ದೇವರಹಿಪ್ಪರಗಿ: ತಾಲ್ಲೂಕು ಕೇಂದ್ರಗಳಾದ ದೇವರಹಿಪ್ಪರಗಿ-ಇಂಡಿ ಪಟ್ಟಣಗಳ ನಡುವೆ ಬಸ್‌ಗಳು ನಿಗದಿತ ಸಮಯಕ್ಕೆ ಬಾರದ ಹಿನ್ನೆಲೆ ಹಾಗೂ ಬಸ್‌ಗಳ ಕೊರತೆಯಿಂದ ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು, ಶಾಲಾ ಮಕ್ಕಳ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ಸೇವೆ ಆರಂಭಿಸುವಂತೆ ವಿವಿಧ ಗ್ರಾಮಗಳ ಮಕ್ಕಳ ಪಾಲಕರು ಸಾರಿಗೆ ಇಲಾಖೆಯ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ತಾಲ್ಲೂಕು ಕೇಂದ್ರ ದೇವರಹಿಪ್ಪರಗಿಯಿಂದ ಈ ಮುಂಚೆ ಸಿಂದಗಿ ಘಟಕದಿಂದ ದೇವರಹಿಪ್ಪರಗಿ ಮಾರ್ಗವಾಗಿ ಇಂಡಿ ಪಟ್ಟಣಕ್ಕೆ ನಿತ್ಯ ೨ ಬಸ್ಸುಗಳು ಸಂಚರಿಸುತ್ತಿದ್ದವು. ಈಗ ಸಿಂದಗಿ ಘಟಕದಿಂದ ಸಂಚರಿಸುತ್ತಿರುವ ಬಸ್‌ಗಳು ನಿಗದಿತ ಸಮಯಕ್ಕೆ ಸರಿಯಾಗಿ ಬಾರದೇ ಇರುವುದು. ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಮುದ್ದೇಬಿಹಾಳ ಘಟಕದ ಸೋಲ್ಲಾಪೂರ ಬಸ್‌ಗಳು ಬಂದಾದ ಕಾರಣಗಳಿಂದಾಗಿ ಇಂಡಿ ಸಾರಿಗೆ ಘಟಕದ ಬಸ್‌ಗಳು ತುಂಬಿ ತುಳುಕುವಂತಾಗಿವೆ. ಹೀಗಾಗಿ ವಿದ್ಯಾರ್ಥಿಗಳು, ವೃದ್ಧರು ಸೇರಿದಂತೆ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಹಿಂದೆ ಮುದ್ದೇಬಿಹಾಳ ಘಟಕದಿಂದ ಸೋಲ್ಲಾಪೂರಕ್ಕೆ ತೆರಳುತ್ತಿದ್ದ ಬಸ್‌ಗಳನ್ನು ಪುನಃ ಮೊದಲಿನ ಸಮಯಕ್ಕೆ ಆರಂಭಿಸಬೇಕು.
ಇನ್ನು ಸಂಜೆ ಆರು ಗಂಟೆಯ ಸುರಪುರ-ಮುಂಬಯಿ ಬಸ್ ನಂತರ ಇಂಡಿ ಕಡೆ ತೆರಳುವ ಮಂತ್ರಾಲಯ ನಿಗದಿತ ಸಮಯಕ್ಕೆ ಬರುವಂತೆ ಮಾಡಬೇಕು. ಇದರಿಂದ ಶಾಲಾ ಮಕ್ಕಳಿಗೂ ಅನುಕೂಲವಾಗುತ್ತದೆ. ಮುಖ್ಯವಾಗಿ ಪ್ರಯಾಣಿಕರು, ವಿದ್ಯಾರ್ಥಿಗಳು, ನೌಕರರ ಅನುಕೂಲಕ್ಕಾಗಿ ಸಿಂದಗಿ ಘಟಕದಿಂದ ಈ ಮೊದಲಿನಂತೆ ದೇವರಹಿಪ್ಪರಗಿ ಮಾರ್ಗವಾಗಿ ಇಂಡಿಗೆ ಶಾಲೆ ಹಾಗೂ ಕಚೇರಿ ಸಮಯಕ್ಕೆ ಅನುಗುಣವಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಒದಗಿಸಿ ಅನುಕೂಲ ಕಲ್ಪಿಸಬೇಕು ಎಂದು ಕಾಂಗ್ರೆಸ್ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಯಿಕುಮಾರ ಬಿಸನಾಳ, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ, ಇಸ್ಮಾಯಿಲ್ ಜುಮನಾಳ (ಚಿಕ್ಕರೂಗಿ), ಬಸವರಾಜ ಕಲ್ಲೂರ, ವಿಜಯಕುಮಾರ ತಳವಾರ, ಸಾಯಬಣ್ಣ ನಾಗರಳ್ಳಿ (ಮುಳಸಾವಳಗಿ), ನಜೀರ್ ಕಲಕೇರಿ, ಸೇರಿದಂತೆ ಇಂಗಳಗಿ, ಹಿಟ್ಟಿನಹಳ್ಳಿ, ಗಂಗನಳ್ಳಿ ಗ್ರಾಮಗಳ ಪ್ರಯಾಣಿಕರು ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

