ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆ. ಮೂರು ಜನ ರಾಷ್ಟ್ರ ಕವಿಗಳು. ಎಂಟು ಜನ ಜ್ಞಾನಪೀಠ ಪುರಸ್ಕೃತರಾಗಿದ್ದು ನಮ್ಮೆಲ್ಲರ ಅದೃಷ್ಟ. ಬುದ್ಧ ಭಾರತ ಮಹಾಕಾವ್ಯ ರಚಿಸಿದ ಕನ್ನಡದ ಹಿರಿಯ ಸಾಹಿತಿ ಜಾನಪದ ಸಾಹಿತ್ಯ ವಿಶ್ವವಿದ್ಯಾಲಯ ಗೊಟಗೊಡಿ ವಿಶ್ರಾಂತ ಕುಲಪತಿ ಡಾ. ಟಿ ಎಂ ಬಾಸ್ಕರ ಅವರಿಗೆ ಅಭಿನಂದನೆ ಸಲ್ಲಿಸಿ ಬುದ್ಧನ ಅಷ್ಟಾಂಗ ಮಾಗ೯ಗಳು ಮನುಕುಲಕ್ಕೆ ಮಾಗ೯ದಶ೯ನ ಮಾಡಿವೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆ ಡಾ ಜಯದೇವಿ ಗಾಯಕವಾಡ ಅಭಿಪ್ರಾಯ ವ್ಯಕ್ತಪಡಿಸಿದರು.
ರವಿವಾರ ದಿನಾಂಕ ಜಿಲ್ಲಾ, ತಾಲೂಕ ಹಾಗೂ ನಗರ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಮದಲ್ಲಿ ಬುದ್ಧ ಭಾರತ ಮಹಾಕಾವ್ಯ ಉದ್ಘಾಟಿಸಿ ಹಾಗೂ ಕಸಾಪದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುವೆಂಪು.ಬೇಂದ್ರೆ ಅವರು ಸಾಹಿತ್ಯ ಕನ್ನಡ ಸಾರಸ್ವತ ಲೋಕದ ದಿಗ್ಗಜರು ಎಂದರು.
ಕಸಾಪ ಗೌರವ ಕಾರ್ಯದರ್ಶಿ ಕನ್ನಡ ರಾಜ್ಯೋತ್ಸವ ಕುರಿತು ಉಪನ್ಯಾಸ ನೀಡಿದರು.
ಸಾಹಿತಿ ಮಮತಾ ಮುಳಸಾವಳಗಿ ಅವರು ಬುದ್ಧ ಭಾರತ ಮಹಾಕಾವ್ಯ ಕೃತಿಯನ್ನು ಪರಿಚಯಿಸಿದರು.
ಕನಾ೯ಟಕ ಜಾನಪದ ವಿಶ್ವವಿದ್ಯಾಲಯ ಗೊಟಗೊಡಿ ವಿಶ್ರಾಂತ ಕುಲಪತಿ ಡಾ. ಟಿ ಎಂ ಬಾಸ್ಕರ ಹಾಗೂ ಬುದ್ಧ ಭಾರತ ಮಹಾಕಾವ್ಯ ಕುರಿತು ಮಾತನಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆ ವಹಿಸಿದ್ದ ಡಾ. ಆನಂದ ಕುಲಕರ್ಣಿ, ಡಾ. ಗವಿಸಿದ್ಧಪ್ಪ ಪಾಟೀಲ. ಭಾಗಿರಥಿ ಸಿಂಧೆಮಹಮ್ಮದ ಇಸ್ಮಾಯಿಲ ವಾಲೀಕಾರ. ಎಸ್ ಡಿ ಶಮಾ೯ ಮಾತನಾಡಿದರು.
ಶಾಂತಾ ವಿಭೂತಿ ಪ್ರಾಥಿ೯ಸಿದರು. ಶಶಿಕಲಾ ನಾಯ್ಕೋಡಿ ಗೀತಗಾಯನ ಮಾಡಿದರು. ವಿಜಯಲಕ್ಷ್ಮಿ ಹಳಕಟ್ಟಿ ಸ್ವಾಗತಿಸಿದರು. ರಿಯಾಜ ಪಿಂಜಾರ ನಿರೂಪಿಸಿದರು. ಅಭಿಷೇಕ ಚಕ್ರವರ್ತಿ ಪ್ರಾಸ್ತಾವಿಕ ಮಾತನಾಡಿದರು. ಹಾಸಿಂಪೀರ ವಾಲಿಕಾರ ವಂದಿಸಿದರು.
ಕಸಾಪದಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ
ಇದೇ ಸಂದರ್ಭದಲ್ಲಿ ಶಿವಾನಂದ ಜಂಗಿನಮಠ, ಸಾಯಬಣ್ಣ ಅಣ್ಣೇಪ್ಪನವರ, ಚಿದಾನಂದ ಗೌಡಗೌಂವಿ, ಬಿಲಾಲ ಇನಾಮದಾರ, ವಿಶ್ವನಾಥ ಹಿರೇಮಠ, ಬಸವರಾಜ ಹೂಗಾರ, ಶ್ರೀನಿವಾಸ ಗುರಜಾಲ, ಸುಜಾತ ಚೌಕಿಮಠ, ಶಾರದಾ ಚವ್ವಾಣ, ಎಸ್ ಎಸ್ ಸಾತಿಹಾಳ, ವಿಠ್ಠಲ ಸಿಂಧೆ, ಸಾಯಬಣ್ಣ ಮಾದರ, ರಾಜೇಂದ್ರ ಕೊರಡ್ಡಿ, ಭಾರತಿ ಮಿಜಿ೯ ಅವರಿಗೆ ಕಸಾಪದಿಂದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

