Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆ ಬಳಕೆಗೆ ಆದ್ಯತೆ ನೀಡಿ

ನ.೪ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿಶೇಷಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ: ಅರ್ಜಿ ಆಹ್ವಾನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಗಂಡಭೇರುಂಡ ಲಾಂಛನ ವಿಜಯಪುರ ಇತಿಹಾಸದ ಮುಕುಟ
(ರಾಜ್ಯ ) ಜಿಲ್ಲೆ

ಗಂಡಭೇರುಂಡ ಲಾಂಛನ ವಿಜಯಪುರ ಇತಿಹಾಸದ ಮುಕುಟ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ನಡೆದ ಗಂಡಭೇರುಂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಾಜಿ ಉಪಮಹಾಪೌರ ರಾಜೇಶ ದೇವಗಿರಿ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಕರ್ನಾಟಕ ರಾಜ್ಯ ಸರಕಾರವು ಬಳಸುತ್ತಿರುವ ಗಂಡಭೇರುಂಡ ಲಾಂಛನವನ್ನು ವಿಜಯಪುರದಲ್ಲಿ ಮೊದಲ ಬಾರಿಗೆ ರಾಷ್ಟ್ರಕೂಟರು ತಮ್ಮ ಲಾಂಛನವಾಗಿ ಬಳಸಿದ್ದಾರೆ, ನಂತರ ಕಲ್ಯಾಣ ಚಾಲುಕ್ಯರು ದೇವಗಿರಿ ಯಾದವರು ಬಳಸಿದ್ದು ಹೆಮ್ಮೆಯ ಸಂಗತಿ. ಗಂಡಭೇರುಂಡ ಲಾಂಛನವು ವಿಜಯಪುರ ಜಿಲ್ಲೆಯ ಇತಿಹಾಸ ಮತ್ತು ಪ್ರವಾಸೋದ್ಯಮದ ಮುಕುಟವಾಗಿದೆ ಎಂದು ಮಹಾನಗರ ಪಾಲಿಕೆಯ ಮಾಜಿ ಉಪಮಹಾಪೌರ ರಾಜೇಶ ದೇವಗಿರಿ ಹೇಳಿದರು.
ಅವರು ರಾಷ್ಟ್ರೀಯ ಸಂಶೋಧನಾ ವೇದಿಕೆ ಹಾಗೂ ಗಂಡಭೇರುಂಡ ರಾಜ್ಯೋತ್ಸವ ಸಮಿತಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಇಂಡಿ ರಸ್ತೆಯ ಪುರಾತನ ಕೋಟೆಯಲ್ಲಿರುವ ಕನ್ನಡ ನಾಡಿನ ರಾಜಮನೆತನ ರಾಷ್ಟ್ರಕೂಟರ ರಾಜ್ಯ ಲಾಂಛನ ಗಂಡಭೇರುಂಡ ಪಕ್ಷಿಯ ಐತಿಹಾಸಿಕ ಉಬ್ಬು ಶಿಲ್ಪದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಗಂಡಭೇರುಂಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಸಂಶೋಧನಾ ವೇದಿಕೆಯ ವಿಜಯಪುರ ಜಿಲ್ಲಾಧ್ಯಕ್ಷ ಇತಿಹಾಸಕಾರ ಲಾಯಪ್ಪ ಇಂಗಳೆ, ಅವರು ಗಂಡಭೇರುಂಡ ಲಾಂಛನವನ್ನು ಸಂಶೋಧನೆ ಮಾಡುವ ಮೂಲಕ ವಿಜಯಪುರ ಐತಿಹಾಸಿಕ ಪರಂಪರೆಯನ್ನು ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದ ಅವರು ಐತಿಹಾಸಿಕ ಗಂಡಭೇರುಂಡ ಲಾಂಛನವನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಶೋಧನಾ ವೇದಿಕೆ ಅಧ್ಯಕ್ಷ ಲಾಯಪ್ಪ ಇಂಗಳೆ ಅವರು ಮಾತನಾಡಿ, ರಾಷ್ಟ್ರಕೂಟರು ಮೊದಲು ಬಳಸಿದ ಗಂಡಭೇರುಂಡ ವಿಜಯಪುರ ನಗರದಲ್ಲಿ ಉಪಲಬ್ದವಾಗಿರುವುದರಿಂದ ಇತಿಹಾಸದಲ್ಲಿ ಜಿಲ್ಲೆಗೆ ಮಹತ್ವದ ಸ್ಥಾನ ದೊರೆಯಲಿದೆ ಎಂದು ಹೇಳಿದ ಅವರು, ಸರ್ಕಾರ ಮತ್ತು ವಿಜಯಪುರ ಜಿಲ್ಲಾಡಳಿತ ಗಂಡಭೇರುಂಡ ಲಾಂಛನ ಪ್ರದೇಶ ಸಾರ್ವಜನಿಕರು ಹಾಗೂ ಪ್ರವಾಸಿಗರು ನೋಡುವ ಪ್ರೇಕ್ಷಣಿಯ ಸ್ಥಳವಾಗಿ ರೂಪಿಸಬೇಕು ಎಂದು ಹೇಳಿದರು.
