ಉದಯರಶ್ಮಿ ದಿನಪತ್ರಿಕೆ
ಇಂಡಿ: ತಾಲೂಕಿನ ವಿವಿಧ ಗ್ರಾಮಗಳ ಜೋಡೆತ್ತಿನ ರೈತರು ತಮ್ಮ ಜೋಡೆತ್ತಿನ ಬಂಡಿಗಳೊಂದಿಗೆ ಬುಧವಾರ ಆಗಮಿಸಿ ಜೊಡೆತ್ತಿನ ರೈತರ ಬೇಡಿಕೆಗಳನ್ನು ಸರಕಾರ ಈಡೇರಿಸುವಂತೆ ಶಿರಸ್ತೆದಾರ ಎಸ್.ಆರ್ ಮುಜಗೊಂಡ ಅವರ ಮೂಲಕ ಸರಕಾರಕ್ಕೆ ಹಕ್ಕೋತ್ತಾಯ ಪತ್ರ ಸಲ್ಲಿಸಿದರು.
ತಾಲೂಕಿನ ಅಥರ್ಗಾ, ಬೆನಕನಳ್ಳಿ, ಶಿರಕನಳ್ಳಿ, ತಡವಲಗಾ, ಬೋಳೆಗಾಂವ ಗ್ರಾಮದಿಂದ ಸುಮಾರು ೧೨೦ಕ್ಕೂ ಹೆಚ್ಚು ಜೋಡೆತ್ತಿನ ರೈತರು ಪಟ್ಟಣದ ಸೇವಾಲಾಲ ವೃತ್ತದಿಂದ ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಸೇವಾಲಾಲ ವೃತ್ತದಲ್ಲಿ ತಹಸೀಲ್ದಾರರವರಿಗೆ ಮನವಿ ಸಲ್ಲಿಸಿದರು.
ಅಲ್ಲಿ ಮಾತನಾಡಿದ ರೈತ ಮುಖಂಡ ಗಣಪತಿ ಬಾಣಿಕೋಲ ಜೋಡೆತ್ತಿನ ಕೃಷಿಕರಿಂದ ತಾಲೂಕಿನ ಗ್ರಾಮಗಳು ಜೊಡೆತ್ತಿನ ಕೃಷಿಕರಿಂದ ಮಾತ್ರ ಉಳಿಯಲು ಸಾದ್ಯ, ಜೋಡೆತ್ತಿನ ಕೃಷಿಕರು ಸಂಪೂರ್ಣವಾಗಿ ನಾಶವಾದರೆ ಮುಂದೆ ಎಂತಹ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದನ್ನು ಜಗತ್ತಿನ ಎಲ್ಲ ವಿವಿಗಳು ಸಂಶೋಧನೆಗಳಿಂದ ತಿಳಿದು ಬಂದಿದೆ. ಮೂರು ವರ್ಷಗಳಿಂದ ಜೊಡೆತ್ತು ಉಳಿಸಲು ಜಾಗೃತಿ ಮೂಡಿಸಲಾಗುತ್ತಿದೆ. ನಂದಿ ಸಂಸ್ಕೃತಿ ಪುನಚೇತನಕ್ಕಾಗಿ ಸರಕಾರ ಜೋಡೆತ್ತಿನ ರೈತರಿಗೆ ಪ್ರತಿ ತಿಂಗಳು ರೂ ಹನ್ನೊಂದು ಸಾವಿರ ಪ್ರೋತ್ಸಾಹ ಧನ ನೀಡಬೇಕು, ರಾಜ್ಯ ಬಜೆಟಿನಲ್ಲಿ ಪ್ರತಿಶತ ಶೇ ೧೦ ರಷ್ಟು ಜೋಡೆತ್ತಿನ ರೈತರಿಗೆ ಮೀಸಲಾತಿ ನೀಡಬೇಕು ಎಂದು ಹಕ್ಕೋತ್ತಾಯ ಮಂಡಿಸಿದರು.
ಬಸವರಾಜ ಪಾಟೀಲ ಹಂಜಗಿ, ಬಸೀರ ಅಹಮ್ಮದ ಬಳಿಗಾರ, ಕುಲ್ಲಪ್ಪ ಹಿಟ್ನಳ್ಳಿ, ರುದ್ರೇಶ ಮಠ, ಕುಲಪ್ಪ ನಿಂಬಾಳ, ಅಂಬಣ್ಣ ಕುಂಬಳ, ರೇವಣಸಿದ್ದ ಬಾಳಿ, ಸತೀಶ ಜಿಗಜಿಣಗಿ, ಶಿವಾನಂದ ಹುಬ್ಬಳ್ಳಿ, ಕಾಶಿನಾಥ ಹಚಡದ, ರಾಯಗೊಂಡ ಆಸಂಗಿ, ಕಾಸುಗೌಡ ಬಿರಾದಾರ, ಶೀಲವಂತ ಉಮರಾಣಿ ಮತ್ತಿತರರಿದ್ದರು.

