ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಇಟ್ಟುಕೊಂಡು ೭೩ ವರ್ಷಗಳಿಂದ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಆಚರಿಸಲಾಗುತ್ತಿದೆ ಎಂದು ಸಮೃದ್ಧಿ ಸಹಕಾರ ಸಂಘದ ಉಪಾಧ್ಯಕ್ಷ ರಿಯಾಜ್ ಯಲಗಾರ ಹೇಳಿದರು.
ಪಟ್ಟಣದ ಸಮೃದ್ಧಿ ಸಹಕಾರ ಸಂಘದ ಆವರಣದಲ್ಲಿ ಶನಿವಾರ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಪಿತಾಮಹ ಎಸ್.ಎಸ್.ಪಾಟೀಲ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಸಹಕಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನವೆಂಬರ್ ೧೪ರಿಂದ ೨೦ರವರೆಗೆ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಜರುಗಲಿದೆ. “ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲ್ಯಾಧಾರಿತ, ವೃತ್ತಿಪರ ಸೇವೆ ಎಂಬ ಸಪ್ತಾಹದ ಧ್ಯೇಯ ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ಎಂಬ ದಿನದ ವಿಷಯ ಹಾಗೂ ಘೋಷಣೆಗಳೊಂದಿಗೆ ಈ ಸಪ್ತಾಹ ಆರಂಭಗೊಂಡಿದೆ ಎಲ್ಲ ಸಹಕಾರಿಗಳು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮಾಹಿತಿ ನೀಡಿದರು.
ಖ್ಯಾತ ವೈದ್ಯ ಆರ್.ಆರ್.ನಾಯಿಕ, ನಿರ್ದೇಶಕರುಗಳಾದ ಪ್ರಭುದೇವ ಹಿರೇಮಠ, ಬಸವರಾಜ ಬಬಲೇಶ್ವರ, ಕೆ.ಎಸ್.ಕೋರಿ, ಮಂಜುನಾಥ ಒಂಟೆತ್ತಿನ, ಗುರು ಕರಭಂಟನಾಳ, ಅಯ್ಯನಗೌಡ ಪಾಟೀಲ, ಎ.ಕೆ.ಹಿರೇಮಠ, ಪ್ರಭಾರಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಬಸವರಾಜ ಸಜ್ಜನ, ಸಿಬ್ಬಂದಿ ಅಕ್ಷಯ ರಾಠೋಡ, ಬಸವರಾಜ ಹಿರೇಮಠ ಇದ್ದರು.

