Author: editor.udayarashmi@gmail.com

ಸಿಂದಗಿ: ರಾಣಿ ಚನ್ನಮ್ಮ ಹಾಗೂ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಮೂರ್ತಿಗಳು ಭವ್ಯ ಹಾಗೂ ನಯನ ಮನೋಹರವಾಗಿವೆ. ವಿಜಯಪುರ ಜಿಲ್ಲೆಯಲ್ಲಿಯೇ ಇಂತಹ ಭವ್ಯ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿದ್ದು, ಸಿಂದಗಿಯಲ್ಲಿಯೇ ಪ್ರಥಮ ಎಂದು ಕೂಡಲಸಂಗಮ ಜಗದ್ಗುರು ಪೀಠದ ಜಗದ್ಗುರು ಜಯಬಸವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.ನಗರದಲ್ಲಿ ಕನಕದಾಸ ವೃತ್ತದ ಬಳಿ ಎರಡೂ ಪುತ್ಥಳಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಶಾಸಕ ಅಶೋಕ ಮನಗೂಳಿ ಅವರ ಮುತುವರ್ಜಿ ಹಾಗೂ ನೇತೃತ್ವದಲ್ಲಿ ಎರಡೂ ಮೂರ್ತಿಗಳು ಸ್ಥಾಪನೆಗೊಂಡದ್ದು ಶ್ಲಾಘನೀಯ ಎಂದು ಹರ್ಷವ್ಯಕ್ತಪಡಿಸಿದರು.ಈ ವೇಳೆ ಶಾಸಕ ಅಶೋಕ ಮನಗೂಳಿ ಮಾತನಾಡಿ, ತಾಲೂಕಿನ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಎರಡೂ ಮೂರ್ತಿಗಳ ಪ್ರತಿಷ್ಠಾಪನೆ ನನ್ನ ಅವಧಿಯಲ್ಲಿಯೇ ಸಾಕಾರಗೊಂಡದ್ದು ನನಗೆ ಹರ್ಷ ತಂದಿದೆ. ಈ ಮೂರ್ತಿಗಳ ಅನಾವರಣ ಕಾರ್ಯಕ್ರಮವು ಟಿಪ್ಪು ಸುಲ್ತಾನ ವೃತ್ತದ ಕಾಮಗಾರಿ ಪೂರ್ಣಗೊಂಡ ನಂತರ ಮೂರೂ ಮೂರ್ತಿಗಳ ಉದ್ಘಾಟನಾ ಕಾರ್ಯಕ್ರಮವನ್ನು ರಾಜ್ಯದ ಹರಗುರು ಚರಮೂರ್ತಿಗಳ ಸಾನಿಧ್ಯ, ರಾಜಕೀಯ ದುರಿಣರ ಸಮ್ಮುಖ ಹಾಗೂ ಮುಖ್ಯಮಂತ್ರಿಗಳ ಹಸ್ತದಿಂದ ನೆರವೇರಿಸಲಾಗುವುದು ಎಂದು ಹೇಳಿದರು.ಕನಕದಾಸ ವೃತ್ತದಲ್ಲಿ…

