ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಗತ್ತಿನ ಮೂಲ ಸಂಸ್ಕೃತಿಯನ್ನು ಒಳಗೊಂಡ ಕುರುಬ ಜನಾಂಗದ ಕಲೆಗಳಾದ ಡೊಳ್ಳಿನ ಪದ, ಡೊಳ್ಳಿನ ಕೈಪಟ್ಟು, ಡೊಳ್ಳಿನ ವಾಲಗ, ಡೊಳ್ಳು ಕುಣಿತ, ದಟ್ಟಿ ಕುಣಿತ, ರ್ವಾಣ, ಹರಕೆ ಹಾಡು, ಹೊಳೆ ಪೂಜೆ ಹಾಡು, ಕಂಬಳಿ ದ್ವಜ ಕುಣಿತ, ಸತ್ತಿಗೆ ಕುಣಿತ, ವೀರಗಾರ ಕುಣಿತ,ಕಹಳೆ, ಗೊರವರ ಹಾಡು, ಗೊರವರ ಕುಣಿತ, ವೀರ ಮಕ್ಕಳ ಹಾಡು, ವೀರಮಕ್ಕಳ ಕುಣಿತ, ವಗ್ಗಯ್ಯರ ಪದ, ವಗ್ಗಯ್ಯರ ಕುಣಿತ, ಅಲಗು ಕುಣಿತ, ಗುಂಡು ಬಡೆಯುವ ಕುಣಿತ, ಟಗರು ಜೋಗಿ ಕಥೆ, ಟಗರು ಜೋಗಿ ಕುಣಿತ ಚೌಗಢ ವಾದನ, ತಾಳವಾದನ, ಹೆಳವರ ಹೇಳಿಕೆ, ಗಂಗೀ ಶೀತಾಳ ಪದ, ಬೆಡಗಿನ ವಚನಗಳು, ಸವಾಲ್ ಜವಾಬ್ ಹಾಡುಗಳು ಮುಂತಾದ ಕಲೆಗಳು ಮತ್ತು ಕುರಿ ಸಾಕಾಣಿಕೆ, ಪಶು ಪಾಲನೆ, ಕಂಬಳಿ ನೇಕಾರಿಕೆ, ಟಗರು ಕಾಳಗ, ದಡ್ಡಿ ಹಬ್ಬ, ಭಂಡಾರ ಜಾತ್ರೆಗಳು, ಸಿದ್ದರ ಪಲ್ಲಕ್ಕಿ ಭೇಟಿ, ಮುಂತಾದ ವಿಶೇಷ ಸಂಸ್ಕೃತಿಯನ್ನು ಒಳಗೊಂಡಿರುವ ಅತ್ಯಂತ ಹಿಂದುಳಿದಿರುವ ಕುರುಬ ಜನಾಂಗದ ಕಲೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ರಾಜ್ಯದ ಕುರುಬರೆಲ್ಲರಿಗೂ ಅನುಕೂಲವಾಗುವಂತೆ ಕುರುಬರ ಕಲೆ ಮತ್ತು ಸಂಸ್ಕೃತಿ ಅಕಾಡೆಮಿ ಮಾಡಿ ಸಾಂಸ್ಕೃತಿಕ ಅವಕಾಶಗಳಿಂದ ವಂಚಿತರಾಗಿರುವ ಮುಗ್ಧ ಜನಾಂಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದು ಧನಗೊಂಡ ಮಾತನಾಡುತ್ತಾ ಈ ಅಕಾಡೆಮಿಯು ರಚನೆಯಾದರೆ ಕುರುಬರ ಕಲೆಗಳನ್ನು ರಕ್ಷಣೆ ಮಾಡುವ ರಕ್ಷಣಾ ಕವಚವಾದಂತಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಶ್ರೀ ಸತೀಶ್ ಅಡವಿ, ಮಲ್ಲು ಬಿದರಿ, ಮಲ್ಲಣ್ಣ ಶಿರಶ್ಯಾಡ ರಾಜು ಕಗ್ಗೋಡ, ಸಿದ್ದರಾಮ ಪೂಜಾರಿ, ಇತರರು ಉಪಸ್ಥಿತರಿದ್ದರು

