Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಬಸವಣ್ಣನವರು ಬದುಕಿದ್ದು ಮೂವತ್ತಾರು ವರ್ಷಗಳು

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 15,2026

ನಾವೇ ಬದಲಾವಣೆಯ ಭಾಗವಾಗಬೇಕು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಬಸವಣ್ಣನವರು ಬದುಕಿದ್ದು ಮೂವತ್ತಾರು ವರ್ಷಗಳು
ವಿಶೇಷ ಲೇಖನ

ಬಸವಣ್ಣನವರು ಬದುಕಿದ್ದು ಮೂವತ್ತಾರು ವರ್ಷಗಳು

By No Comments5 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ. ಶಶಿಕಾಂತ ಪಟ್ಟಣ.
ರಾಮದುರ್ಗ – ಪುಣೆ
ಮೊ: 9552002338

ಉದಯರಶ್ಮಿ ದಿನಪತ್ರಿಕೆ

ಮಹಾತ್ಮಾ ಬುದ್ಧನ ನಂತರ ಸುಮಾರು 1700 ವರ್ಷದ ನಂತರ ಭಾರತ ನೆಲದಲ್ಲಿ ಮತ್ತೊಂದು ಕ್ರಾಂತಿಯ ಕಿಡಿ ಹತ್ತಿತು. ಅದುವೇ ಮುಂದೆ ಕಲ್ಯಾಣ ಸಮಗ್ರ ಕ್ರಾಂತಿಗೆ ಮುನ್ನುಡಿಯಾಯಿತು. ವರ್ಗ ವರ್ಣ ಆಶ್ರಮ ಲಿಂಗ ಭೇದಗಳನ್ನು ಕಿತ್ತೆಸೆದು ಸಾರ್ವಕಾಲಿಕ ಸಮಾನತೆಯ ಸುಂದರ ಮುಕ್ತ ಸಮಾಜವನ್ನು ಕಟ್ಟಿದನು ಬಸವಣ್ಣ. ಪುರಾಣ ಪುಣ್ಯ ಕಥೆಗಳು ಏನೆ ಹೇಳಲಿ ಭಾರತದಲ್ಲಿಯೇ ಬಸವಣ್ಣ ಮೊಟ್ಟ ಮೊದಲ ಸ್ವತಂತ್ರ ವಿಚಾರವಾದಿ ಎಂದು ಇಂಗ್ಲೆಂಡಿನ ಸರ್ ಆರ್ಥರ್ ಮೈಲ್ಸ್ 1933 ರಲ್ಲಿ The Land of Lingam ಎಂಬ ಪುಸ್ತಕದಲ್ಲಿ ಹೇಳಿದ್ದಾರೆ.
ಬಸವಣ್ಣನವರ ಕಾಲ ಜೀವನ ಜನ್ಮ ಐಕ್ಯದ ಬಗ್ಗೆ ಹಲವು ಬಗೆಯ ಭಿನ್ನ ಭಿನ್ನ ವಿಚಾರಗಳು ಪ್ರಸ್ತುತಗೊಂಡಿವೆ. ಬಸವಣ್ಣನವರು ಬದುಕಿದ್ದು 63 ವರ್ಷವೆಂತಲೂ, 65 ವರ್ಷವೆಂತಲೂ, ಇನ್ನೂ ಅನೇಕರು ಬಸವಣ್ಣನವರು ಬದುಕಿದ್ದು ಕೇವಲ ಮೂವತ್ತಾರು ವರ್ಷವೆಂತಲೂ ಹೇಳುತ್ತಾರೆ. ಹಾಗಿದ್ದರೆ ಅವರ ಜನ್ಮ ಹುಟ್ಟು ಐಕ್ಯದ ಬಗ್ಗೆ
ತಾರ್ಕಿಕವಾಗಿ ಚರ್ಚಿಸೋಣಾ.
ಬಸವಣ್ಣನವರು ಹುಟ್ಟಿದ್ದು 1131. ಡಾ. ಆರ್ ಸಿ ಹಿರೇಮಠರು ಡಾ ಸಿದ್ದಯ್ಯ ಪುರಾಣಿಕರು ಮುಂತಾದ ಅನೇಕರು ಬಸವಣ್ಣನವರ ಜನ್ಮ ದಾಖಲೆಯನ್ನು ಸಂಶೋಧಿಸಿ ದಾಖಲಿಸಿದ್ದಾರೆ. ಕಲ್ಯಾಣ ರಕ್ತ ಸಿಕ್ತ ಹೋರಾಟವು ಕ್ರಾಂತಿಯು 1167 ರಲ್ಲಿ ನಡೆದಿದೆ. ಅದೇ ವರ್ಷ ಬಿಜ್ಜಳನ ಕೊಲೆಯಾಗಿದೆ ಮತ್ತು ಬಸವಣ್ಣನವರು ಅದೇ ವರ್ಷ ಐಕ್ಯವಾಗಿದ್ದಾರೆ. ಇದಕ್ಕೆ ಅನೇಕ ಐತಿಹಾಸಿಕ ಪುರಾವೆಗಳಿವೆ. ಕಲ್ಯಾಣ ಕಳಚೂರ್ಯರ ವಂಶಾಡಳಿತವು ಬಿಜ್ಜಳನ ಮೊಮ್ಮಕ್ಕಳಾದ ಸಿಂಘಣನ ಪಟ್ಟವು 1183 ಕ್ಕೆ ಕೊನೆಗೊಳ್ಳುತ್ತದೆ, ಅಂದ ಮೇಲೆ ಬಸವಣ್ಣನವರು 1183 ರ ನಂತರ ಬದುಕಿದ್ದು ಹೇಗೆ ಸಾಧ್ಯ?
ಬಸವಣ್ಣನವರು ಬದುಕಿದ್ದು ಕೇವಲ ಮೂವತ್ತಾರು ವರುಷಗಳು
1167 ರಲ್ಲಿ ಬಿಜ್ಜಳನ ಕೊಲೆಯ ಐತಿಹಾಸಿಕ ದಾಖಲೆಗಳು ಸಿಗುತ್ತವೆ. ಬಸವಣ್ಣನವರ ಸಮಕಾಲೀನ ಶರಣ ಅಗ್ಗವಣಿ ಹೊನ್ನಯ್ಯನ ಉಲ್ಲೇಖವು 1179 ರ ಕಲಿದೇವರಪುರ ಶಾಸನ ಮತ್ತು 1180 ರ ಮರಡಿಪುರ ಶಾಸನದಲ್ಲಿ ಕಾಣುತ್ತೇವೆ. ಅಂದರೆ ಬಸವಣ್ಣನವರು ಈ ಎರಡು ಶಾಸನಗಳ ಕಾಲದಲ್ಲಿ ಇರದಿರುವುದು ತೋರುತ್ತದೆ. ಇನ್ನು ಅರ್ಜುನವಾಡಿ ಶಾಸನದಲ್ಲಿ ಬಸವಣ್ಣನಿಗೆ ಒಬ್ಬ ಅಕ್ಕ ಮತ್ತು ಒಬ್ಬ ಅಣ್ಣನಿದ್ದ ಬಗ್ಗೆ ಪುರಾವೆ ಇದೆ. ಅಕ್ಕನಾಗಮ್ಮನಿಗೂ ಹಾಗು ಬಸವಣ್ಣನವರಿಗೂ ಕನಿಷ್ಠ ಹನ್ನೆರಡು ವರುಷಗಳ ಅಂತರವಿರಬಹುದು. ಅದೇ ಕಾರಣಕ್ಕೆ ಚೆನ್ನಬಸವಣ್ಣನವರ ಜನ್ಮ ವರ್ಷವನ್ನು 1141 ಎಂದು ದಾಖಲಿಸುತ್ತಾರೆ. ಸಂಶೋಧನೆ ಎಂಬುದು ಅಲ್ಪ ವಿರಾಮ ಎಂದು ಡಾ. ಎಂ ಎಂ ಕಲಬುರ್ಗಿ ಅವರ ಮಾತನ್ನು ಇಲ್ಲಿ ನೆನಪಿಸಿಕೊಂಡು ಬಸವಣ್ಣನವರ ಜೀವತ ಕಾಲವನ್ನು ನಿರ್ಧರಿಸುವುದು ಅತ್ಯಗತ್ಯವಾಗಿದೆ.
ಒಂದು ಕಾಲಜ್ಞಾನದ ವಚನದಲ್ಲಿ ಬಸವಣ್ಣನವರು

