ದೇವರಹಿಪ್ಪರಗಿ: ಫಸಲು ಭೀಮಾ ಯೋಜನೆಯಡಿ ಅಲ್ಪ ವಿಮೆ ಹಣ ಬಿಡುಗಡೆ ಮಾಡಿದ ಕ್ರಮ ಖಂಡಿಸಿ ಕೊಂಡಗೂಳಿ ಗ್ರಾಮದ ರೈತರು ಶಿರಸ್ತೇದಾರ ಡಿ.ಎಸ್.ಭೋವಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೊಂಡಗೂಳಿ ಗ್ರಾಮದ ರೈತರು ಸೋಮವಾರ ತಹಶೀಲ್ದಾರ ಕಚೇರಿಗೆ ಆಗಮಿಸಿ ಫಸಲು ಭೀಮಾ ಯೋಜನೆಯಡಿ ವಿಮೆ ಕಂಪನಿ ಮಾಡಿದ ತಾರತಮ್ಯ ಹಾಗೂ ಮೋಸದ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಈರಣ್ಣ ತಾವರಖೇಡ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೨೩-೨೪ನೇ ಸಾಲಿನ ಫಸಲು ಭೀಮಾ ಯೋಜನೆ ಅಡಿಯ ವಿಮೆ ಹಣ ಕೇವಲ ಶೇ ೬.೭೭ ಮಾತ್ರ (ಎಕರೆಗೆ ೩೩೦೦ ರೂ.ಗಳು) ನೀಡಿದ್ದಾರೆ. ಆದರೆ ಇದೇ ವಿಜಯಪುರ ತಾಲ್ಲೂಕಿನ ಶಿವಣಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇ.೯೧ (ಎಕರೆಗೆ ಅಂದಾಜು ೧೮ ಸಾವಿರ.ರೂ) ರಂತೆ ಬಿಡುಗಡೆ ಮಾಡಿದ್ದಾರೆ. ವಾಸ್ತವವಾಗಿ ಕೊಂಡಗೂಳಿ ಪಂಚಾಯಿತಿ ವ್ಯಾಪ್ತಿಯ ಕೆಸರಟ್ಟಿ ಗ್ರಾಮದಲ್ಲಿ ಮಾತ್ರ ಉತ್ತಮ ಫಸಲು ಇದ್ದು, ಇನ್ನೂಳಿದ ೫ ಗ್ರಾಮಗಳಲ್ಲಿ ಸಂಪೂರ್ಣ ಬೆಳೆ ನಾಶವಾಗಿತ್ತು. ಈ ಸಂದರ್ಭದಲ್ಲಿ ವಿಮೆ ಕಂಪನಿಯ ಸಿಬ್ಬಂದಿ ಬೆಳೆ ಹಾನಿಗೊಳಗಾದ ಗ್ರಾಮಗಳಿಗೆ ಭೇಟಿ ನೀಡದೇ ಕೇವಲ ಕೆಸರಟ್ಟಿ ಗ್ರಾಮಕ್ಕೆ ಮಾತ್ರ ಭೇಟಿ ನೀಡಿ ಅಲ್ಲಿಯ ಫಸಲನ್ನು ಪರಿಗಣಿಸಿ ವಿಮೆಯ ಮೋತ್ತವನ್ನು ನಿಗದಿ ಪಡಿಸಿದ್ದಾರೆ. ಇದರಿಂದ ವಿಮೆ ಹಣದಲ್ಲಿ ವ್ಯತ್ಯಾಸವಾಗಿ ರೈತರು ತಮಗೆ ನ್ಯಾಯಯುತವಾಗಿ ದೊರೆಯಬೇಕಾದ ವಿಮೆ ಹಣದಿಂದ ವಂಚಿತರಾಗಿದ್ದಾರೆ. ಈ ಕಾರ್ಯದಲ್ಲಿ ವಿಮಾ ಕಂಪನಿಗಳು ರೈತರಿಗೆ ಪಂಗನಾಮ ಹಾಕಿದ್ದು, ಕೂಡಲೇ ತಹಶೀಲ್ದಾರರು ವಿಮೆ ಕಂಪನಿಗೆ ಸೂಕ್ತ ನಿರ್ದೇಶನ ನೀಡಿ ರೈತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.
ಮುಂದಿನ ದಿನಗಳಲ್ಲಿ ವಿಮೆ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು ನೀಡುವಾಗ ಪ್ರತಿಯೊಂದು ಗ್ರಾಮಕ್ಕೆ ನೇರವಾಗಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಬೇಕು ಇಲ್ಲವಾದಲ್ಲಿ ರೈತರು ಉಗ್ರವಾದ ಹೋರಾಟ ಮಾಡಬೇಕಾದಿತು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ರೈತರಾದ ಕಾಶೀಲಿಂಗ ಸಿಂದಗೇರಿ, ವೀರಘಂಟಯ್ಯ ಗದ್ದಿಗೆಮಠ, ಉಮೇಶ ಮಲ್ಲಾಡ, ಲೋಹಿತ ಸಿಂದಗೇರಿ, ಅಪ್ಪಾಸಾಹೇಬ ಬಸರಕೋಡ, ಸುರೇಶ ಪ್ಯಾಟಿ, ಬಸಲಿಂಗಪ್ಪ ಮಾಳಗಾರ, ರುದ್ರಗೌಡ ಬಸರಕೋಡ, ಮಾಂತಪ್ಪಸಾಹು ಸಿಂದಗೇರಿ, ಗುರಣ್ಣ ಬಸರಕೋಡ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

