Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ರಾತ್ರಿ ೧೦ ಗಂಟೆಯ ನಂತರ ಆರಂಭವಾದ ರೋಹಿಣಿ ಮಳೆ ನಿರಂತರವಾಗಿ ಕೆಲ ಗಂಟೆಗಳ ಕಾಲ ಸುರಿಯಿತು. ಈ ಮಳೆಯಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.ಕಳೆದ ವರ್ಷ ಮಳೆ ಇಲ್ಲದೇ ಸರಿಯಾಗಿ ಬಿತ್ತನೆಯಾಗಿರಲಿಲ್ಲ. ಈಗ ಉತ್ತಮ ಮಳೆಯಾಗಿರುವದರಿಂದ ಬಿತ್ತನೆ ಚಟುವಟಿಕೆಗಳು ಆರಂಭವಾಗುತ್ತವೆ.ಪಟ್ಟಣದ ಹಿರಿಯರಾದ ಬಸವರಾಜ ಹಾರಿವಾಳ ಅವರನ್ನು ಮಾತನಾಡಿಸಿದಾಗ, ನಿನ್ನೆ ರಾತ್ರಿ ಸುರಿದ ರೋಹಿಣಿ ಮಳೆಯು ಉತ್ತಮವಾಗಿದೆ. ಇದು ಬಿತ್ತನೆ ಮಾಡಲು ಬೇಕಾದ ಮಳೆ ನೀಡಿದೆ. ಇಂದು ಜೂ.೭ ರಂದು ಮೃಗಾ ಮಳೆ ಕೂಡುತ್ತದೆ. ಗುರುವಾರ ಮಧ್ಯಾನ್ಹವೂ ಪಟ್ಟಣ ಹೊರವಲಯದ ಸುತ್ತಮುತ್ತ ಮೃಗಾ ಮಳೆಯು ಸಹ ಆಗಿದೆ. ಇದರಿಂದಾಗಿ ಬಿತ್ತನೆ ಮಾಡಲು ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು. ಈ ವರ್ಷ ಮಳೆಯಾಗುವ ಭರವಸೆ ಮೂಡಿದೆ. ಎಲ್ಲ ರೈತ ಬಾಂಧವರು ಬಿತ್ತನೆ ಮಾಡಲು ಮುಂದಾಗುತ್ತಾರೆ. ಉತ್ತಮ ಮಳೆಯಾಗಿರುವದರಿಂದ ನಮಗೆ ಹರ್ಷ ಉಂಟು ಮಾಡಿದೆ ಎಂದರು.ನಿನ್ನೆ ರಾತ್ರಿ ಸುರಿದ ಮಳೆಯಿಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಎರಡು ಮನೆ ಭಾಗಶಃ, ಯರನಾಳ…
ವಿಜಯಪುರ: ತಾಲ್ಲೂಕಿನ ಹೊನಗನಹಳ್ಳಿಯ ಕೊರಮ್ಮದೇವಿ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರು ವಿಧ್ಯಾರ್ಥಿಗಳು ಮುರಾರ್ಜಿ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ.ಚೇತನ, ಬ್ರಹ್ಮಕುಮಾರಿ, ಲಾವಣ್ಯ, ತನುಶ್ರೀ, ಮಹಾದೇವಿ, ಕಾರ್ತಿಕ್ ಆಯ್ಕೆಯಾದ ವಿಧ್ಯಾರ್ಥಿಗಳಾಗಿದ್ದಾರೆ. ಮುಖ್ಯೋಪಾಧ್ಯಾಯಿನಿ ಎಸ್.ಆರ್.ಮೇಡೆಗಾರ, ಸಹಶಿಕ್ಷಕ ಸಿ.ವಿ.ರಾಠೋಡ ಅವರ ಶ್ರಮದಿಂದ ಆಯ್ಕೆಯಾಗಿದ್ದು ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರು, ಪಾಲಕರು ಶಿಕ್ಷಕರಿಗೆ ಹಾಗೂ ಆಯ್ಕೆಯಾದ ಮಕ್ಕಳಿಗೆ ಶುಭ ಹಾರೈಸಿದ್ದಾರೆ.
