Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 22, 2026

ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು

ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜಾತಿ-ಮತ ಪಂಥ ಮೀರಿ ದೇಶಪ್ರೇಮ ಮೆರೆಯಿರಿ
(ರಾಜ್ಯ ) ಜಿಲ್ಲೆ

ಜಾತಿ-ಮತ ಪಂಥ ಮೀರಿ ದೇಶಪ್ರೇಮ ಮೆರೆಯಿರಿ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವೀರಯೋಧ ಕಾಶೀರಾಯ ಸ್ಮರಣಾರ್ಥ ಸರ್ವಧರ್ಮ ಸಮ್ಮೇಳನದಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ಕರೆ

ವಿಜಯಪುರ: ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ದೇಶಪ್ರೇಮ ಮೆರೆಯಬೇಕು. ಪ್ರತಿಯೊಬ್ಬ ಭಾರತೀಯನು ಯಾವುದೇ ಜಾತಿ-ಮತ ಪಂಥಗಳನ್ನು ಮೀರಿ ರಾಷ್ಟ್ರಪ್ರೇಮ ಬೆಳೆಸಿಕೊಂಡು, ಒಗ್ಗಟ್ಟಾಗಿ ಸುಭದ್ರ ದೇಶ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕರೆ ನೀಡಿದರು.
ಮಂಗಳವಾರ ಜಿಲ್ಲೆಯ ಉಕ್ಕಲಿ ಗ್ರಾಮದ ಬಿಎಲ್‌ಡಿಇ ಸಂಸ್ಥೆಯ ನ್ಯೂ ಇಂಗ್ಲೀಷ್ ಹೈಸ್ಕೂಲ್ ಆವರಣದಲ್ಲಿ ಪುಲ್ವಾಮಾ ದಾಳಿಯಲ್ಲಿ ಹುತ್ಮಾತ್ಮರಾದ ವೀರಯೋಧ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಹವಲ್ದಾರ ಕಾಶೀರಾಯ ಬಮ್ಮನಳ್ಳಿ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಸರ್ವಧರ್ಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ವೀರಯೋಧ ಕಾಶೀರಾಯನ ತ್ಯಾಗಕ್ಕೆ ಬೆಲೆ ಕಟ್ಟಲಾಗಲ್ಲ. ಇಂತಹ ವೀರನಿಗೆ ಜನ್ಮ ನೀಡಿದ ತಂದೆ-ತಾಯಿಗೆ ಎಷ್ಟು ಕೊಂಡಾಡಿದರೂ ಕಡಿಮೆ. ಪುಲ್ವಾಮಾ ದಾಳಿ ಸಂದರ್ಭದಲ್ಲಿ ಶತ್ರುವನ್ನು ಸದೆಬಡೆದು, ವೀರ ಮರಣ ಹೊಂದಿದ ಕಾಶೀರಾಯ ಸೂರ್ಯಚಂದ್ರ ಇರುವರೆಗೂ ಅಜರಾಮರಾಗಿ ಉಳಿಯಲಿದ್ದಾರೆ. ಅವರ ತ್ಯಾಗದ ಕುರಿತು ಮುಂದಿನ ಪೀಳಿಗೆಗೆ ಪರಿಚಯಿಸುವ-ನೆನಪಿಸುವ ನಿಟ್ಟಿನಲ್ಲಿ ಪುತ್ಥಳಿ ಅನಾವರಣ ಅತಿ ಸ್ತ್ಯುತ್ಯವಾಗಿದೆ. ಕಾಶೀರಾಯನಂತೆ ಪ್ರತಿಯೊಬ್ಬರು ದೇಶಪ್ರೇಮ ಮೆರೆಯಬೇಕು. ದೇಶಕ್ಕಾಗಿ ನಾವು ಏನನ್ನಾದರೂ ಕೊಡುಗೆ ನೀಡಬೇಕೆಂಬ ಬಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತನಾಡಿದರು.
ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಕೊಲ್ಹಾಪುರದ ಸಿದ್ದಗಿರಿ ಮಹಾಸಂಸ್ಥಾನ ಕನ್ನೇರಿ ಮಠದ ಕೃಷಿ ಋಷಿ ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಉಕ್ಕಲಿ ಯರನಾಳ ಸಂಸ್ಥಾನ ವಿರಕ್ತಮಠದ ಡಾ.ಅಭಿನವ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ಜಾಲವದಿ-ನಂದವಾಡಗಿ ಆಳಂದ ಡಾ.ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಹಜರತ್ ಸೈಯ್ಯದ್ ಷಾ ಹುಸೇನ್ ಪೀರ ಖಾದ್ರಿ ಚಿಸ್ತಿ ಮನಗೂಳಿ ಶರೀಫ್‌ದ ಡಾ.ಫೈರೋಜ ಇನಾಂದಾರ, ಧರ್ಮಗುರು ಮೌಲಾನಾ ಶಕೀಲ್ ಅಹಮದ್ ಖಾಸ್ಮಿ ಅವರು ಆರ್ಶೀವಚನ ನೀಡಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಸಿ.ಎಂ. ಗಣಕುಮಾರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಮೇಶ ಕಾರಜೊಳ, ಊರಿನ ಗಣ್ಯರಾದ ಎನ್.ಜಿ.ಸಿಂದಗಿ, ಬಾಳು ಮಸಳಿ, ಧರೆಪ್ಪ ಮಸಳಿ, ಶ್ರೀಮತಿ ದೊಡಮನಿ, ಪ್ರಕಾಶ ಪಟ್ಟಣದ, ಬಿ.ಜಿ.ಬಿರಾದಾರ, ಪ್ರಕಾಶ ಜುಮನಾಳ, ಪ್ರಭು ಹಂಡಿ, ಪ್ರವೀಣ ನಾದ, ಪ್ರಕಾಶ ಪಾಟೀಲ, ರಾಮುಗೌಡ ಇಂಡಿ, ಪ್ರವೀಣ ಕಾಮಗೊಂಡ, ಅಪ್ಪುಗೌಡ ಬಿರಾದಾರ, ಅಶೋಕ ಹಾವಿನಾಳ, ಹಾವೆರಿ, ಸೇರಿದಂತೆ ಊರಿನ ಪ್ರಮುಖರು ಉಪಸ್ಥಿತರಿದ್ದರು.
ಪ್ರವೀಣ ಕಾಮಗೊಂಡ ಸ್ವಾಗತಿಸಿದರು. ಶಿಕ್ಷಕ ಹಿರೇಮಠ, ಟೆಂಕಲಿ ಹಾಗೂ ಮುಲ್ಲಾ ಅವರು ನಿರೂಪಿಸಿದರು. ಮಹೇಶ ಹಾವಿನಾಳ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 22, 2026

ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು

ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’

ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 22, 2026
    In ದಿನಪತ್ರಿಕೆ
  • ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’
    In (ರಾಜ್ಯ ) ಜಿಲ್ಲೆ
  • ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೇ ಮುಖ್ಯ ಅಸ್ತ್ರ
    In (ರಾಜ್ಯ ) ಜಿಲ್ಲೆ
  • ಜಗತ್ತಿಗೆ ಅದ್ವೈತ ತತ್ವ ಪರಿಚಯಿಸಿದ ತತ್ವಜ್ಞ ಆದಿ ಶಂಕರಾಚಾರ್ಯರು
    In (ರಾಜ್ಯ ) ಜಿಲ್ಲೆ
  • ರಾಜ್ಯ ಮುಕ್ತ ವಿವಿ ಕರಾಮುವಿಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರಳತೆ ಮೆರೆದ ಚಿದಾನಂದ ಸವದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಇಂದು ಕಂಪ್ಯೂಟರ್ ಜ್ಞಾನ ಅತ್ಯವಶ್ಯ :ಮಠಪತಿ
    In (ರಾಜ್ಯ ) ಜಿಲ್ಲೆ
  • ಹೈರಿಗೆಯಲ್ಲಿ ಅಂಬೇಡ್ಕರ್ ಜಯಂತಿ & ರಣದಕಾಳಮ್ಮ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.