Author: editor.udayarashmi@gmail.com

ವಿಜಯಪುರ: ಓದಿನೊಂದಿಗೆ ಪಠ್ಯೇತರ ಚಟುವಟಿಕೆಯೂ ಮುಖ್ಯವಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಹೇಳಿದರು.ಅವರು, ಹಿಟ್ಟಿನಹಳ್ಳಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಳೊಂದಿಗೆ ಸಂವಾದ ನಡೆಸಿದರು. ಅಂತರಾಷ್ಟ್ರೀಯ ಕ್ರೀಡಾ ದಿನ ಅಂಗವಾಗಿ ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಗ್ರಂಥಾಲಯ, ಸರಕಾರಿ ಶಾಲೆ ಹಾಗೂ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಪಾಠದೊಂದಿಗೆ ಕ್ರೀಡೆಗಳಾದ ಚೆಸ್, ಕೇರಂ, ಬ್ಯಾಡ್ಮಿಂಟನ್, ವ್ಹಾಲಿಬಾಲ್, ಥ್ರೊಬಾಲ್, ಕಬಡ್ಡಿ, ಖೋ ಖೋ ಹಾಗೂ ಇತರೆ ಆಟಗಳನ್ನು ಪ್ರತಿನಿತ್ಯ ರೂಢಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಕಾಯ್ದುಕೊಳ್ಳಬಹುದು. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಆಟೋಟಗಳಲ್ಲಿ ಪಾಲ್ಗೊಳ್ಳಬೇಕು. ಶಾಲಾ ಮಕ್ಕಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ಓದಿನೊಂದಿಗೆ ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು, ಇದರಿಂದ ನಾಯಕತ್ವ ಗುಣ, ಕ್ರೀಡಾ ಮನೋಭಾವ ಬೆಳೆಯುತ್ತದೆ ಎಂದು ಮಕ್ಕಳಿಗೆ ಸಲಹೆ…

Read More

ವಿಜಯಪುರ: ಬಾಲಕಾರ್ಮಿಕತೆ ಅನಿಷ್ಠ ಪದ್ದತಿಯಾಗಿದ್ದು, ಇದರ ನಿರ್ಮೂಲನೆಗೆ ಪರಿಣಾಮಕಾರಿ ಜಾಗೃತಿ ಅಗತ್ಯವಾಗಿದ್ದು, ಎಲ್ಲಾ ಅಧಿಕಾರಿಗಳು, ಸಂಘ- ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಕರೆ ನೀಡಿದರು.ಬುಧವಾರ ನಗರದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಬಾಲಕಾರ್ಮಿಕ ಪದ್ಧತಿ ನಿಷೇಧಿಸಲಾಗಿದೆ. ಇದೊಂದು ಅಪರಾಧವಾಗಿದೆ ಎಂಬುದರ ಕುರಿತು ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸಿ, ಸಂಪೂರ್ಣ ನಿರ್ಮೂಲನೆಗೆ ಕೈಜೋಡಿಸಬೇಕು. ಬಾಲಕಾರ್ಮಿಕ ಪ್ರಕರಣಗಳು ಕಂಡುಬಂದ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ – ೧೦೯೮ಕ್ಕೆ ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಕಾರ್ಮಿಕ ಇಲಾಖೆಯು ಸೇರಿದಂತೆ ಅಧಿಕಾರಿಗಳು ದಾಳಿ ಮಾಡಿದ ಸಂದರ್ಭದಲ್ಲಿ ರಕ್ಷಿಸಿದ ಮಕ್ಕಳನ್ನು ಬಾಲಮಂದಿರಕ್ಕೆ ದಾಖಲಿಸಿ ಅವರ ಪುನರ್ವಸತಿ ಕಲ್ಪಿಸಿ ಅವರಿಗೆ ಪೂರಕವಾದ ಶಿಕ್ಷಣ, ಕೌಶಲಗಳ ತರಬೇತಿ ಒದಗಿಸಲಾಗುತ್ತಿದೆ…

