ದೇವರಹಿಪ್ಪರಗಿ: ಪಟ್ಟಣದ ದೇಶಪಾಂಡೆ ಕುಟುಂಬಕ್ಕೆ ಸೇರಿದ ಕಬ್ಬು ವಿದ್ಯುತ್ ಅವಘಡದಿಂದ ಬೆಂಕಿಗೆ ಆಹುತಿಯಾಗಿದ್ದು ಸುಮಾರು ೦೩ ಎಕರೆ ಕಬ್ಬು ಸುಟ್ಟು ಭಸ್ಮವಾದ ಘಟನೆ ಮಂಗಳವಾರ ಜರುಗಿದೆ.
ದೇವರಹಿಪ್ಪರಗಿಯ ಪಾಂಡುರಂಗ ದೇಶಪಾಂಡೆ ಇವರ ಆಸ್ತಿ ಸಂಖ್ಯೆ ೮/೧ ರಲ್ಲಿ ಮಂಗಳವಾರ ಬೆಳಿಗ್ಗೆ ಕಬ್ಬು ಬೆಳೆ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಹಾನಿಗೀಡಾಗಿದೆ. ಸ್ಥಳಕ್ಕೆ ಆಗಮಿಸಿದ ೨ ಅಗ್ನಿಶಾಮಕ ತಂಡಗಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವುದರಲ್ಲಿ ೫ ಎಕರೆ ಕಬ್ಬು ಬೆಳೆಯಲ್ಲಿ ೩ ಎಕರೆ ಕಬ್ಬು ಬಹುತೇಕ ಸುಟ್ಟು ಕರಕಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು ಪ್ರಯತ್ನ ಪೂರ್ಣವಾಗಿ ಫಲಿಸಲಿಲ್ಲ.
ಕಬ್ಬು ಕಟಾವಿಗೆ ಬಂದು ಕಾರ್ಖಾನೆಗೆ ಸಾಗಿಸಬೇಕು ಎನ್ನುವಷ್ಟರಲ್ಲಿ ಈ ಘಟನೆ ಸಂಭವಿಸಿದೆ. ಈ ವರ್ಷ ಮಳೆಯಾಗದ ಕಾರಣ ಉತ್ತಮ ಫಸಲು ಬರುತ್ತಿಲ್ಲ ಎಂದು ರೈತರು ಚಿಂತಿತರಾಗಿದ್ದಾರೆ. ಇಂತಹದರಲ್ಲಿ ವಿದ್ಯುತ್ ಅವಘಡದಿಂದ ಬೆಳೆದ ಕಬ್ಬು ಸುಟ್ಟು ಕರಕಲಾಗಿದೆ. ಹೀಗಾಗಿ ವರ್ಷದ ರೈತರ ಆದಾಯಕ್ಕೆ ಕೊಳ್ಳಿ ಇಟ್ಟಂತಾಗಿದೆ.
ತಾಲ್ಲೂಕಿನಾದ್ಯಂತ ಹಲವಾರು ತಿಂಗಳಿನಿಂದ ವಿದ್ಯುತ್ ಅವಘಡದಿಂದ ಕಬ್ಬುಬೆಳೆ ಸುಟ್ಟು ಹೋಗುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ. ಅದಕ್ಕಾಗಿ ಕಬ್ಬಿನ ತೋಟಗಳಲ್ಲಿ ಬೆಳೆಯ ಮೇಲೆ ವಿದ್ಯುತ್ ತಂತಿಗಳು ಹಾದು ಹೋಗದಂತೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಆದ ನಷ್ಟವನ್ನು ತಕ್ಷಣವೇ ತುಂಬಿಕೊಡಬೇಕು. ಹಾಗೂ ಮುಖ್ಯವಾಗಿ ತಾಲ್ಲೂಕು ಕೇಂದ್ರದಲ್ಲಿ ನೂತನ ಅಗ್ನಿಶಾಮಕ ಠಾಣೆಯನ್ನು ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಪಟ್ಟಣದ ಪ್ರಗತಿಪರ ರೈತರಾದ ಮಂಜುನಾಥ ಒಂಟೆತ್ತೀನ್, ಹಿರಿಯ ವೈದ್ಯ ಆರ್.ಆರ್.ನಾಯಿಕ್, ಉದ್ಯಮಿ ಕೆ.ಎಸ್.ಕೋರಿ, ರಿಯಾಜ್ ಯಲಗಾರ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