“ಭಕ್ತಿಗೆ ಬೀಡಾಗಿತ್ತು ಕಲ್ಯಾಣವು ಮೂವತ್ತಾರು ವರುಷ
ಶಿವ ಸದನಕ್ಕೆ ನಿಂತಿತ್ತು ಇಪ್ಪತ್ತೇಳು ವರುಷ
ಅನುಭವ ಮಂಟಪಕೆ ಹನ್ನೆರಡು ವರುಷ”

ಎಂಬ ಅಂಶಗಳನ್ನು ಕಾಣುತ್ತೇವೆ.
ಇಲ್ಲಿ ಕಲ್ಯಾಣವೆಂದರೆ ಬಿಜ್ಜಳನ ರಾಜ್ಯಧಾನಿ ಎಂದು ಪರಿಗಣಿಸದೆ ಕಲ್ಯಾಣವೆಂಬುದು ಪ್ರಣತಿ, ಕಲ್ಯಾಣವು ಪೃಥ್ವಿ ಭೂಮಿ ಧರೆ ಮರ್ತ್ಯಲೋಕವೆಂದು ತಿಳಿಯಬೇಕು. ತಾನು ಕಲ್ಯಾಣದಲ್ಲಿ ಅನುಭವಮಂಟಪಕ್ಕೆ ನಿಂತಿದ್ದು ಹನ್ನೆರಡು ವರುಷ, ಅಂದಾಗ ಎಂಟು ವರುಷದ ಬಾಲಕ ಬಸವಣ್ಣ ಕೂಡಲಸಂಗಮದಲ್ಲಿ ಹನ್ನೆರಡು ವರುಷ
ಅಧ್ಯಯನ ಮಾಡಿ ಮುಂದೆ ಸೋದರ ಮಾವ ಬಲದೇವನ ಸಹಾಯದೊಂದಿಗೆ ಬಿಜ್ಜಳನ ಆಸ್ಥಾನದಲ್ಲಿನ ಮಂಗಳವೇಡೆಗೆ ಕಾರಣಿಕ ಹುದ್ದೆಯನ್ನು ಪಡೆಯುತ್ತಾನೆ ಬಸವಣ್ಣ, ಮುಂದೆ ಎರಡು ವರುಷದೊಳಗೆ ಬಸವಣ್ಣನವರ ಅಗಾಧವಾದ ಜ್ಞಾನ ಚತುರತೆಯನ್ನು ಮನಗಂಡ ಬಿಜ್ಜಳನು ಬಸವಣ್ಣನವರಿಗೆ ಕಲ್ಯಾಣದಲ್ಲಿ ಅರ್ಥ ಸಚಿವನನ್ನಾಗಿ ಮಾಡುತ್ತಾರೆ. ಬಸವಣ್ಣನವರು ತಮ್ಮ ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಅನುಭವ ಮಂಟಪ ಸ್ಥಾಪಿಸಿದರು. ತಮ್ಮ ಮೂವತ್ತಾರು ವರ್ಷದ ವಯಸ್ಸಿನಲ್ಲಿ ಕಲ್ಯಾಣ ಕ್ರಾಂತಿಗೆ ಕಾರಣವಾಯಿತು.
ಬಸವಣ್ಣನವರು ಮೂವತ್ತಾರು ವರುಷ ಬದುಕಿದರು ಎನ್ನುವದಕ್ಕೆ ಹಲವು ತರ್ಕ ಸಂಭಾವ್ಯತೆಗಳನ್ನು ಚರ್ಚಿಸೋಣ.