Read More

ವಿಜಯಪುರ: ಜಿಲ್ಲಾ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ೨೦೨೩-೨೪ರ ನಾಲ್ಕನೆ ತ್ರೈಮಾಸಿಕದ ಹಾಗೂ ೨೦೨೪-೨೫ರ ಒಂದನೇ ತ್ರೈಮಾಸಿಕದ ಸಭೆಯು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಖಾತೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಜೂನ್ ೧೫ರಂದು ಬೆಳಿಗ್ಗೆ ೧೦:೩೦ಕ್ಕೆ ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

– ಸಂತೋಷ್ ರಾವ್ ಪೆರ್ಮುಡ,ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ. ಕೃಷ್ಣದೇವರಾಯನ ಆಸ್ಥಾನದಲ್ಲಿ ತೆನಾಲಿರಾಮನೆಂಬ ಆಸ್ಥಾನ ವಿದೂಷಕನಿದ್ದನು. ತೆನಾಲಿರಾಮನಿಗೆ ರಾಜನು ಅರಮನೆಯ ಸಮೀಪದಲ್ಲೇ ಮನೆಯನ್ನೂ ನಿರ್ಮಿಸಿ ಅಲ್ಲಿ ವಾಸಿಸಲು ಅನುಕೂಲ ಮಾಡಿಕೊಟ್ಟಿರುತ್ತಾನೆ. ಒಂದು ದಿನ ಕೃಷ್ಣದೇವರಾಯ ಆಸ್ಥಾನದ ಪಂಡಿತರಿಗೆ ಮತ್ತು ಸಿಬ್ಬಂದಿಗಳಿಗೆ ಭೋಜನ ಕೂಟವನ್ನು ಏರ್ಪಡಿಸುತ್ತಾನೆ. ಈ ಭೋಜನ ಕೂಟದಲ್ಲಿ ರಾಜನು ಅರಮನೆಯ ತೋಟದಲ್ಲೇ ಬೆಳೆದ ಬದನೆಕಾಯಿಯಿಂದ ಸಾಂಬಾರನ್ನು ತಯಾರಿಸಿ ಬಡಿಸುತ್ತಾನೆ. ಊಟದಲ್ಲಿ ಬದನೆಯ ಸಾಂಬಾರಿನ ರುಚಿಗೆ ಎಲ್ಲರೂ ಎರಡೆರಡು ಮೂರು ಮೂರು ಬಾರಿ ಸಾಂಬಾರು ಬಡಿಸಿಕೊಂಡು ತಿಂದು ತೇಗುತ್ತಾರೆ. ಊಟ ಮುಗಿದ ಬಳಿಕ ಎಲ್ಲರ ಬಾಯಿಯಲ್ಲೂ ರಾಜನ ತರಕಾರಿ ತೋಟದಲ್ಲಿ ಬೆಳೆದಿದ್ದ ಬದನೆಕಾಯಿಯ ರುಚಿಯದ್ದೇ ಮಾತು. ಅರಮನೆಯಲ್ಲಿ ಊಟ ಮಾಡಿ ಮನೆಗೆ ತೆರಳಿದ ತೆನಾಲಿರಾಮ ರಾಜನ ಆಸ್ಥಾನದ ತರಕಾರಿ ತೋಟದ ಬದನೆಯ ರುಚಿಯ ಕುರಿತ ಹೊಗಳಿಕೆಯಿಂದ ತೆನಾಲಿರಾಮನ ಹೆಂಡತಿಯ ಬಾಯಲ್ಲಿ ನೀರೂರಲಾರಂಭಿಸಿತು. ಹೇಗಾದರೂ ಮಾಡಿ ಕೃಷ್ಣದೇವರಾಯನ ಆಸ್ಥಾನದ ತರಕಾರಿ ತೋಟದ ಬದನೆಕಾಯಿಯನ್ನು ನಮ್ಮ ಮನೆಗೂ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ನಮ್ಮ ದೇಹವು ಪಂಚಭೂತಗಳಾದ ಪೃಥ್ವಿ, ಆಕಾಶ, ವಾಯು,ಜಲ ಮತ್ತು ಅಗ್ನಿ ತತ್ವಗಳಿಂದ ಕೂಡಿದೆ. ಹುಟ್ಟಿದಾಗ ನಾವು ಪರಿಶುದ್ಧರಾಗಿಯೇ ಇದ್ದು ಜೀವಿತಾವಧಿಯಲ್ಲಿ ಸಿಟ್ಟು ಸೆಡವು ಕೋಪ ತಾಪ ದ್ವೇಷ ಅಸೂಯೆ, ಸುಖ ಸಂತೋಷ ನೆಮ್ಮದಿ ರಾಗ ಮುಂತಾದ ಎಲ್ಲಾ ರೀತಿಯ ಭಾವಗಳಿಗೆ ಸ್ಪಂದಿಸುತ್ತ ಬೆಳೆಯುತ್ತೇವೆ. ಒಟ್ಟಿನಲ್ಲಿ ಮನುಷ್ಯ ಜೀವಿ ಕಾರ್ಕೋಟಕ ವಿಷಕ್ಕಿಂತಲೂ ಕಡೆ ಎಂದು ಭಾವಿಸುವಂತೆ ತನ್ನ ಜೀವಿತಾವಧಿಯನ್ನು ಮನುಷ್ಯ ಕಳೆಯುತ್ತಾನೆ. ಯಾವ ರೀತಿ ಅಗರ ಬತ್ತಿಯು ತನ್ನನ್ನು ತಾನು ಸುಟ್ಟು ಕೊಳ್ಳುವುದೋ ಹಾಗೆಯೇ ನಮ್ಮಲ್ಲಿ ಉಂಟಾಗುವ ದ್ವೇಷ, ಅಸೂಯೆ, ಮದ, ಮತ್ಸರಗಳು ನಮ್ಮನ್ನು ನಮಗರಿವಿಲ್ಲದೆಯೇ ಸುಟ್ಟು ಹಾಕುತ್ತವೆ.ಯಾವ ರೀತಿ ಕುದಿಯುವ ನೀರಿನಲ್ಲಿ ನಮ್ಮ ಮುಖ ನಮಗೆ ಕಾಣುವುದಿಲ್ಲವೋ ಹಾಗೆಯೇ ಸಿಟ್ಟಿನಲ್ಲಿದ್ದಾಗ ಮನುಷ್ಯ ತನ್ನ ತಪ್ಪನ್ನು ಅರಿತುಕೊಳ್ಳುವುದಿಲ್ಲ. ಶಾಂತವಾದ ಮತ್ತು ಶುದ್ಧವಾದ ಪರಿಸರದಲ್ಲಿ ತನ್ನ ತನು, ಮನಗಳನ್ನು ಶುದ್ಧೀಕರಿಸಿಕೊಳ್ಳಲು ಆ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳಲು ಈ ಕೆಲವು ವಿಷಯಗಳು ಮನುಷ್ಯನಿಗೆ…