Read More

ವಿಜಯಪುರ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಪ್ರಗತಿ ಪರಿಶೀಲನಾ ಸಭೆ ವಿಜಯಪುರ: ೨೦೨೪-೨೫ನೇ ಸಾಲಿಗೆ ಸಿಎಂಕೆಕೆವೈ ಯೋಜನೆಯಡಿ ಕೌಶಲ್ಯ ತರಬೇತಿ ಕೈಗೊಳ್ಳಲು ಪ್ರಸ್ತುತ ಜಿಲ್ಲೆಯಲ್ಲಿ ಮಾನ್ಯತೆ ಹೊಂದಿದ ಖಾಸಗಿ ತರಬೇತಿ ಸಂಸ್ಥೆಗಳು ಹೊಂದಿರುವ ಜಾಬ್‌ರೋಲ್‌ಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮವಾಗಿ ಆಯ್ಕೆ ಮಾಡಿದ ಜಾಬ್‌ರೋಲ್‌ಗಳನ್ನು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಸೂಚಿಸಿದರು.ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿಯ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಡೇ-ನಲ್ಮ್ ಯೋಜನೆಯ ಎಲ್ಲ ಉಪಘಟಕಗಳ ಪ್ರಗತಿ ಪರಿಶೀಲನೆ, ಪಿ.ಎಂ. ಸ್ವ-ನಿಧಿ ಅಡಿ ಬಾಕಿ ಇರುವ ಫಲಾನುಭವಿಗಳ ಅರ್ಜಿಗಳನ್ನು ಪಡೆದು ಸಾಲ ಮಂಜೂರಾತಿ ಹಾಗೂ ವಿತರಣೆಗೆ ಆದ್ಯತಾನುಸಾರ ಕ್ರಮವಹಿಸುವಂತೆಯೂ, ಸ್ವ-ನಿಧಿ ಸೇ ಸಮೃದ್ಧಿ ಯೋಜನೆಯಡಿ ೮ ಸಾಮಾಜಿಕ ಭದ್ರತಾ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.೨೦೨೪-೨೫ನೇ ಸಾಲಿನ ಡೇ-ನಲ್ಮ್ ಅಭಿಯಾನದಡಿ ೪೧೦ ಮಹಿಳಾ ಸ್ವ-ಸಹಾಯ ಸಂಘಗಳ ರಚನೆ, ೨೦ ಒಕ್ಕೂಟ ರಚನೆ, ೧೬೧…

Read More

ತಿಕೋಟಾ: ತಾಲ್ಲೂಕಿನ ಅರಕೇರಿ ಸಮೀಪದ ಮುಮ್ಮೆಟ್ಟ ಗುಡ್ಡದ ಅಮೋಘಸಿದ್ದ ದೇವಸ್ಥಾನಕ್ಕೆ ಭಕ್ತರು ಹೋಗಲು ಅನೂಕೂಲವಾಗಲೆಂದು ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಸೇವೆ ಆರಂಭಿಸುವಂತೆ ಸಚಿವ ಎಂ.ಬಿ.ಪಾಟೀಲ ನೀಡಿದ ನಿರ್ದೆಶನದಂತೆ ಆಪ್ತ ಕಾರ್ಯದರ್ಶಿ ಸಂತೋಷ ಲೋಕುರೆ ಅವರು ಡಿಟಿಓ ದೇವಾನಂದ ಬಿರಾದಾರ ಅವರಿಗೆ ವಿನಂತಿಸಿದ್ದರಿಂದ ಬುಧವಾರ ಬಸ್ ಸೇವೆ ಆರಂಭವಾಯಿತು.ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಗ್ಗೆ ಎಂಟು ಗಂಟೆಗೆ, ಮದ್ಯಾಹ್ನ ಒಂದು ಗಂಟೆಗೆ, ಸಾಯಂಕಾಲ ಐದು ಗಂಟೆಗೆ ವಿಜಯಪುರದಿಂದ ಮುಮ್ಮೆಟ್ಟಿಗುಡ್ಡಕ್ಕೆ ಹೊರಡುವದು. ಕೇಂದ್ರ ಬಸ್ ನಿಲ್ದಾಣದಿಂದ ರಾಮಮಂದಿರ ಲಿಂಗದಗುಡಿರಸ್ತೆ, ಬಂಜಾರಾಕ್ರಾಸ್, ಬಾಯ್ ಪಾಸ್‌, ಮೋತಾಬಾಯಿಕ್ರಾಸ್, ಕರಾಡದೊಡ್ಡಿ ಕ್ರಾಸ್, ಅರಕೇರಿ, ಅರಕೇರಿ ಎಲ್.ಟಿ.2, ಅರಕೇರಿ ಎಲ್.ಟಿ.3 ಮಾರ್ಗವಾಗಿ ಮುಮ್ಮೆಟ್ಟಿಗುಡ್ಡ ತಲುಪುವದು.ವಿಶೇಷ ಪೂಜೆ: ನೂತನವಾಗಿ ಆರಂಭವಾದ ಬಸ್ ಗೆ ತೆಂಗಿನ ಗರಿ ಹಾಗೂ ಹೂವುಗಳಿಂದ ಸಿಂಗರಿಸಿ ಬಲೂನಗಳನ್ನು ಕಟ್ಟಿ ಪೂಜೆ ಮಾಡಲಾಯಿತು.ಈ ಸಂದರ್ಭದಲ್ಲಿ ಮುಮ್ಮೆಟ್ಟಿಗುಡ್ಡದ ಪೂಜಾರಿ ನಾಡಗೌಡ ಒಡೆಯರ್, ಮುಖಂಡರಾದ ಅರವಿಂದ ರಾಠೋಡ, ರಾವಸಾಬ ಮಾನೆ, ಸೊಮು ಬರಕಡೆ, ಪ್ರಕಾಶ ರಾಠೋಡ, ಸಿದ್ದು ದಳವಾಯಿ,…