ತಿಕೋಟಾ: ಗ್ರಾಮೀಣ ಭಾಗದಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಒಳ್ಳೆಯ ಸೌಕರ್ಯ ಒದಗಿಸಿದರೆ ಉತ್ತಮ ಸಾಧನೆ ಮಾಡುತ್ತಾರೆ ಎಂದು ಮುಂಬೈ ಮೂಲದ ತಪಸಿದಾಸ, ತುಳಸದಾಸ ಮತ್ತು ವೃಜದಾಸ ಚಾರಿಟೇಬಲ್ ಟ್ರಸ್ಟನ ಸಂಯೋಜಕ ವಿಶ್ವನಾಥ ಸಿಂದಗಿ ಹೇಳಿದರು.ತಾಲ್ಲೂಕಿನ ಬಾಬಾನಗರ ಗ್ರಾಮದ ಹಿರೇಕುರುಬರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸೋಮದೇವರಹಟ್ಟಿ ಗ್ರಾಮದ ಪೂಜೇರಿ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಟ್ರಸ್ಟ ವತಿಯಿಂದ ಶುಕ್ರವಾರ ಮಕ್ಕಳಿಗೆ ನೋಟಬುಕ್ ವಿತರಿಸಿ ಅವರು ಮಾತನಾಡಿದರು.ಮಕ್ಕಳು ಉತ್ತಮವಾಗಿ ಶಿಕ್ಷಣ ಪಡೆದು ಶೈಕ್ಷಣಿಕವಾಗಿ ಮಾಡುವ ಸಾಧನೆಯೇ ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ ಎಂದರು.ಈ ಸಂದರ್ಭದಲ್ಲಿ ಎಸ್.ಎನ್.ತಡಲಗಿ, ಎಸ್.ಎಂ.ಕಠಾರೆ, ಎಸ್.ವೈ.ಬಾಗೆನವರ, ಎಚ್.ಎಂ.ಕಾಲೆಬಾಗ್, ಎಸ್.ಐ.ಬಾಗಲಕೋಟ, ಎಸ್.ಎಸ್.ಜಂಗಮಶೆಟ್ಟಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಮತ್ತು ಮಕ್ಕಳು ಇದ್ದರು.
ದೇವರಹಿಪ್ಪರಗಿ: ತಾಲ್ಲೂಕು ಕೇಂದ್ರಗಳಾದ ದೇವರಹಿಪ್ಪರಗಿ-ಇಂಡಿ ಪಟ್ಟಣಗಳ ನಡುವೆ ಬಸ್‌ಗಳು ನಿಗದಿತ ಸಮಯಕ್ಕೆ ಬಾರದ ಹಿನ್ನೆಲೆ ಹಾಗೂ ಬಸ್‌ಗಳ ಕೊರತೆಯಿಂದ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಶಾಲಾ ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೇವೆ ಆರಂಭಿಸುವಂತೆ ವಿವಿಧ ಗ್ರಾಮಗಳ ಮಕ್ಕಳ ಪಾಲಕರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.ತಾಲ್ಲೂಕು ಕೇಂದ್ರ ದೇವರಹಿಪ್ಪರಗಿಯಿಂದ ಈ ಮುಂಚೆ ಸಿಂದಗಿ ಘಟಕದಿಂದ ದೇವರಹಿಪ್ಪರಗಿ ಮಾರ್ಗವಾಗಿ ಇಂಡಿ ಪಟ್ಟಣಕ್ಕೆ ನಿತ್ಯ ೨ ಬಸ್ಸುಗಳು ಸಂಚರಿಸುತ್ತಿದ್ದವು. ಈಗ ಸಿಂದಗಿ ಘಟಕದಿಂದ ಸಂಚರಿಸುತ್ತಿರುವ ಬಸ್‌ಗಳು ನಿಗದಿತ ಸಮಯಕ್ಕೆ ಸರಿಯಾಗಿ ಬಾರದೇ ಇರುವುದು. ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಮುದ್ದೇಬಿಹಾಳ ಘಟಕದ ಸೋಲ್ಲಾಪೂರ ಬಸ್‌ಗಳು ಬಂದಾದ ಕಾರಣಗಳಿಂದಾಗಿ ಇಂಡಿ ಸಾರಿಗೆ ಘಟಕದ ಬಸ್‌ಗಳು ತುಂಬಿ ತುಳುಕುವಂತಾಗಿವೆ. ಹೀಗಾಗಿ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಹಿಂದೆ ಮುದ್ದೇಬಿಹಾಳ ಘಟಕದಿಂದ ಸೋಲ್ಲಾಪೂರಕ್ಕೆ ತೆರಳುತ್ತಿದ್ದ ಬಸ್‌ಗಳನ್ನು ಪುನಃ ಮೊದಲಿನ ಸಮಯಕ್ಕೆ ಆರಂಭಿಸಬೇಕು.ಇನ್ನು ಸಂಜೆ ಆರು ಗಂಟೆಯ ಸುರಪುರ-ಮುಂಬಯಿ ಬಸ್ ನಂತರ…