ಹಲವು ತರ್ಕ ಸಂಭಾವ್ಯತೆಗಳು
ಸೋದರಮಾವ ಬಸವಣ್ಣನವರಿಗಿಂತ ಚೆನ್ನಬಸವಣ್ಣ ಹತ್ತರಿಂದ ಹನ್ನೆರಡು ವರುಷ ಚಿಕ್ಕವರು. ಅಂದರೆ ಬಸವಣ್ಣ 1131 ರಲ್ಲಿ ಜನಿಸಿದರು, ಚೆನ್ನಬಸವಣ್ಣನವರು 1144 ರಲ್ಲಿ ಜನಿಸಿದ್ದಾರೆ, ಕಾರಣ ಕಲ್ಯಾಣದ ರಕ್ತಿಸಿಕ್ತ ಕ್ರಾಂತಿಯ ಸಮಯದಲ್ಲಿ ಚೆನ್ನಬಸವಣ್ಣನರು 23 ವರುಷದವರಾಗಿದ್ದರು ಎಂದು ತಿಳಿದು ಬರುತ್ತದೆ. ಬಸವಣ್ಣನವರ ಅಕ್ಕ ಬಸವಣ್ಣನವರಿಗಿಂತ ಹನ್ನೆರಡು ವರುಷ ದೊಡ್ಡವಳಾಗಿದ್ದಳು. ಒಂದು ವೇಳೆ ಬಸವಣ್ಣನವರು ಕಲ್ಯಾಣ ಕ್ರಾಂತಿಯ ಸಮಯದಲ್ಲಿ ಮತ್ತು ಐಕ್ಯವಾಗುವ ಸಮಯದಲ್ಲಿ 63 ವರುಷದವರಾಗಿದ್ದರೆ ಅವರಕ್ಕ ನಾಗಮ್ಮ 75 ವರುಷದವರಾಗಿರುತ್ತಿದ್ದರು. ತಮ್ಮ ಇಳಿಯ ವಯಸ್ಸಿನಲ್ಲಿ ಅಕ್ಕ ನಾಗಮ್ಮ ಸೋವಿದೇವನ ಸೈನಿಕರೊಂದಿಗೆ ಕಾದಾಡಿ ವಚನಗಳ ರಕ್ಷಣೆಗೆ ಸುಮಾರು ಸಾವಿರು ಮೈಲಿ ನಡೆಯಲು ಹೇಗೆ ಸಾಧ್ಯ? ತಮ್ಮ ಐವತ್ತೆರಡನೇಯ ವಯಸ್ಸಿನಲ್ಲಿ ಚೆನ್ನ ಬಸವಣ್ಣನವರಿಗೆ ಜನ್ಮ ನೀಡಲು ಹೇಗೆ ಸಾಧ್ಯ? ಹಾಗು ಚೆನ್ನ ಬಸವಣ್ಣ ಮತ್ತು ಬಸವಣ್ಣವರ ವಯಸ್ಸಿನ ಅಂತರ ನಲವತ್ತಾಗುತ್ತದೆ. ಇದು ಖಂಡಿತ ಒಪ್ಪದ ಮಾತು. ಹೀಗೆ ಬಸವಣ್ಣನವರ ಆಯುಷ್ಯದ ಬಗ್ಗೆ ಇನ್ನು ನಿಷ್ಕರ್ಷವಾಗದೆ ಪ್ರತಿಯೊಬ್ಬ ಲೇಖಕ ಸಂಶೋಧಕರು ತಮಗೆ ತಿಳಿದಂತೆ ದಾಖಲಿಸುವುದು ಹಲವು ಗೊಂದಲಕ್ಕೆ ಕಾರಣವಾಗುತ್ತದೆ.