Read More

ವಿಜಯಪುರ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಅತ್ಯಂತ ಹೇಯ ಕೃತ್ಯ, ಈ ಕೃತ್ಯದಲ್ಲಿ ಪಾಲ್ಗೊಂಡ ಎಲ್ಲರಿಗೂ ಕಠಿಣ ಶಿಕ್ಷೆ ಆಗಬೇಕು. ತಪ್ಪಿತಸ್ಥರೆಲ್ಲರನ್ನೂ ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯವೈಖರಿ, ಈ ನೆಲದ ಕಾನೂನಿನ ಮೇಲೆ, ನಮ್ಮ ಹೆಮ್ಮೆಯ ಪೊಲೀಸ್ ಇಲಾಖೆಯ ಮೇಲೆ, ಶ್ರೀಸಾಮಾನ್ಯರ ವಿಶ್ವಾಸಾರ್ಹತೆಯನ್ನು ಇಮ್ಮಡಿಗೊಳಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕೊಲೆಯಂತಹ ಕಾನೂನು ಬಾಹಿರವಾದ ಹೇಯ ಕೃತ್ಯದಲ್ಲಿ, ಪಾಲ್ಗೊಂಡವನು ಸೆಲೆಬ್ರಿಟಿ ಆಗಿರಲಿ, ಶ್ರೀಸಾಮಾನ್ಯನಾಗಿರಲಿ, ಎಲ್ಲರಿಗೂ ಕಾನೂನು ಒಂದೇ ಎಂಬ ಸ್ಪಷ್ಟ ಸಂದೇಶವನ್ನು ಪೊಲೀಸರು ಈ ಪ್ರಕರಣದಲ್ಲಿ ಪ್ರಚುರಪಡಿಸಿದ್ದಾರೆ. ನಟನಾಗಿ ಈ ನಾಡಿನಲ್ಲಿ ಮನೆ ಮಾತಾಗಿದ್ದ ದರ್ಶನ್, ಇಂಥ ಹೇಯ ಕೃತ್ಯದಲ್ಲಿ ಪಾಲ್ಗೊಂಡಿರುವುದು ನಾಚಿಕೆಗೇಡಿನ ಸಂಗತಿ, ಮೃತ ರೇಣುಕಾ ಸ್ವಾಮಿಯ ಧರ್ಮಪತ್ನಿ,ಆತನ ಮುಗ್ಧ ತಂದೆ, ತಾಯಿ, ಬಂಧುಗಳ ಅಕ್ರಂದನವನ್ನ ಮಾಧ್ಯಮದಲ್ಲಿ ನೋಡಿದವರೆಲ್ಲರ ಕಣ್ಣುಗಳು ಹನಿಗೂಡುತ್ತವೆ. ರೇಣುಕಾ ಸ್ವಾಮಿ ಚಾಟ್ ಮಾಡುವುದರ ಮೂಲಕ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದರೆ, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಿತ್ತು, ಅದನ್ನು…

Read More

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಬಂಧಿಸಿದ್ದು ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ದರ್ಶನ್ ಅವರನ್ನು ವಕೀಲ ಅನಿಲ್ ಭೇಟಿ ಮಾಡಿದರು. ಈ ವೇಳೆ ದರ್ಶನ್ ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಸಂಬಂಧಿ ಸುಶಾಂತ್ ದರ್ಶನ್ ಅವರನ್ನು ಭೇಟಿಯಾದರು. ನಂತರ ಸಂಬಂಧಿ ಫೋನ್ ಮೂಲಕ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಜೊತೆ ಮಾತನಾಡಿದರು. ಪತ್ನಿಗೆ ದರ್ಶನ್ ನಾನೇನು ಮಾಡಿಲ್ಲ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದರ್ಶನ್ ಹೇಳಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್​, ಪವಿತ್ರಾ ಗೌಡ ಜೊತೆ ವಿ. ವಿನಯ್, ಆರ್. ನಾಗರಾಜು, ಎಂ. ಲಕ್ಷ್ಮಣ್​, ಎಸ್​. ಪ್ರದೋಶ್​, ಕೆ. ಪವನ್, ದೀಪಕ್​ ಕುಮಾರ್, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್​ ರಾಘು ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ಕಾಮಾಕ್ಷಿಪಾಳ್ಯದ ಸತ್ವ…

