Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬೇಡಿಕೆ ಈಡೇರಿಕೆಗೆ ರೈತರಿಂದ ಜೋಡೆತ್ತಿನ ಬಂಡಿಗಳ ರ್ಯಾಲಿ

ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ!

ದೇವರಹಿಪ್ಪರಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಅಥಣಿಯಲ್ಲಿ ರಸ್ತೆ ಸುರಕ್ಷತೆ ಕ್ರಮಗಳಿಗೆ ಆಗ್ರಹಿಸಿ ಪ್ರತಿಭಟನೆ
(ರಾಜ್ಯ ) ಜಿಲ್ಲೆ

ಅಥಣಿಯಲ್ಲಿ ರಸ್ತೆ ಸುರಕ್ಷತೆ ಕ್ರಮಗಳಿಗೆ ಆಗ್ರಹಿಸಿ ಪ್ರತಿಭಟನೆ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅತಿವೇಗದ ವಾಹನಗಳಿಗೆ ಕಡಿವಾಣ ಹಾಕಲು ಒತ್ತಾಯ | ಜೀಬ್ರಾ ಕ್ರಾಸಿಂಗ್, ಸ್ಪೀಡ್ ಬ್ರೇಕರ್, ವೇಗಮಿತಿ ಕಟ್ಟುನಿಟ್ಟಾಗಿ ಜಾರಿಗೆ ಆಗ್ರಹ | ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ!

ಉದಯರಶ್ಮಿ ದಿನಪತ್ರಿಕೆ

ಅಥಣಿ: ಪಟ್ಟಣದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ಸಂಚಾರ, ಟಿಪ್ಪರ್‌ಗಳ ಅತಿ ವೇಗ ಹಾಗೂ ಅತಿವೇಗದ ವಾಹನಗಳಿಂದ ಸಾರ್ವಜನಿಕರ ಸುರಕ್ಷತೆ ಪ್ರಶ್ನಾರ್ಹವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಬುಧವಾರ ಶಿವಯೋಗಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
‘ಮನವಿ ಕೊಟ್ಟರೂ ಕ್ರಮವಿಲ್ಲ; ಇನ್ನೆಷ್ಟು ಅಪಘಾತ ಬೇಕು?’:ರಸ್ತೆ ಸುರಕ್ಷತೆಗೆ ಅಗತ್ಯವಾದ ಸ್ಪೀಡ್ ಬ್ರೇಕರ್‌ಗಳನ್ನು ಅಳವಡಿಸಬೇಕು, ಪ್ರಮುಖ ಸ್ಥಳಗಳಲ್ಲಿ ಜೀಬ್ರಾ ಕ್ರಾಸಿಂಗ್ ಗುರುತುಗಳನ್ನು ಸ್ಪಷ್ಟವಾಗಿ ಹಾಕಬೇಕು ಹಾಗೂ ವಾಹನಗಳ ವೇಗ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬುದು ಪ್ರತಿಭಟನಾಕಾರರ ಆಕ್ರೋಶವಾಗಿತ್ತು.
ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ವಾಹನಗಳ ವೇಗಕ್ಕೆ ಮಿತಿ ವಿಧಿಸುವುದು ಮಾತ್ರವಲ್ಲದೆ, 30 ರಿಂದ 40 ಕಿ.ಮೀ. ವೇಗಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ನಿಯಮ ಪಾಲಿಸದೆ ಅತಿವೇಗದಲ್ಲಿ ಸಂಚರಿಸುವ ವಾಹನಗಳ ವಿರುದ್ಧ ಸಂಚಾರ ಪೊಲೀಸರು ನಿರಂತರ ತಪಾಸಣೆ ನಡೆಸಬೇಕು ಎಂಬ ಆಗ್ರಹವೂ ಕೇಳಿಬಂತು.
ಎರಡು–ಮೂರು ದಿನಗಳೊಳಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಹೋರಾಟದಲ್ಲಿ ಪ್ರಮುಖರಾದ ಗಿರೀಶ ಬುಟಾಳಿ, ಸಂಪತಕುಮಾರ್ ಶೆಟ್ಟಿ, ಪ್ರಶಾಂತ ತೋಡಕರ, ಉದಯ ಮಕಾಣಿ, ವಿನಯಗೌಡ ಪಾಟೀಲ, ಅಣ್ಣಸಾಬ ತೆಲಸಂಗ, ವಿಜಯ ಕನಮಡಿ, ಜಗನ್ನಾಥ ಬಾಮನೆ ಸೇರಿದಂತೆ ಅನೇಕರಿದ್ದರು.