ಹಿರಿಯ ಸಂಶೋಧಕರ ಕಾರ್ಯಾಗಾರವಾಗಲಿ
ಈ ದಿಶೆಯಲ್ಲಿ ಒಂದು ಕಾರ್ಯಾಗಾರವನ್ನಿಟ್ಟು ನಾಡಿನ ಹಿರಿಯ ಸಂಶೋಧಕರನ್ನು ಕರೆದು ಶರಣರ ಕಾಲದ ಬಗ್ಗೆ ಸರ್ವ ಸಾಮಾನ್ಯ ಅಭಿಮತಕ್ಕೆ ಬರುವ ಹಾಗೆ ಚರ್ಚಿಸಿ, ಶರಣರ ಕಾಲ ಚರಿತ್ರೆಯ ಬಗೆಗಿನ ಹಲವು ಗೊಂದಲಕ್ಕೆ ಕೊನೆ ಹೇಳಬೇಕು. ಅಕ್ಕ ನಾಗಮ್ಮ ಬಸವಣ್ಣನವರಿಗಿಂತ ದೊಡ್ಡವಳು ಎನ್ನುವುದಕ್ಕೆ ಹಲವು ಆಧಾರಗಳಿವೆ.
ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ
ಬಸವಣ್ಣನವರ ಉಪನಯನ ಬಾಲ್ಯ ಮತ್ತೆ ಕೂಡಲ ಸಂಗಮಕ್ಕೆ ಹೋಗುವ ಸಂದರ್ಭದಲ್ಲಿ ತನಗಿಂತ ಹಿರಿಯ ಅಕ್ಕ ನಾಗಮ್ಮನಿಗೆ ಉಪನಯನ ಮಾಡಲು ಬಸವಣ್ಣನವರು ಹಠ ತೊಟ್ಟರು. ಅದಕ್ಕೆ ವೈದಿಕ ವ್ಯವಸ್ಥೆ ಅವಕಾಶ ನೀಡುವುದಿಲ್ಲ, ಇದೆ ಕಾರಣಕ್ಕಾಗಿ ಬಸವಣ್ಣ ಬಾಗೇವಾಡಿಯನ್ನು ಬಿಟ್ಟನು. ಬಸವಣ್ಣನವರ ನೆರಳಾಗಿ ಅಕ್ಕ ನಾಗಮ್ಮ ಮತ್ತು ಮಾವನವರಾದ ಶಿವಸ್ವಾಮಿ ( ಶಿವದೇವ ) ಬಸವಣ್ಣನವರ ಆಶ್ರಯದ ಜೊತೆಗೆ ಮುಂದಿನ ಭವಿಷ್ಯ ರೂಪಿಸುವಲ್ಲಿ ಸಹಾಯಕರಾಗುತ್ತಾರೆ.


