ತಿಕೋಟಾ: ಅನೇಕ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ನೈರ್ಮಲ್ಯ ಸೌಲಭ್ಯಗಳ ಕೊರತೆಯು ಮಹಿಳಾ ವಿದ್ಯಾರ್ಥಿಗಳ ಮೇಲೆ ಅಸಮಾನವಾಗಿ ಪರಿಣಾಮ ಬಿರುತ್ತಿದೆ. ಇದರಿಂದ ಆರೋಗ್ಯ ಘನತೆ ಮತ್ತು ಶೈಕ್ಷಣಿಕ ಅವಕಾಶಗಳಿಗೆ ದಕ್ಕೆ ತರುತ್ತಿದೆ ಎಂದು ಲಾಡಲಿ ಫೌಂಡೇಶನ ನೈರ್ಮಲ್ಯ ಅಭಿಯಾನದ ರಾಯಬಾರಿ ಕುಮಾರಿ ಶಿಫಾ ಜಮಾದಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಲಾಡಲಿ ಫೌಂಡೇಶನ ವತಿಯಿಂದ ಅತ್ಯಾದುನಿಕ ತಂತ್ರಜ್ಞಾನದ ₹ 12 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ ಶೌಚಾಲಯದ ಅಡಿಗಲ್ಲು ಸಮಾರಂಭ ನೇರವರೆಸಿ ಮಾತನಾಡಿದರು.
ನಮ್ಮ ಕೆಲಸ ಕೇವಲ ಶೌಚಾಲಯ ನಿರ್ಮಾಣ ಮಾತ್ರವಲ್ಲ ಪ್ರತಿ ವಿದ್ಯಾರ್ಥಿನಿಯರಿಗೆ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳುವ ಉಜ್ವಲ ಭವಿಷ್ಯಕ್ಕಾಗಿ ಅಡಿಪಾಯವನ್ನು ನಿರ್ಮಿಸುವುದು. ನೈರ್ಮಲ್ಯ ಸುರಕ್ಷತೆ ಮತ್ತು ಹೆಣ್ಣು ಮಕ್ಕಳ ಹಕ್ಕುಗಳಿಗೆ ಗೌರವವನ್ನು ಉತ್ತೇಜಿಸುವ ಮೂಲಕ ಲಿಂಗವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳು ಅಭಿವೃದ್ಧಿ ಹೊಂದಲು ಸಮಾನ ಅವಕಾಶಗಳನ್ನು ಹೊಂದಿರುವ ಸಮಾನ ಸಮಾಜಕ್ಕೆ ನಾವು ದಾರಿ ಮಾಡಿಕೊಡುತ್ತಿದ್ದೇವೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಾಡಲಿ ಫೌಂಡೇಶನ್ ನಿರ್ದೇಶಕ ಡಾ.ಜಾವೀದ ಜಮಾದಾರ ವಿಜಯಪುರ ಜಿಲ್ಲೆಯಲ್ಲಿ ₹ 2 ಕೊಟಿಗೂ ಅಧಿಕ ವೆಚ್ಚದಲ್ಲಿ ಜಿಲ್ಲೆಯಲ್ಲಿ ಮೊದಲನೆಯ ಹಂತದಲ್ಲಿ ವಿಜಯಪುರ ನಗರದಲ್ಲಿ ಮೂರು, ತಿಕೋಟಾ ಮೂರು, ಬಬಲೇಶ್ವರದಲ್ಲಿ ಮೂರು ₹ 12 ಲಕ್ಷದಲ್ಲಿ ಒಂದರಂತೆ ಹೊಸದಾಗಿ ಅತ್ಯಾಧುನಿಕ ಸೌಲಭ್ಯಗಳನ್ನು ಮತ್ತು ಎಐ ತಂತ್ರಜ್ಞಾನದಿಂದ ಸರಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಿದ್ದೇವೆ. ₹ 3 ಲಕ್ಷ ವೆಚ್ಚದಲ್ಲಿ 12 ಶಾಲೆಗಳಲ್ಲಿ ಶೌಚಾಲಯ ನವೀಕರಣ ಮಾಡುತ್ತಿದ್ದೇವೆ. ಎಲ್ಲಾ ಅನುದಾನ ಲಾಡಲಿ ಫೌಂಡೇಶನ ಟ್ರಸ್ಟ ನೀಡುತ್ತಿದೆ. ಜಿಲ್ಲೆಯಲ್ಲಿ ಎಐ ತಂತ್ರಜ್ಞಾನದಿಂದ ಸರಕಾರಿ ಶಾಲೆಗಳಲ್ಲಿ ನಿರ್ಮಿಸುತ್ತಿರುವ ಶೌಚಾಲಯ ದೇಶದಲ್ಲೆ ಪ್ರಥಮ ಜಿಲ್ಲೆ ವಿಜಯಪುರ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಐವತ್ತು ಸಸಿಗಳನ್ನು ನೆಡಲಾಯಿತು.
ಸಮಾರಂಭದಲ್ಲಿ ಎಸ್ಡಿಎಂಸಿ. ಅಧ್ಯಕ್ಷ ಆರ್.ಎನ್. ಶೇಖ್, ಮುಖ್ಯೋಧ್ಯಾಯಿನಿ ವಿದ್ಯಾವತಿ ಸವನಳ್ಳಿ, ಆಯ್.ಬಿ. ಜತ್ತಿ, ಆಬೀದ ಪಠಾಣ, ಬಿಬಿಆಸರಾ ಪಠಾಣ, ಲೇಪು ಕೊಣ್ಣೂರ, ವಿಠಲ ಮಾಳೆ, ಗುರಯ್ಯಾ ಕೊಳಲಮಠ, ಶಬ್ಬಿರ ಮುಲ್ಲಾ, ಐ.ಬಿ. ವಾಲಿಕಾರ, ಗ್ರಾಮದ ಪ್ರಮುಖರು ಮತ್ತು ಶಿಕ್ಷಕ ವೃಂದ ಶಾಲಾ ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಆರ್.ಕೆ. ಬಿಸನಾಳ ಸ್ವಾಗತಿಸಿದರು. ಎ.ಎಸ್. ಪೂಜಾರಿ ವಂದಿಸಿದರು. ಸುನೀತಾ ಭಜಂತ್ರಿ ಕಾರ್ಯಕ್ರಮ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

