ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯಲ್ಲಿ ಒಂದು ದಿನದ ರಾಷ್ಟ್ರೀಯ ವೆಬಿನಾರ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ.ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ರಾಜ್ಯಶಾಸ್ತç ವಿಭಾಗದಿಂದ ಅ.೦೮ ರಂದು ಹಮ್ಮಿಕೊಳ್ಳಲಾಗಿದ್ದ ವಿಕ್‌ಸಿತ್ ಭಾರತ್@೨೦೪೭ : ಅಭಿವೃದ್ದಿ ಹೊಂದಿದ ಭಾರತಕ್ಕಾಗಿ ಆಡಳಿತವನ್ನು ಪರಿವರ್ತಿಸುವುದು' ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ಆನ್ಲೈನ್ ವೆಬಿನಾರ್ ಹಮ್ಮಿಕೊಳ್ಳಲಾಯಿತು. ವೆಬಿನಾರನಲ್ಲಿ ಸಂಪನ್ಮೂಲ ವ್ಯಕ್ತಿ ಮಿಜೋರಾಂ ವಿವಿ ಸಾರ್ವಜನಿಕ ಆಡಳಿತದ ಪ್ರಾಧ್ಯಾಪಕ ಡಾ.ಟಿ.ಸದಾಶಿವಮ್ವಿಕ್‌ಸಿತ್ ಭಾರತ್@೨೦೪೭ : ಪರಿವರ್ತನಾ ಆಡಳಿತಕ್ಕೆ ವೇಗವರ್ಧಕವಾಗಿ ಸಾರ್ವಜನಿಕ ಆಡಳಿತ’ ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ವಿಕ್ಷಿತ್ ಭಾರತ್ @೨೦೪೭ ರ ಪ್ರಮುಖ ಸ್ತಂಭಗಳು, ಹೊಸ ಸಾರ್ವಜನಿಕ ನಿರ್ವಹಣೆ,ಹೊಸ ಸಾರ್ವಜನಿಕ ಆಡಳಿತ, ಸಾರ್ವಜನಿಕ ಸೇವೆ, ಸಹಕಾರಿ ಆಡಳಿತ, ಡಿಜಿಟಲ್ ಯುಗದ ಆಡಳಿತ ಸಾಮರ್ಥ್ಯ, ಎಐ ಬಳಕೆ, ಅಭಿವೃದ್ಧಿ ಹೊಂದಿದ ಭಾರತವು ವ್ಯಾಪಾರ, ತಂತ್ರಜ್ಞಾನ ಮತ್ತು ಜಾಗತಿಕ ಕಾರ್ಯಸೂಚಿಗಳ ಬಗ್ಗೆ ಅತ್ಯಮೂಲ್ಯ ವಿಚಾರಗಳನ್ನು ಮಂಡಿಸಿದರು.
ಹೈದ್ರಾಬಾದ್‌ನ ಆದಾಯ ತೆರಿಗೆ(ಐಆರ್‌ಎಸ್) ಆಯುಕ್ತ ಶಹನವಾಜ್ ಉಲ್ ರೆಹಮಾನ್ `ವಿಕ್‌ಸಿತ್ ಭಾರತ್@೨೦೪೭ : ಡಿಜಿಟಲ್ ಆಡಳಿತ ಮತ್ತು ಸಮಗ್ರ ಅಭಿವೃದ್ದಿಯ ಪಾತ್ರ’ ಎಂಬ ವಿಷಯದ ಕುರಿತು ವಿಚಾರವನ್ನು ಮಂಡಿಸಿ, ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರಿ ಸೇವೆಗಳು, ಮಾಹಿತಿ ಮತ್ತು ನಿರ್ಧಾರಗಳನ್ನು ವೇಗವಾಗಿ, ಪಾರದರ್ಶಕವಾಗಿ, ಜವಾಬ್ದಾರಿಯುತವಾಗಿ ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಬಹುದು ಎಂದರು.
ಎಸ್‌ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀನಿವಾಸ್ ಎ.ಟಿ ಮಾತನಾಡಿ, ಅಭಿವೃದ್ದಿ ಹೊಂದಿದ ಭಾರತಕ್ಕಾಗಿ ಆಡಳಿತವನ್ನು ಪರಿವರ್ತಿಸುವುದು ಅತ್ಯವಶ್ಯಕವಾಗಿದೆ. ಇಂದು ನಾವು ಆಧುನಿಕ ಜಗತ್ತಿನಲ್ಲಿ ಇದ್ದೇವೆ. ಇ-ಆಳಿತದ ಮಹತ್ವ, ಅರಿವು ಅವಶ್ಯಕ. ಕೇಂದ್ರ, ರಾಜ್ಯ ಸರ್ಕಾರಗಳು ಅಳವಡಿಸಿಕೊಂಡಿರುವ ಇ-ಆಡಳಿತ, ತಂತ್ರಜ್ಞಾನ, ಎಐ ಬಳಕೆ ವಿವಿಧ ಆಯಾಮಗಳ ಪರಿಣಾಮಗಳ ಅರಿವು ಕೂಡ ನಮ್ಮಲ್ಲಿರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ, ಎಸ್.ಎ.ಪಾಟೀಲ, ರಾಜ್ಯಶಾಸ್ತç ವಿಭಾಗದ ಮುಖ್ಯಸ್ಥೆ, ಸಂಚಾಲಕಿ ಡಾ.ತರನ್ನುಮ್ ಜಬೀನ್ ಖಾನ್, ಪ್ರೊ.ರೂಪಾ ಮೋಟಗಿ,ಡಾ.ಧಾನೇಶ್ವರಿ ಮೂಲಿಮನಿ, ಪ್ರೊ.ಪವನ್ ಮಹೀಂದ್ರಕರ, ಮಲಿಕ್ ಎಲ್.ಜಮಾದಾರ,ಭೀಮಸಿ ಮದರಕಂಡಿ, ಜಿ.ಎಂ.ಗೇಂಡ್,ಸಂತೋಷ ವಂಬಾಸೆ, ವಿರೇಶ ಕುಳಗೇರಿ ಹಾಗೂ ಆನಲೈನ್ ವೆಬಿನಾರ್ ನಲ್ಲಿ ವಿವಿಧ ರಾಜ್ಯದ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