ಆದರೆ ಇಂದು ವಚನ ಸಾಹಿತ್ಯದಲ್ಲಿ ಹಿರಿಯ ಸಂಶೋಧಕ ಎಂ ಚಿದಾನಂದ ಮೂರ್ತಿ, ಡಾ ಎಂ ಎಂ ಕಲಬುರ್ಗಿ, ಡಾ ವೀರಣ್ಣ ರಾಜೂರ ಮುಂತಾದ ಸಂಶೋಧಕರು ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ದಾಖಲಿಸಿದ್ದಾರೆ.
ಬಸವಣ್ಣನವರಿಗೆ ಒಬ್ಬ ಅಕ್ಕ ಅಕ್ಕ ನಾಗಮ್ಮ ಮತ್ತು ಒಬ್ಬ ಅಣ್ಣ ದೇವರಾಜ ಇದ್ದನು ಎಂದು ಹಲವು ಜಾನಪದ ನುಡಿಗಳು ಮತ್ತು ಶಾಸನದಿಂದ ತಿಳಿದುಬರುತ್ತದೆ.
ಇದಕ್ಕೆಲ್ಲಾ ಮೂಲ ಕಾರಣ ಹರಿಹರನು ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಅನುಜೆ ಎಂದು ಹೇಳಿದ್ದಾನೆ. ಬಸವಣ್ಣನವರ ನಂತರದ ನೂರು ವರುಷದ ಆಸುಪಾಸು ಹರಿಹರ ಹುಟ್ಟಿದ್ದಾನೆ. ಹೀಗಾಗಿ ಡಾ.ಎಂ ಚಿದಾನಂದ ಮೂರ್ತಿ, ಡಾ ಎಂ ಎಂ ಕಲಬುರ್ಗಿ, ಡಾ ವೀರಣ್ಣ ರಾಜೂರ ಮುಂತಾದ ಸಂಶೋಧಕರು ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ಕರೆಯುತ್ತಾರೆ.
ಇಂತಹ ಅಭಿಪ್ರಾಯಗಳಿಂದ ಒಬ್ಬ ವಚನ ಸಾಹಿತ್ಯ ಓದುಗನಿಗೆ ಸಂಶೋಧಕರ ಅಭಿಮತಗಳಿಂದ ಗೊಂದಲ ಉಂಟಾಗುತ್ತದೆ.
ನಾನು ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ, ತಂಗಿಯಲ್ಲ ಎಂದು ಹೇಳುತ್ತಾ ಜನಪದಿಗರ ಮೌಖಿಕ ಪದ್ಯಗಳನ್ನು ಹೇಳಿಕೆಗಳನ್ನು ಭಜನೆ ಪದ ಮುಂತಾದ ಆಕರಗಳಿಂದ ಮತ್ತು ಶತಮಾನಗಳಿಂದ ಇಂತಹ ಪುರಾಣ ಕಥೆಗಳಿಂದ ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ಎಂದು ಸಿದ್ದವಾದರೂ ಸಹಿತ ಇವತ್ತಿನ 5 ನೆಯ ವಚನ ಸಂಪುಟದ ಬಸವಣ್ಣನವರ ವಚನಗಳು ಆವೃತ್ತಿಯಲ್ಲೂ ಕೂಡ ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಎಂದು ದಾಖಲಿಸಿದ್ದಾರೆ.
ಜನಪದಿಗರ ದೃಷ್ಟಿಯಲ್ಲಿ ಅಕ್ಕ ನಾಗಮ್ಮ
ವೇದ ಸುಳ್ಳಾಗಬಹುದು ಜಾನಪದ ಗಾದೆ ಸುಳ್ಳಾಗಲು ಸಾಧ್ಯವಿಲ್ಲ ಎನ್ನುವಂತೆ, ಜನಪದಿಗರು ಶರಣರ ಜೀವನ ಚರಿತ್ರೆಯನ್ನು ತಮ್ಮ ತ್ರಿಪದಿಗಳಲ್ಲಿ ದಾಖಲಿಸಿದ್ದಾರೆ.

