ದೇವರ ಹಿಪ್ಪರಗಿ:ಸತತ ೩೫ ವರ್ಷಗಳಿಂದ ಪಾದಯಾತ್ರೆಯ ಮೂಲಕ ಯಾತ್ರೆ ಕೈಗೊಂಡಿರುವ ಬಳ್ಳಾರಿ ಜಿಲ್ಲೆಯ ಹೆಚ್. ಓಬಳಾಪುರದ ಭಕ್ತಾಧಿಗಳು ಪಟ್ಟಣದ ಭಕ್ತರ ಊಟೋಪಚಾರದ ಸೇವೆಯ ನಂತರ ಪಂಢರಾಪುರಕ್ಕೆ ಪಾದಯಾತ್ರೆ ಬೆಳೆಸಿದರು.
ಸೋಮವಾರ ಸಾಯಂಕಾಲ ಪಟ್ಟಣಕ್ಕೆ ಆಗಮಿಸಿದ ಬಳ್ಳಾರಿ, ಭದ್ರಾವತಿ, ಸೇರಿದಂತೆ ವಿವಿಧ ಪ್ರದೇಶಗಳ ಇನ್ನೂರಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಟ್ಟಣದ ಶಾಲಾ ಆವರಣದಲ್ಲಿ ಭದ್ರಾವತಿ ಗೋಂದಿಮಠದ ಶ್ರೀಸ್ವಾಮಿನಾಮ ದೇವಾನಂದ ಭಾರತಿ ನೇತೃತ್ವದಲ್ಲಿ ಕೀರ್ತನೆ, ಭಜನೆಗಳನ್ನು ನೆರವೇರಿಸಿ ವಾಸ್ತವ್ಯ ಹೂಡಿದರು. ಈ ಸಂದರ್ಭದಲ್ಲಿ ಪಟ್ಟಣದ ಸದ್ಭಕ್ತರು ಯಾತ್ರಾರ್ಥಿಗಳಿಗೆ ಸಾಯಂಕಾಲದ ಫಳಾರ, ರಾತ್ರಿ ಊಟ, ನೀರು, ಬಾಳೆಹಣ್ಣು ಸೇರಿದಂತೆ ಲೈಟ್ ಸೇವೆ ಒದಗಿಸಿದರು.
ಪ್ರತಿ ವರ್ಷದ ಪಾದಯಾತ್ರೆ ಸಮಯಕ್ಕೆ ಪಟ್ಟಣದ ಜನತೆ ನೀಡುತ್ತಿರುವ ಸಹಕಾರ ಕುರಿತು ಪಾದಯಾತ್ರೆ ಸಮಿತಿಯ ಉಪಾಧ್ಯಕ್ಷ ಮಹಾದೇವಪ್ಪ ಮಗಿಮಾವಿನಹಳ್ಳಿ ಮಾತನಾಡಿ, ನವೆಂಬರ್ ೧ರಿಂದ ಬಳ್ಳಾರಿ ಜಿಲ್ಲೆಯ ಹೆಚ್. ಓಬಳಾಪುರದಿಂದ ಆರಂಭಗೊಂಡ ಈ ಯಾತ್ರೆಯಲ್ಲಿ ೪೫ ಮಹಿಳೆಯರು ಸೇರಿ ನೂರಿಪ್ಪತ್ತಕ್ಕೂ ಹೆಚ್ಚು ಜನರಿದ್ದು, ಸತತವಾಗಿ ೨೦ ದಿನಗಳ ಕಾಲುನಡಿಗೆಯಲ್ಲಿ ಸಾಗಿ ನವೆಂಬರ್ ೨೦ ಸೋಮವಾರ ಕಾರ್ತಿಕ ಶುದ್ಧ ಅಷ್ಟಮಿಯಂದು ಪಂಢರಾಪುರ ತಲುಪುತ್ತದೆ. ನಂತರ ಎಲ್ಲ ಪಾದಯಾತ್ರಿಗಳು ತಮ್ಮ ತಮ್ಮ ಗ್ರಾಮಕ್ಕೆ ತೆರಳಲಿದ್ದಾರೆ ಎಂದರು.
ಯಾತ್ರೆಯ ನೇತೃತ್ವವನ್ನು ಭದ್ರಾವತಿ ಗೋಂದಿಮಠದ ಸ್ವಾಮಿ ನಾಮದೇವಾನಂದ ಭಾರತಿ, ಎಂ. ಓಬಳೇಶ, ಸಣ್ಣ ವೆಂಕಟೇಶ, ರಮೇಶ ತೊಗರಿ ಚಿತ್ತಾಪೂರ, ಸಂತೋಷ, ಕೊಟ್ರೇಶ, ಚನ್ನಪ್ಪ, ಪ್ರಕಾಶ ದಶ್ಮಾಪೂರ, ತಿಮ್ಮಪ್ಪ ಪಿ, ಭೀಮಪ್ಪ ಬಿ ವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

