ಮುದ್ದೇಬಿಹಾಳ: ಪಟ್ಟಣದ ನ್ಯಾಯಾಲಯದ ಎದುರು ಮಂಗಳವಾರ ಯುವಕನೋರ್ವನಿಗೆ ಕಬ್ಬಿಣದ ರಾಡ್ ನಿಂದ ಮನಸೋ ಇಚ್ಛೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗೇವಾಡಿ ತಾಲೂಕು ಜಯವಾಡಗಿ ಗ್ರಾಮದ ೮ ಜನರ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಭೀಮಪ್ಪ ಕರಳ್ಳಿ, ನಿಂಗಪ್ಪ ಕರಳ್ಳಿ, ಬಸಪ್ಪ ಕರಳ್ಳಿ, ಶಂಕ್ರಪ್ಪ ಕರಳ್ಳಿ, ಯಲ್ಲಪ್ಪ ಕರಳ್ಳಿ , ಮಲ್ಲಪ್ಪ ಕರಳ್ಳಿ, ಸೋಮಪ್ಪ ಕರಳ್ಳಿ, ಶಿವಪ್ಪ ಕರಳ್ಳಿ ಇವರ ಮೇಲೆ ಭಾರತೀಯ ದಂಡ ಸಂಹಿತೆಯ ಕಲಂ ೧೪೩, ೧೪೭, ೧೪೮, ೩೪೧, ೩೨೩, ೩೨೬, ೧೦೯, ೫೦೪, ೫೦೬ ಮತ್ತು ಓದಬಲ್ಲ ೧೪೯ ಕಲಂಗಳ ಅಡಿ ಪ್ರಕರಣ ದಾಖಲಾಗಿದೆ.
ಗಾಯಾಳು ಸಂತೋಷ ಕಾಡಮೆಗೇರಿ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಕುರಿತು “ಉದಯರಶ್ಮಿ” ಯೊಂದಿಗೆ ಮಾತನಾಡಿ ನನ್ನ ತಾಯಿಯ ತವರೂರು ಜಯವಾಡಗಿ. ನಾನು ಅಲ್ಲಿಯೇ ವಾಸವಿದ್ದೆ. ಕಳೆದ ೧೫ ದಿನಗಳ ಹಿಂದೆ ಯುವತಿಗೆ ಈರುಳ್ಳಿಯ ಬೆಲೆ ಕೇಳಿದ್ದಕ್ಕಾಗಿ ನನಗೆ ಹೊಡೆಯಲು ಮುಂದಾಗಿದ್ದರು. ಭಯದಿಂದ ನಾನು ಊರು ತೊರೆದು ಯರಝರಿ ಗ್ರಾಮದಲ್ಲಿ ವಾಸವಾದೆ. ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ವಕೀಲರ ಭೇಟಿಗಾಗಿ ಪಟ್ಟಣದ ನ್ಯಾಯಾಲಕ್ಕೆ ಆಗಮಿಸಿದ್ದಾಗ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ವಿವರಿಸಿ ನನಗೆ ಜೀವಭಯ ಇದೆ ರಕ್ಷಣೆ ಕೊಡಿಸಿ ಎಂದಿದ್ದಾನೆ.
Subscribe to Updates
Get the latest creative news from FooBar about art, design and business.
Related Posts
Add A Comment
