ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳು, ಸಂಸದೀಯ ಕಾರ್ಯವಿಧಾನಗಳ ಕುರಿತು ಜ್ಞಾನ, ಅರಿವು ಮೂಡಿಸುವ ತಾಲ್ಲೂಕು ಮಟ್ಟದ ಯುವ ಸಂಸತ್ತು ಅಧಿವೇಶನ ೨೦೨೬ ಶೈಕ್ಷಣಿಕ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಪಟ್ಟಣದ ಸಿದ್ಧೇಶ್ವರ ಪ್ರೌಢಶಾಲೆ ಸಭಾಭವನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿನೀಯರು ಹೆಚ್ಚಾಗಿ ಸಂಸತ್ತಿನ ಮಾದರಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಅಧಿವೇಶನದ ಸಭಾಧ್ಯಕ್ಷರು, ಸಚಿವ ಸಂಪುಟದ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಮುಕ್ತ ಹಾಗೂ ಸೂಕ್ತ ಅವಕಾಶ ಕಲ್ಪಿಸುವುದರ ಮೂಲಕ ಅಧಿವೇಶನ ಯಶಸ್ವಿಗೊಳಿಸಿದರು.
ಅಧಿವೇಶನದಲ್ಲಿ ನಿರುದ್ಯೋಗ ಸಮಸ್ಯೆ, ಬೆಂಗಳೂರು ನಗರ ಅಭಿವೃದ್ಧಿ, ಪ್ರಾಥಮಿಕ ಶಿಕ್ಷಣ ವ್ಯವಸ್ಥೆ, ಗ್ರಾಮೀಣ ಕುಡಿಯುವ ನೀರು ಪೂರೈಕೆ, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ, ಜಲಜೀವನ ಯೋಜನೆ, ಕಾಲುವೆಗೆ ನೀರು ಪೂರೈಕೆ, ಬರಗಾಲಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳು, ಮಾಹಿತಿ ತಂತ್ರಜ್ಞಾನದ ಸೈಬರ್ ಕ್ರೆöÊಮ್, ರೈತರ ಸಾಲಮನ್ನಾ ದಂತ ಪ್ರಚಲಿತ ವಿದ್ಯಮಾನಗಳ ಕುರಿತು ನಡೆದ ಚರ್ಚೆಗಳು ವಿಶೇಷ ಗಮನ ಸೆಳೆದವು.
ತಹಶೀಲ್ದಾರ್ ನಿಂಗಪ್ಪ ಬಿರಾದಾರ, ಗ್ರೇಡ್-೨ ತಹಶೀಲ್ದಾರ್ ಎಂ.ಜಿ.ಬಿರಾದಾರ, ಶಿರಸ್ತೇದಾರ ಸುರೇಶ ಮ್ಯಾಗೇರಿ, ತಾಲ್ಲೂಕು ಪಂಚಾಯಿತಿ ಇಓ ಭಾರತಿ ಚೆಲುವಯ್ಯ, ಬಿಇಓ ಟಿ.ಎಸ್.ಆಲಗೂರ, ಶಿಕ್ಷಣ ಸಂಯೋಜಕ ಎಸ್.ಎಮ್.ಕಪನಿಂಬರಗಿ, ಸಿಆರ್‌ಪಿ ವಿಜಯಲಕ್ಷಿö್ಮÃ ನವಲಿ, ಸಮಾಜ ಕಲ್ಯಾಣ ಇಲಾಖೆಯ ಭವಾನಿ ಪಾಟೀಲ ಸಿದ್ಧೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವ್ಹಿ.ಕೆ.ಪಾಟೀಲ, ಆಡಳಿತಾಧಿಕಾರಿ ಕೆ.ಪಿ.ಮಾಲಿಪಾಟೀಲ, ಶಿಕ್ಷಕ ಜಿ.ಪಿ.ಬಿರಾದಾರ ಸಹಿತ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