ಬ್ಯಾನರ್‌ಗಳನ್ನು ತೆರವುಗೊಳಿಸಲು ಆಗ್ರಹ

ಅನುಮತಿ ಇಲ್ಲದೆ ಅಥವಾ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಅಳವಡಿಸಿರುವ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು. ವಿಶೇಷವಾಗಿ ತಿರುವು, ವೃತ್ತ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ದೃಷ್ಟಿಗೆ ಅಡ್ಡಿಯಾಗುವ ಯಾವುದೇ ಫಲಕ ಅಥವಾ ಬ್ಯಾನರ್ ಇರದಂತೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಬೇಡಿಕೆ ಈಡೇರಿಕೆಗೆ ರೈತರಿಂದ ಜೋಡೆತ್ತಿನ ಬಂಡಿಗಳ ರ್ಯಾಲಿ

ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ!

ದೇವರಹಿಪ್ಪರಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ

ಅ.೨ರಂದು ಭೂಮಾಪಕರ ನೇಮಕಾತಿ ಪರೀಕ್ಷೆ :ನಿಷೇಧಾಜ್ಞೆ ಜಾರಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬೇಡಿಕೆ ಈಡೇರಿಕೆಗೆ ರೈತರಿಂದ ಜೋಡೆತ್ತಿನ ಬಂಡಿಗಳ ರ್ಯಾಲಿ
    In (ರಾಜ್ಯ ) ಜಿಲ್ಲೆ
  • ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯಾಧಿಕಾರಿಗಳ ದಾಳಿ!
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧ
    In (ರಾಜ್ಯ ) ಜಿಲ್ಲೆ
  • ಅ.೨ರಂದು ಭೂಮಾಪಕರ ನೇಮಕಾತಿ ಪರೀಕ್ಷೆ :ನಿಷೇಧಾಜ್ಞೆ ಜಾರಿ
    In (ರಾಜ್ಯ ) ಜಿಲ್ಲೆ
  • ವಿಜಯಪುರ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವಿ ಅನುಷ್ಠಾನ
    In (ರಾಜ್ಯ ) ಜಿಲ್ಲೆ
  • ಕತನಕಹಳ್ಳಿಯಲ್ಲಿ ಸಮುದಾಯ ಮಧ್ಯಸ್ಥಿಕೆ ಅರಿವು
    In (ರಾಜ್ಯ ) ಜಿಲ್ಲೆ
  • ಮಧ್ಯಸ್ಥಿಕೆಯ ಅಭಿಯಾನ ೩.೦: ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶ
    In (ರಾಜ್ಯ ) ಜಿಲ್ಲೆ
  • ಭೀಮ್ ಆರ್ಮಿ ಭಾರತ್ ಮಿಷನ್‌ಗೆ ನೂತನ ಸದಸ್ಯರ ಸೇರ್ಪಡೆ
    In (ರಾಜ್ಯ ) ಜಿಲ್ಲೆ
  • ವಚನ ದೀಪವಾಗಿ ಬೆಳಗಿದ ಡಾ.ಹಳಕಟ್ಟಿ :ಡಾ.ಮಹಾಂತೇಶ
    In (ರಾಜ್ಯ ) ಜಿಲ್ಲೆ
  • ಅಥಣಿಯಲ್ಲಿ ರಸ್ತೆ ಸುರಕ್ಷತೆ ಕ್ರಮಗಳಿಗೆ ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.