ಉದಯರಶ್ಮಿ ದಿನಪತ್ರಿಕೆ
ಚಡಚಣ: ಗೆಲುವು-ಸೋಲುಗಳನ್ನು ಸಮಾನವಾಗಿ ಸ್ವೀಕರಿಸುತ್ತಾ ಕ್ರೀಡಾ ಸ್ಫೂರ್ತಿಯಿಂದ ಮುನ್ನಡೆಯುವುದು ಪ್ರತಿಯೊಬ್ಬ ಕ್ರೀಡಾಪಟುವಿನ ಆದ್ಯ ಕರ್ತವ್ಯವಾಗಿದೆ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಸಮೀಪದ ನಿವರಗಿ ಗ್ರಾಮದಲ್ಲಿ ಶ್ರೀ ಸಂಗಮೇಶ್ವರ ಹಾಗೂ ಮಹಾಲಕ್ಷ್ಮೀ ಕ್ರಿಕೆಟ್ ಕ್ಲಬ್‌ಗಳ ಸಂಯುಕ್ತ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಭಾನುವಾರ (ನ.1) ಆಯೋಜಿಸಿದ್ದ ಭವ್ಯ ಟೆನಿಸ್‌ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡೆಯು ಯುವಜನರಲ್ಲಿ ಶಿಸ್ತು, ಸಮಯಪ್ರಜ್ಞೆ, ನಾಯಕತ್ವದ ಗುಣ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇಂತಹ ಪಂದ್ಯಾವಳಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸುತ್ತವೆ. ಯುವಕರು ಕ್ರೀಡೆ ಮತ್ತು ಶಿಕ್ಷಣ ಎರಡಕ್ಕೂ ಸಮಾನ ಆದ್ಯತೆ ನೀಡಿ, ತಮ್ಮ ಪ್ರತಿಭೆಯ ಮೂಲಕ ಗ್ರಾಮ, ಮತಕ್ಷೇತ್ರ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಶಿಕ್ಷಕ ರಮೇಶ ಮಲ್ಲಾಡಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬೀರಪ್ಪ ಬರಗುಡಿ, ನಿವರಗಿ ಮಾಜಿ ಜಿ.ಪಂ. ಸದಸ್ಯ ಭೀಮುಸಾಹುಕಾರ ಬಿರಾದಾರ, ನಿವರಗಿ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಹಿರಗಣ್ಣ ಪೂಜಾರಿ, ಮಹಾದೇವ ಓಂ. ಹೀರೆಕುರುಬರ, ಕಾಂಗ್ರೆಸ್ ಧುರೀಣ ಶ್ರೀಮಂತ ನಿಂ. ತೇಲಿ, ಪಿ.ಕೆ.ಪಿ.ಎಸ್. ಸದಸ್ಯರು, ಮಾನ ಗ್ರಾ.ಪಂ. ಅಧ್ಯಕ್ಷ ಶ್ಯಾಮರಾಯ ಜೀರಗಾಳೆ, ಜಾನ ಗ್ರಾ.ಪಂ. ಅಧ್ಯಕ್ಷ ಹಿರಗಣ್ಣ ವಿ. ಪೂಜಾರಿ, ಮಾಜಿ ಗ್ರಾ.ಪಂ. ಸದಸ್ಯ ನಿಂಗಪ್ಪ ಇಂಗಳೆ, ಬಸವರಾಜ ಉಮರಾಣಿ, ಬಸವರಾಜ ಹಲಸಂಗಿ, ತಮ್ಮಾರಾಯ ತೇಲಿ, ಅನಿಲ ದಾಂಡೆಕರ, ಸತೀಶ ಸಾಬಣಿ, ಕಾಶಿನಾಥ ಚೌಗಲೆ, ಕಲ್ಲಪ್ಪ ಹೇರಕಾರ, ಶ್ಯಾಮರಾವ ಬಿರಾದಾರ, ಚಂದ್ರಕಾಂತ ಡೊಳ್ಳಿ, ಬಸವರಾಜ ನಿವರಗಿ (ತೇಲಿ), ಸಂತೋಷ ಪೋಲಾದಿ, ಎಣಪೆ, ಗಣಪತಿ ಹೂಗಾರ ಶಿಕ್ಷಕರಾದ ಎನ್.ಎ. ಪಾಟೀಲ, ಸುನೀಲ ಯಳಮೇಲಿ, ಸೇರಿದಂತೆ ಗ್ರಾಮಸ್ಥರು ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.

