ವಿಜಯಪುರ: ಎಸ್ಎಸ್ಎಲ್ಸಿ, ಪಿಯುಸಿ.ಪದವಿ ಪಾಸಾದ ವಿದ್ಯಾರ್ಥಿಗಳಿಗೆ ಮುಂದೇನು ಮಾಡುವುದು ಎಂಬ ಯಕ್ಷಪ್ರಶ್ನೆ ಕಾಡುತ್ತಿರುತ್ತದೆ. ಅವರಿಗೆ ವೃತ್ತಿ ಮಾರ್ಗದರ್ಶನ ತರಬೇತಿ ಅತ್ಯಗತ್ಯ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಯಲ್ಲಪ್ಪ ಈರಕಲ್ ನುಡಿದರು.
ನಗರದ ಆಶ್ರಮ ರಸ್ತೆಯ ಶ್ರೀ ಬಸವೇಶ್ವರ ದೇವಾಲಯ ಸಭಾಂಗಣದಲ್ಲಿ ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಏರ್ಪಡಿಸಿದ್ದ ‘ಬದಲಾವಣೆಯ ಹರಿಕಾರರಿಗೆ ಸಮಗ್ರ ವೃತ್ತಿ ಮಾರ್ಗದರ್ಶನ ತರಬೇತಿ’ ಕಾರ್ಯಕ್ರಮವನ್ನು ಜ್ಯೋತಿ ಪಜ್ವಲಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ತಂದೆ ತಾಯಿ ಪೋಷಕರು ಸರಕಾರಿ ನೌಕರಿ ಒಂದನ್ನೇ ಜೀವನದ ಉದ್ದೇಶ ಎಂದು ಭಾವಿಸದೇ ಜೀವನದಲ್ಲಿ ಅನೇಕ ವೃತ್ತಿ ಕೌಶಲ್ಯತೆ ಬೆಳೆಸಿಕೊಂಡು ಉತ್ತಮ ಜೀವನ ಸಾಗಿಸಬಹದು ಎಂಬುದನ್ನು ಮನಗಾಣಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ದಾನೇಶ ಅವಟಿ ಮಾತನಾಡಿ, ವಿದ್ಯಾರ್ಥಿ ಜೀವನ ಬದುಕಿನ ಸುವರ್ಣ ಕಾಲ. ಎಲ್ಲರೂ ಸರಕಾರಿ ನೌಕರಿಯ ಆಸೆ ಪಡದೆ ವಿವಿಧ ಕ್ಷೇತ್ರಗಳ ವೃತ್ತಿಯಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಸೇವಕ ಸಂಸ್ಥೆಯ ಸಂಯೋಜಕಿ ವಿಮಲಾಕ್ಷಿ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಜಿಲ್ಲಾ ಸಂಯೋಜಕಿ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚಿಲ್ಡ್ರನ್ ಆಫ್ ಇಂಡಿಯಾ ಫೌಂಡೇಶನ್ ಜಿಲ್ಲಾ ಸಂಯೋಜಕಿ ಶಾಂತಾ ಬ್ಯಾಲ್ಯಾ ಳ ಕಾರ್ಯಕ್ರಮ ಆಯೋಜಿಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕುಮಾರಿ ಅಕ್ಷತಾ ನಾವದಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಿಗೆ ವೃತ್ತಿ ತರಬೇತಿ ಮಾರ್ಗದರ್ಶನ ಅಗತ್ಯ :ಈರಕಲ್
Related Posts
Add A Comment

