇಳಿದರು.ಸಿಂದಗಿಯ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ 88ನೇ ತ್ರಿಮೂರ್ತಿ ಶಿವ ಜಯಂತಿ ಹಾಗೂ ಮಹಾಶಿವರಾತ್ರಿ ಪ್ರಯುಕ್ತ ಹಮ್ಮಿಕೊಂಡ ಶಿವಸ್ಮೃತಿ ಕವಿಗೋಷ್ಠಿ ಹಾಗೂ ಕಾವ್ಯ ಕುಂಚ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾವ್ಯ ಹುಟ್ಟಲು ಮುಖ್ಯ ಕಾರಣ ಪ್ರತಿಭೆ, ಇದೇ ಕಾವ್ಯದ ಬೀಜ. ಕಾವ್ಯ ಗಂಗೋತ್ರಿ ಇದು ಕವಿಯಲ್ಲಿರುವ ವಿಶಿಷ್ಟ ಶಕ್ತಿ, ಹೊಳಪು ತೇಜಸ್ಸುಮಯವಾಗಿದೆ ಎಂದರು.ಕಾವ್ಯವು ಸತತ ಅಧ್ಯಯನದ ಮೂಲಕ ರಚನೆಯಾಗುತ್ತದೆ. ಆಗ ಕವಿಯು ಚೇತನವನ್ನು ಅಚೇತನವನ್ನಾಗಿ, ಅಚೇತನವನ್ನು ಸಚೇತನವನ್ನಾಗಿ ಮಾಡಬಲ್ಲ ಕವಿಗೆ ವರ್ತಮಾನ, ಭೂತ, ಭವಿಷತ್ತನ್ನು ತೋರುವ ಸಾಮರ್ಥ್ಯವಿರಬೇಕು ಎಂದರು.ಅತಿಥಿಯಾಗಿ ಎಚ್ ಜಿ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಮಾತನಾಡಿದರು.ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪವಿತ್ರಾಜಿ ಸಾನಿಧ್ಯ ವಹಿಸಿದ್ದರುಈ ಸಂದರ್ಭದಲ್ಲಿ ನಡೆದ ಕಾವ್ಯ ಕುಂಚ…

Read More

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಅಯುರ್ವೆದ ಮಹಾವಿದ್ಯಾಲಯಲ್ಲಿ ಕಿಡ್ನಿ ವೈಪಲ್ಯ ಮತ್ತು ಕಿಡ್ನಿ ಸಂಬಂದಿತ ಸಮಸ್ಯೆಗಳು ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಪ್ರಾರಂಭವಾಗಿದ್ದು ಮಾ. 20ರ ವರೆಗೆ ನಡೆಯಲಿದೆ.ಮೂತ್ರ ಕಡಿಮೆ ವಿಸರ್ಜನೆ, ರಕ್ತ ಹೀನತೆ, ರಕ್ತ ಒತ್ತಡ(ಹೈ ಬಿಪಿ), ಧಿರ್ಘ ಕಾಲಿನ ಕಿಡ್ನಿ ವೈಫಲ್ಯ , ಹೈ ಕ್ರೀಯಾಟಿನಿನ್ ಲೆವೆಲ್ಸ, ವಾಂತಿ, ಪಾದ ಉಜ್ಜುವಿಕೆ, ಸಕ್ಕರೆ ಕಾಯಿಲೆಯಿಂದ ಕಿಡ್ನಿ ವೈಪಲ್ಯ , ಈ ರೀತಿಯ ಲಕ್ಷಣಗಳು, ತೊಂದರೆಗಳು ಹೊಂದಿರುವವರು ಶಿಬಿರದಲ್ಲಿ ತಪಾಸಣೆ ಮತ್ತು ಉಚಿತ ಚಿಕಿತ್ಸೆಯ ಸದುಪಯೊಗ ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೋಬೈಲ್.ನಂ.7406737888 7483278348, ಸಂಪರ್ಕಿಸಬಹುದಾಗಿದೆ.

Read More

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂ ಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಶಿ ಆನಂದ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ್ ಸೋನಾವಣೆ ಅವರು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಿಗೆ ದಿಡೀರ್ ಭೇಟಿ ನೀಡಿ ಚೆಕ್ ಪೋಸ್ಟಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು.ಕೊಂಕಣಗಾವ, ಶಿರಡೋಣ. ಕನಕನಾಳ ಹಾಗೂ ಧೂಳಖೆಡ್ ಚೆಕ್ ಪೋಸ್ಟಗಳಿಗೆ ಡಿ ಸಿ ಹಾಗೂ ತಂಡ ತೆರಳಿ ಕಾರು, ಟ್ರಕ್ ಸೇರಿದಂತೆ ವಿವಿಧ ವಾಹನಗಳನ್ನು ತಪಾಸಣೆ ಮಾಡಿದರು.

Read More

ವಿಜಯಪುರ: ನಮ್ಮ ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ.ವ್ಹಿ ಡಿ ಐಹೊಳ್ಳಿ ಅವರು ನಾಡಿನ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ನಮ್ಮ ನಾಡು, ಭಾಷೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ನಮ್ಮ ಭಾಷೆಯ ಶ್ರೀಮಂತಿಕೆ ಹೆಚ್ಚಲು ಅವರ ಸಾಹಿತ್ಯಿಕ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಹೇಳಿದರು.ಅವರು ಡಾ.ವ್ಹಿ ಡಿ ಐಹೊಳ್ಳಿ ಅವರ ಮನೆಯಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಯುವ ಘಟಕದ ಗೌರವ ಸಲಹೆಗಾರ ಸಂತೋಷ ಬಂಡೆ ಮಾತನಾಡಿ, ಅನೇಕ ಕೃತಿಗಳನ್ನು ಸಂಪಾದಿಸಿ,ರಚಿಸಿದ ಅನುಭವ ಡಾ.ಐಹೊಳ್ಳಿ ಅವರದು. ಶರಣ ಸಾಹಿತ್ಯ, ಕಥೆ, ಕಾವ್ಯಗಳನ್ನು ಕೂಡ ರಚಿಸಿದ ಅವರು ಪ್ರಸ್ತುತ ವಚನಪಿತಾಮಹ ಡಾ. ಫ.ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಸಹ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ನಮಗೆಲ್ಲ ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ…

Read More

ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸನ್ನಿ ಗವಿಮಠ (ತ್ರಿಲೋಚನ) ಅವರನ್ನು ಆಯ್ಕೆ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಆರ್.ಆಲಗೂರ (ರಾಜು) ಆದೇಶ ಹೊರಡಿಸಿದ್ದಾರೆ.ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ನಾಯಕರ ಸಹಕಾರದೊಂದಿಗೆ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಗವಿಮಠ ಅವರಿಗೆ ಸೂಚಿಸಲಾಗಿದೆ.

Read More