ಉತ್ತಮ ಮಳೆ | ಹುರುಪಿನಿಂದ ಕೃಷಿ ಚಟುವಟಿಕೆ ಚಾಲನೆ | ತೊಗರಿ ಬಿತ್ತನೆಗೆ ಅನುಕೂಲ ಇಂಡಿ: ತಾಲೂಕಿನ ನಾನಾ ಕಡೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಸುರಿದ ಮೃಗಶಿರಾ ಮಳೆ ಮುಂಗಾರು ಬಿತ್ತನೆಯ ಭರವಸೆ ಹೆಚ್ಚಿಸಿದ್ದು ರೈತರು ಹುರುಪಿನಿಂದ ಬಿತ್ತನೆಯ ಪೂರಕ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದಾರೆ.ಎಲ್ಲ ಕಡೆ ಉತ್ತಮ ಮಳೆ ಆಗುತ್ತಿರುವದರಿಂದ ಬಿತ್ತನೆ ಪ್ರಮಾಣ ಕಳೆದ ವರ್ಷಕ್ಕಿಂತ ಹೆಚ್ಚಳವಾಗುವ ನಿರೀಕ್ಷೆ ಹುಟ್ಟಿಸಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದ್ದಾರೆ.ಇಂಡಿ ತಾಲೂಕಿನಲ್ಲಿ ಶುಕ್ರವಾರ ಇಂಡಿಯಲ್ಲಿ ೧೪.೮ ಮಿ.ಮಿ, ನಾದ ಬಿಕೆ ೨೮ ಮಿ.ಮಿ,ಅಗರಖೇಡ ೧೦.೩ ಮಿ.ಮಿ, ಹೋರ್ತಿ ೧೧.೨ ಮಿ.ಮಿ, ಝಳಕಿ ೫೮.೪ ಮಿ.ಮಿ ಮಳೆಯಾಗಿದೆ.ಇಂಡಿ,ಅಗರಖೇಡ, ಸಾಲೋಟಗಿ,ತಾಂಬಾ, ಝಳಕಿ,ಹೊರ್ತಿನಾದ ಬಿಕೆ ಸೇರಿದಂತೆ ಅನೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದ್ದು ತೊಗರಿ, ಮೆಕ್ಕೆಜೋಳ ಬಿತ್ತನೆ ಸಿದ್ದತೆಗೆ ಅನುಕೂಲವಾಗಿದೆ. ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ ತೊಗರಿ, ಮೆಕ್ಕೆಜೋಳ, ರಸಗೊಬ್ಬರ ವಿತರಣೆ ಆರಂಭಿಸಿದೆ.ಕಳೆದ ವರ್ಷ ಇದೇ ಹೊತ್ತಿಗೆ ೩.೯೨ ರಷ್ಟು ಬಿತ್ತನೆ ಯಾಗಿತ್ತು,…
ಮುದ್ದೇಬಿಹಾಳ: ವಿಜಯಪುರ ಜಿಲ್ಲೆಯ ಸಂಸದ ರಮೇಶ ಜಿಗಜಿಣಗಿಯವರಿಗೆ ನೂತನ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಮಾಜಿ ಭೂ ನ್ಯಾಯ ಮಂಡಳಿ ಸದಸ್ಯ ಎಸ್.ಎಚ್.ಲೋಟಗೇರಿ ವಕೀಲರು ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಒತ್ತಾಯಿಸಿದರು.ಈ ಕುರಿತು ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಗಜಿಣಗಿಯವರು ೨ ಬಾರಿ ಶಾಸಕರಾಗಿ ಹಾಗೂ ೭ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮತ್ತು ಹೈದರಾಬಾದ ಕರ್ನಾಟಕ ಮತ್ತು ಮುಂಬೈ ಕರ್ನಾಟಕದಲ್ಲಿ ಏಕೈಕ ದಲಿತ ವ್ಯಕ್ತಿ. ಸಾರ್ವಜನಿಕ ಜೀವನದಲ್ಲಿ ಸರಳವಾಗಿ ಬೆರೆಯುವ, ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರಿಗೆ ಸಾಕಷ್ಟು ಅನುಭವವಿದೆ. ರಾಜಕೀಯ ರಂಗದಲ್ಲಿ ೧ ಕಪ್ಪು ಚುಕ್ಕೆ ಇಲ್ಲದ, ಅಜಾತ ಶತ್ರು ಎನ್ನಿಸಿಕೊಂಡ ಇವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.