Read More

ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದ ಎದುರು ಮಂಗಳವಾರ ಯುವಕನೋರ್ವನಿಗೆ ಕಬ್ಬಿಣದ ರಾಡ್ ನಿಂದ ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗೇವಾಡಿ ತಾಲೂಕು ಜಯವಾಡಗಿ ಗ್ರಾಮದ ೮ ಜನರ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಭೀಮಪ್ಪ ಕರಳ್ಳಿ, ನಿಂಗಪ್ಪ ಕರಳ್ಳಿ, ಬಸಪ್ಪ ಕರಳ್ಳಿ, ಶಂಕ್ರಪ್ಪ ಕರಳ್ಳಿ, ಯಲ್ಲಪ್ಪ ಕರಳ್ಳಿ , ಮಲ್ಲಪ್ಪ ಕರಳ್ಳಿ, ಸೋಮಪ್ಪ ಕರಳ್ಳಿ, ಶಿವಪ್ಪ ಕರಳ್ಳಿ ಇವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ ೧೪೩, ೧೪೭, ೧೪೮, ೩೪೧, ೩೨೩, ೩೨೬, ೧೦೯, ೫೦೪, ೫೦೬ ಮತ್ತು ಓದಬಲ್ಲ ೧೪೯ ಕಲಂಗಳ ಅಡಿ ಪ್ರಕರಣ ದಾಖಲಾಗಿದೆ.ಗಾಯಾಳು ಸಂತೋಷ ಕಾಡಮೆಗೇರಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಕುರಿತು “ಉದಯರಶ್ಮಿ” ಯೊಂದಿಗೆ ಮಾತನಾಡಿ ನನ್ನ ತಾಯಿಯ ತವರೂರು ಜಯವಾಡಗಿ. ನಾನು ಅಲ್ಲಿಯೇ ವಾಸವಿದ್ದೆ. ಕಳೆದ ೧೫ ದಿನಗಳ ಹಿಂದೆ ಯುವತಿಗೆ ಈರುಳ್ಳಿಯ ಬೆಲೆ ಕೇಳಿದ್ದಕ್ಕಾಗಿ ನನಗೆ ಹೊಡೆಯಲು ಮುಂದಾಗಿದ್ದರು. ಭಯದಿಂದ ನಾನು ಊರು…

Read More

ವಿಜಯಪುರ: ೧೧೦ ಕೆವಿ ದೇವರ ಹಿಪ್ಪರಗಿ, ೧೧೦ ಕೆವಿ ಅಥರ್ಗಾ, ೧೧೦ ಕೆವಿ ಹಿರೇಮಸಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡಿರುವುದರಿಂದ ಜೂನ್ ೧೪ ರಂದು ಬೆಳಗ್ಗೆ ೮ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ ಕಾರಣ ಸದರಿ ಮಾರ್ಗಗಳಲ್ಲಿ ಬರುವ ಗ್ರಾಹಕರು ಸಾರ್ವಜನಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ೧೧೦ ಕೆವಿ ಝಳಕಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೧೦ ಎಂ.ವಿ ಬದಲು ೨೦ ಎಂ.ವಿ ಶಕ್ತಿ ಪರಿವರ್ತಕ ಅಳವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಜೂನ್ ೧೪ ರಿಂದ ೧೬ ವರೆಗೆ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ೧೧ ಕೆವಿ ವಿದ್ಯುತ್ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಆದ ಕಾರಣ ಸದರಿ ಮಾರ್ಗಗಳಲ್ಲಿ ಬರುವ ಗ್ರಾಹಕರು ಸಾರ್ವಜನಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಜಯಪುರ ಮಹಾನಗರಪಾಲಿಕೆ ವತಿಯಿಂದ ೨೦೨೪-೨೫ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಯಾದ ದೀನದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಉಪ ಘಟಕವಾರು ಭೌತಿಕ ಮತ್ತು ಆರ್ಥಿಕ ಗುರಿಯನ್ನು ನಿಗದಿಪಡಿಸಿದ್ದು, ಸ್ವಯಂ ಉದ್ಯೋಗ(ದ್ವಿ-ಪ್ರತಿ ಅರ್ಜಿ)-೭೮, ಗುಂಪು ಸಮೂಹ ಉದ್ಯಮಗಳು ಯೋಜನೆ – ೦೬, ಸ್ವಸಹಾಯ ಗುಂಪುಗಳ ರಚನೆ-೨೦೧, ಸ್ವಸಹಾಯ ಗುಂಪುಗಳ ಬ್ಯಾಂಕ ಲಿಂಕೇಜ್-೧೦೧ ಸದರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬಿಪಿಎಲ್/ಅಂತ್ಯೋದಯ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಮತದಾರರ ಗುರುತೀನ ಚೀಟಿ, ವಿದ್ಯಾರ್ಹತೆ ಪ್ರಮಾಣ ಪತ್ರ ಮತ್ತು ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ದ್ವಿಪ್ರತಿಯಲ್ಲಿ ಕನಿಷ್ಠ ೧೮ ರಿಂದ ೫೦ ವಯಸ್ಸಿನ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ ೨೬ ರಂದು ಸಾಯಂಕಾಲ ೫ ಗಂಟೆಯ ಒಳಗಾಗಿ ಮಹಾನಗರ ಪಾಲಿಕೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯಾಗಿ ಮಹಾನಗರಪಾಲಿಕೆಯ ಡೇ-ನಲ್ಮ್ ವಿಭಾಗವನ್ನು ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ/ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ(ಆಂಗ್ಲ ಮಾಧ್ಯಮ) ಶಾಲೆಗಳ ೨೦೨೪-೨೫ನೇ ಸಾಲಿನ ೬ನೇ ತರಗತಿ ಪ್ರವೇಶಾತಿಗೆ ನಡೆಸಿದ ಪರೀಕ್ಷೆಯ ಮೆರಿಟ್ ಫಲಿತಾಂಶವನ್ನು ಪ್ರಕಟಿಸಲಾಗಿದ.ಜೂನ್ ೧೪ರಂದು ಬೆಳಗ್ಗೆ ೯ ಗಂಟೆಯಿಂದ ಆಯ್ಕೆಗೊಂಡ ವಿದ್ಯಾರ್ಥಿ/ನಿಯರ ಕೌನ್ಸಲಿಂಗ್ ನ್ನು ಅಫಜಲ್‌ಪುರ್ ಟಕ್ಕೆಯಲ್ಲಿರುವ ಸರ್ಕಾರಿ ಮುಸ್ಲಿಂ ವಸತಿ ಶಾಲೆಯಲ್ಲಿ ಮಾಡಲಾಗುವುದು. ಸದರಿ ವಿದ್ಯಾರ್ಥಿಗಳು ತಮ್ಮ ಸಿಂಧೂವಾದ ಪ್ರವೇಶ ಪ್ರಮಾಣ ಪತ್ರವನ್ನು, ತಾವು ಆಯ್ಕೆಯೊಳಿಸಿದ ವಸತಿ ಶಾಲೆಗಳಿಗೆ ಸಂಬಂಧಪಟ್ಟ ದಾಖಲಾತಿಗಳನ್ನು ತೆಗೆದುಕೊಂಡು ಜೂನ್ ೨೧ರಂದು ಪ್ರವೇಶ ಪಡೆಯಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸರ್ಕಾರಿ ಮುಸ್ಲಿಂ ವಸತಿ ಶಾಲೆಗಳ ಪ್ರಾಂಶುಪಾಲರು ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿಗೆ ದೂ.೦೮೩೫೨-೨೯೫೫೨೩ಕ್ಕೆ ಸಂಪರ್ಕಿಸಬೇಕು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆಸ್ತಿ ತೆರಿಗೆ ಪಾವತಿಸಲು…

