ವಿಜಯಪುರ: ಶಿವಣಗಿ ಕ್ಲಸ್ಟರನ ಎಂ.ಪಿ.ಎಸ್ ಶಿವಣಗಿ ಶಾಲೆಯಲ್ಲಿ ವಿಜಯಪುರ ಗ್ರಾಮೀಣ ವಲಯದ ತಾಲ್ಲೂಕು ಹಂತದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶುಕ್ರವಾರ ಜರುಗಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಡಿ.ಮೋಸಲಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಶಾಲಾ ಪ್ರಾರಂಭೋತ್ಸವ ಕುರಿತು ಮಾತನಾಡಿದ ಅವರು ಈಗಾಗಲೇ ಹಿಂದಿನ ಎರಡು ದಿನ ಶಾಲಾ ಸ್ವಚ್ಛತೆಯ ಕಾರ್ಯ ಮುಗಿದಿದ್ದು ಇಂದಿನಿಂದ ಈ ವರ್ಷದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುತ್ತವೆ. ಶಾಲಾ ಕ್ರೋಢಿಕೃತ ವೇಳಾಪಟ್ಟಿ, ಅಂದಾಜು ಪತ್ರಿಕೆ, ತರಗತಿವಾರು ವೇಳಾಪತ್ರಿಕೆಗಳನ್ನು ತಯಾರು ಮಾಡಿಕೊಂಡು ಆರಂಭಿಕ ಚಟುವಟಿಕೆಗಳಾದ ನೈದಾನಿಕ ಪರೀಕ್ಷೆಯನ್ನು ತೆಗೆದುಕೊಂಡು ವಿಷಯವಾರು ಮಕ್ಕಳ ಕಲಿಕಾ ಮಟ್ಟವನ್ನು ಗುರುತಿಸಿ ಸಾಪಲ್ಯ ಪರೀಕ್ಷೆ ಮಾಡುವುದು. ಮನೆ ಮನೆ ಭೇಟಿ ನೀಡಿ ಯಾವುದೆ ಅರ್ಹ ಮಗು ಶಾಲಾ ದಾಖಲಾತಿಯಿಂದ ಹೊರಗುಳಿಯದಂತೆ ದಾಖಲಿಕರಣ ಮಾಡಿಕೊಳ್ಳಲು ತಿಳಿಸಿದರು.
ವರ್ಗವಾರು,ವಿಷಯವಾರು ಕಲಿಕಾ ಫಲಗಳನ್ನು ಗುರುತಿಸಿ, ಪಟ್ಟಿಮಾಡಿ ಅದಕ್ಕೆ ಅನುಗುಣವಾಗಿ ನಿರಂತರ ಬೋಧನೆಯಲ್ಲಿ ತೊಡಗಿ ಮಕ್ಕಳ ಕಲಿಕಾ ಮಟ್ಟವನ್ನು ನಿಂತರವಾಗಿ ಸುಧಾರಿಸಲು ತಿಳಿಸಿದರು. ಪ್ರಸಕ್ತ ಶೈಕ್ಷಣಿಕ ವರ್ಷವನ್ನು ಕಲಿಕಾ ಬಲವರ್ಧನೆಯ ವರ್ಷವೆಂದು ಇಲಾಖೆ ಘೋಸಿಸಿದ್ದು ಆ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವಂತೆ ಸಲಹೆ ನೀಡಿದರು. ಜೊತೆಗೆ ಆರಂಭಿಕ ಹಂತದಿಂದಲೂ ಭಾಷೆ ಮತ್ತು ಗಣಿತ ವಿಷಯಕ್ಕೆ ಸಂಬಂದಪಟ್ಟ ಮಕ್ಕಳ ಎಪ್ಎಲ್ಎನ್ ಮಟ್ಟವನ್ನು ಉತ್ತಮಪಡಿಸುವತ್ತ ಶಿಕ್ಷಕರು ಸದಾ ಪ್ರಯತ್ನಪಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಜಿ.ಎಸ್ , ಎಂ.ಪಿ.ಎಸ್, ಯುಜಿಎಸ್, ಯುಬಿಎಚ್ ಪಿ ಎಸ್ ಶಿವಣಗಿ, ಎಲ್. ಪಿ.ಎಸ್ ಶಿವಣಗಿ ಎಚ್ಕೆ ಶಾಲೆಯ ಮಕ್ಕಳು, ಸಿಬ್ಬಂದಿ, ಎಸ್ಡಿಎಂಸಿ ಪದಾಧಿಕಾರಿಗಳ, ತಾಲ್ಲೂಕು ದೈಹಿಕ ಪರಿವೀಕ್ಷಕ ಸಿ.ಎಂ. ಕೋರೆ, ಶಿವಣಗಿ ಕ್ಲಸ್ಟರನ ಸಿ.ಆರ್. ಪಿ ಗಳಾದ ಎಂ.ಎಸ್ ಗುಬಚಿ, ರೂಗಿ, ಶಿಕ್ಷಕರ ಪ್ರತಿನಿಧಿ ವಾಸೀಮ್ ಚಟ್ಟರಕಿ ಭಾಗವಹಿಸಿದ್ದರು.
ಎಂ.ಆಯ್ ಕಾಗವಾಡ ನಿರೂಪಿಸಿದರು. ಮುಖ್ಯ ಗುರುಮಾತೆ ಶ್ರೀಮತಿ ಎಸ್. ಆಯ್ ಹಕೀಮ ಅವರು ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