Read More

ಚಿತ್ರದುರ್ಗದ ರೇಣುಕಾಸ್ವಾಮಿಗೆ ಚಿತ್ರಹಿಂಸೆ ಮಾಡಿ ಕೊಲೆ | ನಟಿ ಪವಿತ್ರಾ ಗೌಡ ಎ1 ಆರೋಪಿ | ನಟ ದರ್ಶನ್ ಎ2 ಆರೋಪಿ ಬೆಂಗಳೂರು: ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ 13 ಮಂದಿ ಆರೋಪಿಗಳಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ 6 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.ರೇಣುಕಾಸ್ವಾಮಿ ಅಪಹರಣ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ ದರ್ಶನ್ ಎ2 ಆರೋಪಿಯಾಗಿದ್ದಾರೆ. ಸದ್ಯ ಬಂಧಿತ 13 ಆರೋಪಿಗಳಿಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಪೊಲೀಸರು ನಂತರ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದರು.ಪ್ರಕರಣದ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ನ ನ್ಯಾಯಮೂರ್ತಿ ವಿಶ್ವನಾಥ ಗೌಡರ್ ಅವರು, ನಟ ದರ್ಶನ್, ಪವಿತ್ರಾಗೌಡ, ವಿ. ವಿನಯ್, ಆರ್. ನಾಗರಾಜು, ಎಂ. ಲಕ್ಷ್ಮಣ್​, ಎಸ್​. ಪ್ರದೋಶ್​, ಕೆ. ಪವನ್, ದೀಪಕ್​ ಕುಮಾರ್, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್​ ರಾಘು ಎಲ್ಲಾ ಆರೋಪಿಗಳನ್ನು 6 ದಿನಗಳ…

Read More

ದೇವರಹಿಪ್ಪರಗಿ: ಫಸಲು ಭೀಮಾ ಯೋಜನೆಯಡಿ ಅಲ್ಪ ವಿಮೆ ಹಣ ಬಿಡುಗಡೆ ಮಾಡಿದ ಕ್ರಮ ಖಂಡಿಸಿ ಕೊಂಡಗೂಳಿ ಗ್ರಾಮದ ರೈತರು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ಕೊಂಡಗೂಳಿ ಗ್ರಾಮದ ರೈತರು ಸೋಮವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ಫಸಲು ಭೀಮಾ ಯೋಜನೆಯಡಿ ವಿಮೆ ಕಂಪನಿ ಮಾಡಿದ ತಾರತಮ್ಯ ಹಾಗೂ ಮೋಸದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಈರಣ್ಣ ತಾವರಖೇಡ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೩-೨೪ನೇ ಸಾಲಿನ ಫಸಲು ಭೀಮಾ ಯೋಜನೆ ಅಡಿಯ ವಿಮೆ ಹಣ ಕೇವಲ ಶೇ ೬.೭೭ ಮಾತ್ರ (ಎಕರೆಗೆ ೩೩೦೦ ರೂ.ಗಳು) ನೀಡಿದ್ದಾರೆ. ಆದರೆ ಇದೇ ವಿಜಯಪುರ ತಾಲ್ಲೂಕಿನ ಶಿವಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.೯೧ (ಎಕರೆಗೆ ಅಂದಾಜು ೧೮ ಸಾವಿರ.ರೂ) ರಂತೆ ಬಿಡುಗಡೆ ಮಾಡಿದ್ದಾರೆ. ವಾಸ್ತವವಾಗಿ ಕೊಂಡಗೂಳಿ ಪಂಚಾಯಿತಿ ವ್ಯಾಪ್ತಿಯ ಕೆಸರಟ್ಟಿ ಗ್ರಾಮದಲ್ಲಿ ಮಾತ್ರ ಉತ್ತಮ ಫಸಲು ಇದ್ದು, ಇನ್ನೂಳಿದ ೫ ಗ್ರಾಮಗಳಲ್ಲಿ ಸಂಪೂರ್ಣ ಬೆಳೆ ನಾಶವಾಗಿತ್ತು. ಈ ಸಂದರ್ಭದಲ್ಲಿ ವಿಮೆ ಕಂಪನಿಯ ಸಿಬ್ಬಂದಿ…

Read More