ಸಿಂದಗಿ: ರಾಷ್ಟ್ರ ನಿರ್ಮಾಣವೆಂದರೆ ಗಗನ ಚುಂಬಿ ಕಟ್ಟಡಗಳನ್ನು ನಿರ್ಮಾಣ ಮಾಡುವದಲ್ಲ. ನಿಜಾವಾದ ಅರ್ಥದಲ್ಲಿ ರಾಷ್ಟ್ರ ನಿರ್ಮಾಣವೆಂದರೆ ಮೌಲ್ಯಪೂರ್ಣ ಪ್ರಜೆಗಳ ನಿರ್ಮಾಣ. ಅದು ಶಿಕ್ಷಕನ ಮುಖ್ಯ ಕಾರ್ಯವಾಗಬೇಕು ಎಂದು ಮಕ್ಕಳ ಸಾಹಿತಿ ಪಂಡಿತ ಅವಜಿ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಬಿ.ಇಡಿ ಅಂತಿಮ ವರ್ಷದ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯಾವ ವಿದ್ಯಾರ್ಥಿ ನಿರಂತರವಾಗಿ ಅಧ್ಯಯನ ಮಾಡುತ್ತಾರೆಯೋ ಅವರು ಮಾತ್ರ ಇಂದಿನ ವೈಜ್ಞಾನಿಕ ಜಗತ್ತಿನಲ್ಲಿ ಶಿಕ್ಷಕನಾಗಲು ಸಾಧ್ಯ. ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಕನನ್ನು ದೇವರಿಗೆ ಹೋಲಿಸಿದ್ದಾರೆ. ಆರೋಗ್ಯಕ ಸಮಾಜ, ಆರ್ಥಿಕತೆಯ ಅಭಿವೃದ್ದಿಯಲ್ಲಿ ರಾಷ್ಟ್ರದ ಉನ್ನತಿಕರಣದಲ್ಲಿ ಶಿಕ್ಷಕ ಮತ್ತು ಶಿಕ್ಷಣದ ಪಾತ್ರ ಮುಖ್ಯವಾಗಿದೆ. ಶಿಕ್ಷಕರ ಮೇಲೆ ಬಹು ದೊಡ್ಡ ಜವಾಬ್ದಾರಿ ಇದೆ. ಅದನ್ನು ಪ್ರತಿ ಶಿಕ್ಷಕರು ಮತ್ತು ಶಿಕ್ಷಕರಾಗುವವರು ಶ್ರದ್ಧಾ ಭಕ್ತಿಯಿಂದ ಪೂರೈಸಲೇಬೇಕು ಎಂದರು.
ಈ ವೇಳೆ ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಿರಿಯ ಸಾಹಿತಿ ಹ.ಮ.ಪೂಜಾರ ಮಾತನಾಡಿದರು.
ವೇದಿಕೆ ಮೇಲೆ ಪ್ರಾಚಾರ್ಯ ಜೆ.ಸಿ.ನಂದಿಕೋಲ, ಕಾರ್ಯಧ್ಯಕ್ಷ ದಾನಯ್ಯ ಮಠಪತಿ, ಪ್ರಧಾನ ಕಾರ್ಯದರ್ಶಿ ಸೋಮನಾಥ ಇದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶರಣಬಸವ ಜೋಗೂರ, ಎನ್.ಬಿ.ಪೂಜಾರಿ, ಸುಧಾಕರ ಚವ್ಹಾಣ, ರೇವಣಸಿದ್ದ ಹಾಲಕೇರಿ, ಪ್ರಶಾಂತ ಕುಲಕರ್ಣಿ, ವಿದ್ಯಾ ಮೋಗಲಿ, ಚನ್ನುಕತ್ತಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಇದ್ದರು.
ಕಾರ್ಯಕ್ರಮವನ್ನು ಪ್ರಶಿಕ್ಷಣಾರ್ಥಿ ಕಾಶೀಬಾಯಿ ಬಿರಾದಾರ ನಿರೂಪಿಸಿದರು, ನಾಜೀಯಾ ಮುಲ್ಲಾ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

