ದೇವರಹಿಪ್ಪರಗಿ: ಟಿಪ್ಪುಸುಲ್ತಾನ ವೃತ್ತದಲ್ಲಿ ಟಿಪ್ಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತ್ಯುತ್ಸವ ಆಚರಿಸಲಾಯಿತು.
ಪಟ್ಟಣದಲ್ಲಿ ಶುಕ್ರವಾರ ಟಿಪ್ಪು ಜಯಂತಿ ಅಂಗವಾಗಿ ಟಿಪ್ಪು ಕ್ರಾಂತಿಸೇನೆಯ ಪದಾಧಿಕಾರಿಗಳು ವೃತ್ತದಲ್ಲಿ ಸಭೆ ಸೇರಿ ಟಿಪ್ಪುಸುಲ್ತಾನ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಯುವಘಟಕದ ಅಧ್ಯಕ್ಷ ಮುನೀರ್‌ಅಹ್ಮದ್(ಮುನ್ನಾ) ಮಳಖೇಡ ಮಾತನಾಡಿ, ಟಿಪ್ಪು ಸುಲ್ತಾನ ಬ್ರಿಟೀಷರು ದೇಶ ದರೋಡೆ ಮಾಡದಂತೆ ತಡೆದ ಪ್ರಥಮ ವೀರರಾಗಿದ್ದು, ಅಪ್ಪಟ ಕನ್ನಡ ಪ್ರೇಮಿಯಾಗಿದ್ದರು. ಸಾಮಾಜಿಕ ಸಾಮರಸ್ಯಕ್ಕೆ ಸಾಕ್ಷಿಯಾಗಿದ್ದ ಟಿಪ್ಪು ಸುಲ್ತಾನರು ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಮಕ್ಕಳನ್ನೇ ಒತ್ತೆ ಇಟ್ಟು ಹೋರಾಡಿ ವೀರಮರಣ ಹೊಂದಿರುವುದು ಇತಿಹಾಸವಾಗಿದೆ. ಇಂತಹ ಮಹಾನ ಚೇತನ ನಮಗೆಲ್ಲ ದಾರಿದೀಪವಾಗಿದ್ದಾರೆ ಎಂದರು.
ಇಮಾಮ್ ಮುಲ್ಲಾ, ಮಹಿಬೂಬ್ ಸುತಾರ, ಇಸ್ಮಾಯಿಲ್ ಮರೋಳ, ಯಾಸೀನ್ ಮಳಖೇಡ, ಉಸ್ಮಾನ್ ಹಚ್ಯಾಳ, ಸುನೀಲ ಕನಮಡಿ, ಭಾಷಾಸಾಬ್ ಹಳ್ಳಿ, ಹುಸೇನ್ ಕೋಕಟನೂರ, ಸಮೀರ್ ಹಚ್ಯಾಳ, ಶಬ್ಬೀರ್ ನದಾಫ್, ಇರ್ಫಾನ್ ನದಾಫ್ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

