ಇಂಡಿ: ಅವಕಾಶಗಳು ಎಲ್ಲರಿಗೂ ಸಮನಾಗಿದ್ದು, ಅದನ್ನು ಸರಿಯದ ಹಂತದಲ್ಲಿ ಉಪಯೋಗಿಸಿಕೊಳ್ಳುವವನು ಯಶಸ್ವಿಯಾಗುತ್ತಾನೆ ಎಂದು ಇಂಡಿಯ ಜಿ.ಆರ್.ಗಾಂಧಿ ಕಲಾ ಮತ್ತು ವೈ.ಎ. ಪಾಟೀಲ ವಾಣಿಜ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಯಪ್ರಕಾಶ.ಡಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉದ್ಯೋಗ ಭರವಸಾ ಕೋಶ ಮತ್ತು ಐಕ್ಯೂಎಸಿ ಘಟಕದ ಸಹಯೋದಲ್ಲಿ ಹಮ್ಮಿಕೊಂಡ “ಉದ್ಯೋಗ ಭರವಸಾ ಕೋಶದ”ಪಾತ್ರ ಮತ್ತು ಪ್ರಾಮುಖ್ಯತೆ ಪುನಶ್ಚೇತನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಉದ್ಯೋಗ ಪಡೆಯಬಹುದಾದ ಸಂಗತಿಗಳನ್ನು ಹೇಳಿದ ಅವರು ಇಂದಿನ ವಿದ್ಯಾರ್ಥಿಗಳಲ್ಲಿ ನಿರಂತರ ಓದು ಮತ್ತು ಗುರಿ ತಲುಪುವಲ್ಲಿನ ಮಹತ್ವದ ಕುರಿತಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಪ್ರೊ. ಆರ್.ಎಚ್.ರಮೇಶ ಮಾತನಾಡಿ”ಉದ್ಯೋಗಭರವಸಾ ವಿಷಯದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಯ ಜವಾಬ್ದಾರಿ ಸಮನಾಗಿರುತ್ತದೆ. ವಿದ್ಯಾರ್ಥಿಯು ನಿತ್ಯವೂ ನೂತನ ಸಂಗತಿಗಳನ್ನು ತಿಳಿದುಕೊಳ್ಳಲು ಆಸಕ್ತನಾಗಿರಬೇಕು, ಸತತ ಪ್ರಯತ್ನದಿಂದ, ಹಿಡಿದ ಹಾದಿಯನ್ನು ಸುಲಭವಾಗಿ ಮುಟ್ಟಬಹುದು ಎಂದರು.
ವೇದಿಕೆಯಲ್ಲಿ ಉದ್ಯೋಗ ಭರವಸಾ ಕೋಶದ ಸಂಯೋಜಕರಾದ ತಿಪ್ಪಣ್ಣ ಎಸ್. ವಗ್ದಾಳ, ಐಕ್ಯೂಎಸಿ ಸಂಯೋಜಕರಾದ ಡಾ. ಶೀರಿನೂಸುಲ್ತಾನ ಇನಾಂದಾರ, ಪ್ರೊ. ಕಿರಣ ರೇವಣಕರ, ಪ್ರೊ. ರಾಜಲಕ್ಷ್ಮಿ ಆರ್ ವೇದಿಕೆಯಲ್ಲಿದ್ದರು.
ಕವೀಂದ್ರಕುಮಾರ ಚಾಬುಕಸ್ವಾರ ಸ್ವಾಗತಿಸಿದರು. ಪರಸಪ್ಪ ದೇವರ ವಂದಿಸಿದರು. ಆಕಾಶ ಪಾಟೀಲ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