Read More

ವಿಜಯಪುರ: ಸಮಾಜ ಕಲ್ಯಾಣ ಇಲಾಖೆಯಿಂದ ೨೦೨೪-೨೫ನೇ ಸಾಲಿಗಾಗಿ ಪರಿಶಿಷ್ಟ ಜಾತಿಯ ಹಾಗೂ ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.ವಿಜಯಪುರ ಜಿಲ್ಲೆಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿಯ ಹಾಗೂ ಪರಿಶಿಷ್ಟ ಪಂಗಡದ ಕಾನೂನು ಪದವೀಧರರು ಆನ್‌ಲೈನ್ ಮೂಲಕ ಅರ್ಜಿಯನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಗಳು sw.kar.nic.inರಲ್ಲಿ & ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು sw.kar.nic.in ರಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಜೂನ್ ೧೮ ರಿಂದ ಅರ್ಜಿಸಲ್ಲಿಸಬಹುದಾಗಿದ್ದು, ಜುಲೈ ೩೧ ಕೊನೆಯ ದಿನವಾಗಿದೆ.ಆನ್‌ಲೈನ್ ಅರ್ಜಿ ನಮೂನೆ ಹಾಗೂ ಅಗತ್ಯ ದಾಖಲೆಗಳಿಗೆ ಪತ್ರಾಂಕಿತ ಅಧಿಕಾರಿಗಳಿಂದ ದೃಢಿಕರಣದೊಂದಿಗೆ ಅರ್ಜಿಯನ್ನು ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಿಗೆ ಸಲ್ಲಿಸತಕ್ಕದ್ದು ಮತ್ತು ಇತರೆ ಹೆಚ್ಚಿನ ವಿವರಗಳಿಗಾಗಿ ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ವಿಜಯಪುರ ಇಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಪುಂಡಲೀಕ ಮಾನವರ ತಿಳಿಸಿದ್ದಾರೆ.

Read More

ಜಿಪಂ ಸಿಇಒ ರಿಷಿ ಆನಂದ ಅಧಿಕಾರಿಗಳಿಗೆ ಸೂಚನೆ | ಪ್ರವಾಹ ಕಾಮಗಾರಿ ಪರಿಶೀಲನೆ ವಿಜಯಪುರ: ಹೆಗಡಿಹಾಳ, ಸಾತಿಹಾಳ ಹಾಗೂ ಯಾಳವಾರ ಗ್ರಾಮಗಳಲ್ಲಿ ಡೋಣಿ ನದಿಯಿಂದ ಉಂಟಾಗುವ ಪ್ರವಾಹ ನಿರ್ವಹಣೆಗೆ ಅಗತ್ಯ ಕ್ರಮಕೈಗೊಳ್ಳುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅಧಿಕಾರಿಗಳಿಗೆ ಸೂಚಿಸಿದರು.ಬುಧವಾರ ಜಿಲ್ಲೆಯ ಹೆಗಡಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಕುಮನಾಳ ಗ್ರಾಮದಲ್ಲಿ ಈ ಹಿಂದೆ ಪ್ರವಾಹ ಬಂದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಹಾಗೂ ಗ್ರಾಮ ಪಂಚಾಯತಿ ವತಿಯಿಂದ ಪ್ರವಾಹವು ಸರಾಗವಾಗಿ ಸಾಗುವಂತೆ ಕೈಗೊಂಡ ಕಾಮಗಾರಿಗಳನ್ನು ಪರಿಶೀಲಿಸಿದರು.ಈ ಬಾರೀ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅತೀವೃಷ್ಟಿಯಿಂದ ಪ್ರವಾಹ ಬರುವ ಸಂಭವವಿದ್ದು, ಪ್ರವಾಹ ನಿಯಂತ್ರಣದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸುವುದು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾರ್ಯಾತ್ಮಕ ಸ್ಥಿತಿಯಲ್ಲಿಡಬೇಕು ಹಾಗೂ ಗ್ರಾಮದಲ್ಲಿನ ಚರಂಡಿಗಳನ್ನು ಸ್ವಚ್ಚಗೊಳಿಸಬೇಕು. ಸಾರ್ವಜನಿಕರಿಗೆ ಕುಡಿಯಲು…

Read More