ಭಾಜಪಾ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಹೇಮರೆಡ್ಡಿ ಮೇಟಿ ಮಾತನಾಡಿ, ಜಿಗಜಿಣಗಿಯವರಿಗೆ ಸಚಿವ ಸ್ಥಾನ ನೀಡಿದಲ್ಲಿ ಅಖಂಡ ವಿಜಯಪುರ ಜಿಲ್ಲೆ ಆದ್ಯತೆ ಕೊಟ್ಟಂತಾಗುತ್ತದೆ. ಜಿಲ್ಲೆಗೆ ಸಾಕಷ್ಟು ಅನುದಾನ ತಂದ…
ತಿಕೋಟಾ: ಅನೇಕ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳ ಕೊರತೆಯು ಮಹಿಳಾ ವಿದ್ಯಾರ್ಥಿಗಳ ಮೇಲೆ ಅಸಮಾನವಾಗಿ ಪರಿಣಾಮ ಬಿರುತ್ತಿದೆ. ಇದರಿಂದ ಆರೋಗ್ಯ ಘನತೆ ಮತ್ತು ಶೈಕ್ಷಣಿಕ ಅವಕಾಶಗಳಿಗೆ ದಕ್ಕೆ ತರುತ್ತಿದೆ ಎಂದು ಲಾಡಲಿ ಫೌಂಡೇಶನ ನೈರ್ಮಲ್ಯ ಅಭಿಯಾನದ ರಾಯಬಾರಿ ಕುಮಾರಿ ಶಿಫಾ ಜಮಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಲಾಡಲಿ ಫೌಂಡೇಶನ ವತಿಯಿಂದ ಅತ್ಯಾದುನಿಕ ತಂತ್ರಜ್ಞಾನದ ₹ 12 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ ಶೌಚಾಲಯದ ಅಡಿಗಲ್ಲು ಸಮಾರಂಭ ನೇರವರೆಸಿ ಮಾತನಾಡಿದರು.ನಮ್ಮ ಕೆಲಸ ಕೇವಲ ಶೌಚಾಲಯ ನಿರ್ಮಾಣ ಮಾತ್ರವಲ್ಲ ಪ್ರತಿ ವಿದ್ಯಾರ್ಥಿನಿಯರಿಗೆ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಉಜ್ವಲ ಭವಿಷ್ಯಕ್ಕಾಗಿ ಅಡಿಪಾಯವನ್ನು ನಿರ್ಮಿಸುವುದು. ನೈರ್ಮಲ್ಯ ಸುರಕ್ಷತೆ ಮತ್ತು ಹೆಣ್ಣು ಮಕ್ಕಳ ಹಕ್ಕುಗಳಿಗೆ ಗೌರವವನ್ನು ಉತ್ತೇಜಿಸುವ ಮೂಲಕ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳು ಅಭಿವೃದ್ಧಿ ಹೊಂದಲು ಸಮಾನ ಅವಕಾಶಗಳನ್ನು ಹೊಂದಿರುವ ಸಮಾನ ಸಮಾಜಕ್ಕೆ ನಾವು ದಾರಿ ಮಾಡಿಕೊಡುತ್ತಿದ್ದೇವೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಲಾಡಲಿ ಫೌಂಡೇಶನ್ ನಿರ್ದೇಶಕ ಡಾ.ಜಾವೀದ…
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”ವಿವೇಕಾನಂದ. ಎಚ್. ಕೆ. ಬೆಂಗಳೂರು 18 ನೆಯ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಅಂಕಿ ಸಂಖ್ಯೆಗಳು ಬಹುತೇಕ ಸ್ಪಷ್ಟವಾಗಿದೆ. ಈ ಸಂದರ್ಭದಲ್ಲಿ ಕೇವಲ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲ, ರಾಜಕೀಯ ಆಸಕ್ತಿಯ ಸಾಮಾನ್ಯ ಜನರು, ಸಾಕಷ್ಟು ಕುಟುಂಬಗಳಲ್ಲಿ, ಅಂಗಡಿ ಮುಗ್ಗಟ್ಟುಗಳಲ್ಲಿ, ಹೋಟೆಲ್, ಬಸ್ಸು, ರೈಲು, ವಿಮಾನಗಳಲ್ಲಿ, ಕೋರ್ಟು ಕಚೇರಿ ಆಸ್ಪತ್ರೆ ಪೊಲೀಸ್ ಸ್ಟೇಷನ್ ಗಳಲ್ಲಿ, ಕೂಲಿ, ಉದ್ಯಮಿ, ವ್ಯಾಪಾರಿ, ರೈತ ಎಲ್ಲರೂ ಈ ಬಗ್ಗೆ ತಮ್ಮದೇ ಆದ ಒಂದೊಂದು ಅಭಿಪ್ರಾಯಗಳನ್ನು, ವಿಶ್ಲೇಷಣೆಗಳನ್ನು ಮಾಡುತ್ತಲೇ ಇದ್ದಾರೆ. ಸೋಲು ಗೆಲುವುಗಳ ಕಾರಣಗಳ ಬಗ್ಗೆ ಚರ್ಚಿಸುತ್ತಿದ್ದಾರೆ.ಸಮೂಹ ಸಂಪರ್ಕ ಕ್ರಾಂತಿಯ ಪರಿಣಾಮ ಇದು ವ್ಯಾಪಕವಾಗಲು ಕಾರಣವಾಗಿದೆ.. ಈ ವಿಶ್ಲೇಷಣೆಗಳ ಸಂಕ್ಷಿಪ್ತ ಸಾರಾಂಶ ಇಲ್ಲಿ ಸರಳವಾಗಿ ಹೇಳುವ ಒಂದು ಪ್ರಯತ್ನ.. ಇದು ನರೇಂದ್ರ ಮೋದಿ ಅವರ ಐತಿಹಾಸಿಕ ಹ್ಯಾಟ್ರಿಕ್ ಗೆಲುವು, ಇದು ತಾಂತ್ರಿಕವಾಗಿ ಅಂಕಿ ಸಂಖ್ಯೆಗಳ ಎನ್.ಡಿಎ ಗೆಲುವು, ಇದು ಬಿಜೆಪಿಯ ಸೈದ್ಧಾಂತಿಕ ತತ್ವಕ್ಕೆ ಸಿಕ್ಕಿದ ಮತ್ತೊಂದು ಗೆಲುವು, ಇದು ಭಾರತ ಬ್ರಾಂಡ್…
ವಿಜಯಪುರ: ಸಿರಿಗೆರೆ ತರಳಬಾಳು ಕಲಾ ಸಂಘದ ವತಿಯಿಂದ ತರಳುಬಾಳು ಜಗದ್ಗುರು 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ “ಶರಣ ಸಂಕುಲ” ನೃತ್ಯರೂಪಕ ಕಾರ್ಯಕ್ರಮ ದಿ.15 ಶನಿವಾರ ಸಂ.6.30ಗಂಟೆಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಜರುಗಲಿದೆ.ಕಳೆದ 25 ವರ್ಷಗಳಿಂದ ದೇಶದೆಲ್ಲೆಡೆ 12 ನೇ ಶತಮಾನದ ಶಿವಶರಣರ ತತ್ವಗಳನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ನೃತ್ಯ, ಸಂಗೀತ ಮತ್ತು ಅಭಿನಯಗಳ ಮೂಲಕ ಪ್ರದರ್ಶಿಸುವ ‘ಶರಣಸಂಕುಲ’ ಕಾರ್ಯಕ್ರಮ ಇದೀಗ ರಜತ ಮಹೋತ್ಸವ ಆಚರಿಸುತ್ತಿದೆ.ವಿಜಯಪುರದಲ್ಲಿ ಅನುಭವ ಮಂಟಪದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ವಿಶ್ವಬಂಧು ಮರುಳಸಿದ್ಧರು, ಅಕ್ಕಮಹಾದೇವಿಗೆ ದೀಕ್ಷೆ ಕೊಡುವ ಹರಳಯ್ಯ, ನುಲಿಯ ಚಂದಯ್ಯ, ಮೋಳಿಗೆ ಮಾರಯ್ಯ ಅವರ ಬದುಕಿನ ಸಾಧನೆಯನ್ನು ‘ಶರಣ ಸಂಕುಲ’ ಕಾರ್ಯಕ್ರಮದ ಮೂಲಕ ಸಾದರಪಡಿಸುತ್ತಿದ್ದಾರೆ. ಅಲ್ಲದೇ, ಸಿರಿಗೆರೆ ತರಳಬಾಳು ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಂದ “ಮಲ್ಲ ಕಂಬ” ಹಾಗೂ “ಮಲ್ಲಿ ಹಗ್ಗ” ಸಾಹಸ ಕ್ರೀಡೆಗಳ ಪ್ರದರ್ಶನ ಏರ್ಪಾಡಾಗಿದೆ.ಅತ್ಯಂತ ವಿಶೇಷವಾಗಿರುವ ಈ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪಾಲಕರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಸಿರಿಗೆರೆ ತರಳಬಾಳು ಆಶ್ರಮದ ಭಕ್ತರಾಗಿರುವ ಹಣಮಂತ ಚಿಂಚಲಿ ಕೋರಿದ್ದಾರೆ.
