ಇಂಡಿ ಮತ್ತು ಚಡಚಣ ತಾಲೂಕುಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಓ ಆನಂದ ಪ್ರಕಾಶ ಮೀನಾ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಿ. ಇಂದಿನಿಂದ ಕೃಷ್ಣಾ ಕಾಲುವೆಗೆ ನೀರು ಬರುತ್ತಿದ್ದು ಎಲ್ಲ ಕೆರೆಗಳನ್ನು ತುಂಬಿ ಜನರಿಗೆ ಕುಡಿಯುವ ನೀರಿನ ಅನುಕೂಲವಾಗುವಂತೆ ಮಾಡಿ ಎಂದು ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆನಂದ ಪ್ರಕಾಶ ಮೀನಾ ಹೇಳಿದರು.
ನಗರದ ತಾ.ಪಂ ಸಬಾಭವನದಲ್ಲಿ ಇಂಡಿ ಮತ್ತು ಚಡಚಣ ತಾಲೂಕುಗಳ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಇ ಸ್ವತ್ತು ಅರ್ಜಿಗಳನ್ನು ತ್ವರಿತವಾಗಿ ವಿಲೆವಾರಿ ಮಾಡುವದು, ಭಾರತ ಜೋಡೊ ಪ್ರಗತಿ ಹಾಗೂ ಬಾಕಿ ಇರುವ ವಸತಿ ಯೋಜನೆಗಳಿಡಿ ಮನೆ ನಿರ್ಮಾಣ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ವಿಜಿ ರಾಮಜಿ ಯೋಜನೆಯಡಿ ಗ್ರಾಪಂ ಗಳಲ್ಲಿ ನೊಂದಾಯುತವಾಗಿರುವ ಅರ್ಹ ಕೂಲಿಕಾರರಿಗೆ ಉದ್ಯೋಗ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಅಲ್ಲದೆ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವದರ ಜೊತೆಗೆ ಕೂಲಿಕಾರರಿಗೆ ನಿಗದಿತ ಅವಧುಯೊಳಗೆ ಕೂಲಿ ಪಾವತಿಯಾಗುವಂತೆ ಕ್ರಮ ವಹಿಸಲು ತಿಳಿಸಿದರು.
ಇಂಡಿ ತಾಪಂ ಇಒ ಮಹಾದೇವಪ್ಪ ಏವೂರ, ಚಡಚಣ ಇಒ ಅಶೋಕಕುಮಾರ ರಾಠೋಡ, ಗ್ರಾಮೀಣ ನೀರಿ ಸರಬರಾಜು ಅಭಿಯಂತರ ಬಂಡಿ, ಸಂಜಯ ಖಡಗೇಕರ, ಪ್ರಕಾಶ ರಾಠೋಡ, ಶಿವದತ್ತ ಕೊಟ್ಟಲಗಿ ಮತ್ತಿತರಿದ್ದರು.