ಗಂಡಭೇರುಂಡ ರಾಜ್ಯೋತ್ಸವ ಸಮಿತಿಯ ಪ್ರಮುಖರಾದ ವಿನೋದ ಖೇಡ, ಜಗದೇವ ಸೂರ್ಯವಂಶಿ ಅವರು ಮಾತನಾಡಿ, ರಾಷ್ಟ್ರೀಯ ಸಂಶೋಧನಾ ವೇದಿಕೆಯ ಅಧ್ಯಕ್ಷ ಲಾಯಪ್ಪ ಇಂಗಳೆ ಅವರ ಸಂಶೋಧನೆಯಿಂದ ಗಂಡಭೇರುಂಡ ಲಾಂಛನದ ಮೂಲ ಸ್ಥಾನ ಬೆಳಕಿಗೆ ಬಂದಿದೆ, ಲಾಂಛನ ಜಾಗೃತಿ ಮತ್ತು ಸ್ಮಾರಕ ಉಳಿವಿಗಾಗಿ ಗಂಡಭೇರುಂಡ ರಾಜ್ಯೋತ್ಸವವನ್ನು ಮೊದಲ ಬಾರಿಗೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದ ಅವರು ಪ್ರತಿಯೊಬ್ಬರು ಲಾಂಛನದ ಇತಿಹಾಸ ಅರಿತುಕೊಂಡು ಸ್ಮಾರಕ ಸಂರಕ್ಷಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಜಯಪುರ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕ್ರಿಯಾ ಸಮಿತಿ ಅಧ್ಯಕ್ಷ ಅಂಬಾದಾಸ ಜೋಶಿ, ನ್ಯಾಯವಾದಿ ದಾನೇಶ ಅವಟಿ ಮಾತನಾಡಿದರು. ಅಧ್ಯಕ್ಷತೆ ವಹಿಸಿ ಲೋಹಾರ ಸಮಾಜದ ಹಿರಿಯ ಮುಖಂಡ ಬಲಭೀಮ ಸಾಳುಂಕೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಕಾಶವಾಣಿಯ ಕಿರಣ ಶೇಖದಾರ ಮುಖಂಡರಾದ ಅನಿಲ ಇಕ್ಕಡೆ ರಮಜಾನ ಶೇಖ,ಮಹೇಶ ಮುಧೋಳ ಪ್ರದೀಪ ಚಲವಾದಿ, ಸೋಮಲಿಂಗ ರಣದೇವಿ ಅವರು ಗಂಡಭೇರುಂಡ ಲಾಂಛನ ಮತ್ತು ಸ್ಮಾರಕ ಸಂರಕ್ಷಣೆ ಕುರಿತು ಮಾತನಾಡಿದರು.
ಕಾರ್ಯಕ್ರಮಕ್ಕೂ ಮೊದಲು ನಾಡದೇವಿ ಭಾವಚಿತ್ರ ಹಾಗೂ ಮಹಾರಾಣಾ ಪ್ರತಾಪ ಅವರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ತಾನಾಜಿ ಪವಾರ, ಜಾವೀದ ಮದಭಾವಿ, ಗುರುಲಿಂಗಪ್ಪಗೌಡ ಪಾಟೀಲ, ಮಲ್ಲಿಕಾರ್ಜುನ ಬಟಗಿ, ಮಹದೇವಪ್ಪ ತೇಲಿ, ಶ್ರೀರಂಗ ಪುರಾಣಿಕ, ಗಣೇಶ ರಣದೇವಿ, ಚಂದ್ರಶೇಖರ ಹೊಸಮನಿ ವಿನೋದ ಸಾಳುಂಕೆ, ಆನಂದ ಜಂಬಗಿ, ಅನಿಲ ಸಾಳುಂಕೆ, ಸುಪ್ರೀತ ಅಲದಿದೇಸಾಯಿ ಮಲ್ಲನಗೌಡ ಪಾಟೀಲ(ಗೌಡಗೆರೆ) ಮುತ್ತುರಾಜ ಯಲಗಟ್ಟಿ, ರೇವಣಸಿದ್ದ ಚಾಂದಕವಟೆ, ಪ್ರಕಾಶ ಸಬರದ, ಲಕ್ಷ್ಮಣ ಕಂಬಾಗಿ, ಜ್ಯೋತಿ ಮಿಣಜಗಿ, ಮಹಾದೇವ ಪವಾರ, ಟಿ ಎಸ್ ಪಾಟೀಲ ಸುರೇಶ ನಿನ್ನೆ, ಶಂಕರ ಸಾತಪುತೆ, ಅಂಬಣ್ಣ ಗುನ್ನಾಪುರ,ಶ್ರೀನಿವಾಸ ಕೋಳಿ, ಅನಿಲ ಪವಾರ, ರಾಜಕುಮಾರ ಉಪ್ಪಾರ, ಚಿದಾನಂದ ಗುಗ್ಗರಿ, ಉಮೇಶ ದೊಡಮನಿ, ಪರಶುರಾಮ ತೊರವಿ, ಮೈಲಾರಪ್ಪ ಸೌದಾಗರ, ರೇಣುಕಾ ಮಣ್ಣೂರ, ಸುರೇಶ ನಿನ್ನೆ, ವಿಠ್ಠಲ ಕಾಖಂಡಕಿ, ಚಿದಾನಂದ ಅವಟಿ ಸೇರಿದಂತೆ ಹಲವರು
ಉಪಸ್ಥಿತರಿದ್ದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆ ಬಳಕೆಗೆ ಆದ್ಯತೆ ನೀಡಿ

