ಸಿಂದಗಿಯಲ್ಲಿ ೧೧ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ | ಸಾವಿರಾರು ಕಾರ್ಯಕರ್ತರೊಂದಿಗೆ ಬೆಂಬಲ ಸೂಚಿಸಿದ ಶಾಸಕ ಅಶೋಕ ಮನಗೂಳಿ ಘೋಷಣೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದ ಬಸವೇಶ್ವರ ಸರ್ಕಲ್ ಹತ್ತಿರ ಗೋಕಾಕ ಚಳವಳಿಯ ರೂವಾರಿ ಶ್ರೀ ರೇ.ಚ.ರೇವಡಿಗಾರ ಪ್ರತಿಷ್ಠಾನ ಹಾಗೂ ೩೭೧(ಜೆ) ಹೋರಾಟ ಸಮಿತಿ ನೇತೃತ್ವದಲ್ಲಿ ೧೧ ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಸಿಂದಗಿ ಮತ್ತು ಆಲಮೇಲ ಬ್ಲಾಕ್ ಕಾಂಗ್ರೆಸ್ ಸಮಿತಿಯ ಸಾವಿರಾರು ಕಾರ್ಯಕರ್ತರೊಂದಿಗೆ ಶಾಸಕ ಅಶೋಕ ಮನಗೂಳಿ ಬೆಂಬಲ ಸೂಚಿಸಿದರು.
ನಂತರ ಮಾತನಾಡಿದ ಶಾಸಕರು, ಸಿಂದಗಿ, ಇಂಡಿ, ಮುದ್ದೆಬಿಹಾಳ, ಬಾಗೇವಾಡಿ ತಾಲೂಕುಗಳು ನಿಜಾಮರ ಕಾಲದಿಂದಲೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತೀ ಹಿಂದೂಳಿದ ಪ್ರದೇಶಗಳಾಗಿವೆ. ಅದರ ಅಡಿಯಲ್ಲಿ ೩೭೧ ಜೆ ಜಾರಿಯಾಗಬೇಕು ಎಂದು ಅ.೩ ರಿಂದ ಪ್ರಾರಂಭವಾದ ಹೋರಾಟದ ಕಿಚ್ಚು ಅದು ಜಾರಿಯಾಗುವರೆಗೂ ನಿಲ್ಲುವುದಿಲ್ಲ. ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಈ ಸೌಲಭ್ಯ ನೀಡುವ ಸಂದರ್ಭದಲ್ಲಿ ಸಂಸದರು ಅಧಿಕಾರದಲ್ಲಿದ್ದರು ಕೂಡಾ ೩೭೧ ಜೆ ನನ್ನ ಗಮನಕ್ಕೆ ಇಲ್ಲ ಎಂದರೆ ಆಗಿದ್ದ ಶಾಸಕರು ಮಲಗಿದ್ದರಾ? ಸಂಸದರು ತಮ್ಮ ನೇತೃತ್ವದಲ್ಲಿ ಕೇಂದ್ರ ಗೃಹ ಸಚಿವರಲ್ಲಿ ಸಮಯವನ್ನು ನಿಗದಿಗೊಳಿಸಿ ಜಿಲ್ಲೆಯ ಶಾಸಕರಿಗೆ ಬೇಟಿ ಮಾಡಿಸಿದ್ದಾದರೆ ಈ ವಿಷಯದ ಕುರಿತು ಚರ್ಚೆ ನಡೆಸಲು ಸಿದ್ದರಿದ್ದೇವೆ. ಕೇಂದ್ರದಿಂದ ಇದರ ಮರು ಪರಿಶೀಲನೆಗೆ ಆದೇಶ ನೀಡಿದರೆ ರಾಜ್ಯ ಸರಕಾರದಿಂದ ಮಂಜೂರು ಮಾಡಿಸಿಕೊಳ್ಳುವ ಜವಾಬ್ದಾರಿ ನಮ್ಮದು. ಇದರಿಂದ ಈ ಭಾಗದ ಜನರಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ನ್ಯಾಯ ದೊರಕಿಸಿದಂತಾಗುತ್ತದೆ ಎಂದರು.
೩೭೧ಜೆ ಹೋರಾಟದ ಮುಖಂಡ ರಂಗನಾಥ ತೋರ್ಫೆ, ದಾನಪ್ಪಗೌಡ ಚನ್ನಗೊಂಡ ವಕೀಲರು, ಎಂ.ಎಂ.ಹಂಗರಗಿ, ದಸಂಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಡಾ. ಸಮೀರ ಹಾದಿಮನಿ, ಸಾಯಬಣ್ಣ ಪುರದಾಳ, ರಮೇಶ ನಡುವಿನಕೇರಿ, ರಾಹುಲ ಗುಬ್ಬೇವಾಡ, ಸಂಗಣ್ಣ ಬ್ಯಾಕೋಡ, ಗುರುರಾಜ ಪಡಶೆಟ್ಟಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಿಕಾರ್ಡ ಬ್ಯಾಂಕ ಅದ್ಯಕ್ಷ ಶಿವು ಹತ್ತಿ, ಎಪಿಎಂಸಿ ಅದ್ಯಕ್ಷ ಕಲ್ಲಪ್ಪ ಬಿಸನಾಳ, ಗ್ಯಾರೆಂಟಿ ಸಮಿತಿ ಅದ್ಯಕ್ಷ ಸಂತೋಷ ಸಾಲಿ, ಬ್ಲಾಕ ಕಾಂಗ್ರೆಸ್ ಸಮಿತಿ ಅದ್ಯಕ್ಷ ಸುರೇಶ ಪೂಜಾರಿ, ಸಿದ್ದರಾಮ ಪಾಟೀಲ, ಭೀಮಣ್ಣ ಬಿರಾದಾರ, ಎಂ.ಎ.ಖತೀಬ, ಬಸವರಾಜ ಮಾರಲಬಾವಿ, ಸಂದೀಪ ಚೌರ, ಮಹ್ಮದಪಟೇಲ ಬಿರಾದಾರ, ಹಾಸೀಂ ಆಳಂದ, ಜಯಶ್ರೀ ಹದನೂರ, ಪ್ರತಿಬಾ ಚಳ್ಳಗಿ, ಮಡ್ಡಪ್ಪ ಪೂಜಾರಿ, ರಾಮಚಂದ್ರ ಕಲಬುರ್ಗಿ, ಬಾಷಾಸಾಬ ತಾಂಬೋಳಿ, ಸುರೇಶ ಚೌಧರಿ, ಕುಮಾರ ದೇಸಾಯಿ, ವರ್ಷಾ ಪಾಟೀಲ, ಸಲೀಂ ಕಣ್ಣಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಬಾಗವಹಿಸಿದ್ದರು.