ನ.೪ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ವಿಶೇಷಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ: ಅರ್ಜಿ ಆಹ್ವಾನ

ರಾಜ್ಯೋತ್ಸವದ ಸಂಭ್ರಮಕ್ಕೆ ಚಿಣ್ಣರ ಸಾಂಸ್ಕೃತಿಕ ವೈಭವದ ಮೆರುಗು

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆ ಬಳಕೆಗೆ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ನ.೪ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
    In (ರಾಜ್ಯ ) ಜಿಲ್ಲೆ
  • ವಿಶೇಷಚೇತನರ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿ, ಸಂಸ್ಥೆ ಹಾಗೂ ವಿಶೇಷ ಶಿಕ್ಷಕರಿಗೆ ರಾಜ್ಯ ಪ್ರಶಸ್ತಿ: ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ರಾಜ್ಯೋತ್ಸವದ ಸಂಭ್ರಮಕ್ಕೆ ಚಿಣ್ಣರ ಸಾಂಸ್ಕೃತಿಕ ವೈಭವದ ಮೆರುಗು
    In (ರಾಜ್ಯ ) ಜಿಲ್ಲೆ
  • ನಮ್ಮ ನಾಡಿನ ಪರಂಪರೆ ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ
    In (ರಾಜ್ಯ ) ಜಿಲ್ಲೆ
  • ಗಂಡಭೇರುಂಡ ಲಾಂಛನ ವಿಜಯಪುರ ಇತಿಹಾಸದ ಮುಕುಟ
    In (ರಾಜ್ಯ ) ಜಿಲ್ಲೆ
  • ೨ ಹಂತಗಳಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆ ಅನುಷ್ಠಾನ
    In (ರಾಜ್ಯ ) ಜಿಲ್ಲೆ
  • ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ
    In (ರಾಜ್ಯ ) ಜಿಲ್ಲೆ
  • ಭವ್ಯ ಪರಂಪರೆಯ ಕನ್ನಡನಾಡು :ಶಾಸಕ ರಾಜುಗೌಡ
    In (ರಾಜ್ಯ ) ಜಿಲ್ಲೆ
  • ಸಿಂದಗಿಯ ವಿವಿಧೆಡೆ ಕನ್ನಡ ರಾಜ್ಯೋತ್ಸವ ಅದ್ಧೂರಿ ಆಚರಣೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.