“ಹಡೆದವ್ವ ಮಾದವ್ವ ಮಾದರಸು
ಪಡೆದವ್ವ ಅಕ್ಕ ನಾಗಾಯಿ / ಬಸವನಿಗೆ
ಬಿಡದೆ ಸಲುಹಿದನು ವರಸಂಗ”

ಇಲ್ಲಿ ಜಾನಪದ ಕವಿಯು ಬಸವಣ್ಣನ ಅಪ್ಪ ಅವ್ವ ಮತ್ತು ಹಡೆದವ್ವನಂತೆ ಕಾಳಜಿ ಪ್ರೀತಿ ವಾತ್ಸಲ್ಯವನ್ನು ತೋರುವ ಅಕ್ಕ ನಾಗಾಯಿ ಎಂಬ ಅಕ್ಕನಿದ್ದಳು ಎನ್ನುತ್ತಾರೆ.

    "ಬಸವ ನಿನಗೊಬ್ಬಣ್ಣ ಬಸವಗೊಬ್ಬಳೇ ಅಕ್ಕ
    ಬಸವ ನಿನ್ನೆಸರು ಅಮರಾತು/ ಜಗಕೆಲ್ಲ
  ಬಸವ ಕಲ್ಯಾಣ ಹೆಸರಾತು"

ಇಲ್ಲಿಯೂ ಕೂಡ ಬಸವಣ್ಣನಿಗೆ ಒಬ್ಬ ಅಣ್ಣ ಮತ್ತು ಅಕ್ಕ ನಾಗಮ್ಮಳಿದ್ದಳು ಎನ್ನುವುದು ಸ್ಪಷ್ಟವಾಗುತ್ತದೆ.
ಅಕ್ಕ ನಾಗಮ್ಮ ಬಸವಣ್ಣನವರ ಹಿರಿಯಕ್ಕ ತಂಗಿಯಲ್ಲ ಎನ್ನುವುದಕ್ಕೆ ಅಕ್ಕ ನಾಗಮ್ಮನವರ ಒಂದು ವಚನವೇ ಸಾಕ್ಷಿಯಿದೆ.

“ಬಸವನೆ ಮಖಸೆಜ್ಜೆ, ಬಸವನೆ ಅಮಳೋಕ್ಯ.
ಬಸವನ ನಾನೆತ್ತಿ ಮುದ್ದಾಡಿಸುವೆನು.
ಬಸವಾ, ಸಂಗನಬಸವಿದೇವಾ ಜಯತು.
ಬಸವಾ, ಸಂಗನಬಸವಲಿಂಗಾ ಜಯತು.
ಬಸವಗೂ ಎನಗೂ ಭಾವಭೇದವಿಲ್ಲದ
ಬಸವಗೂ ಎನಗೂ ರಾಸಿಕೂಟವುಂಟು.
ಬಸವಣ್ಣಪ್ರಿಯ ಚೆನ್ನಸಂಗಯ್ಯನಲ್ಲಿ
ಬಸವನ ಬೆಸರಾದ ಬಾಣತಿ ನಾನಯ್ಯಾ
ಬಸವಾ,ಬಸವಾ,ಬಸವಾ”

ಬಸವಣ್ಣನವರ ಬಗ್ಗೆ ಬರೆಯುತ್ತಾ ಅಕ್ಕ ನಾಗಮ್ಮ ತನ್ನ ತಾಯಿ ಮಾದಲಾಂಬಿಕೆ ಗರ್ಭಿಣಿಯಾದಾಗ ಮತ್ತು ಬಸವಣ್ಣನವರ ಹುಟ್ಟಿದ ನಂತರ ಅವನನ್ನು ಎತ್ತಿ ಮುದ್ದಾಡಿರುವೇನು. ತನ್ನ ತಾಯಿಯ ಬಾಣಂತಿಯ ಕಾರ್ಯವನ್ನು ಅಕ್ಕ ನಾಗಮ್ಮ ಮಾಡಿದ್ದೇನೆ ಎಂದು ಹೇಳಿಕೊಂಡಾಗ, ಅಕ್ಕ ನಾಗಮ್ಮ ಬಸವಣ್ಣನವರ ತಂಗಿ ಹೇಗಾಗುತ್ತಾಳೆ? ಇಂತಹ ತಪ್ಪು ಕಲ್ಪನೆಗಳನ್ನು ಹುಟ್ಟಿಸುವ ವಿಚಾರದಿಂದ ಸಂಶೋಧಕರು ತಜ್ಞರು ತಮ್ಮ ಅನಿಸಿಕೆ ಅಭಿಮತಗಳನ್ನು ತಿದ್ದಿಕೊಳ್ಳಬೇಕು ಎಂದು ನನ್ನ ಸ್ಪಷ್ಟವಾದ ಅಭಿಮತವಾಗಿದೆ.
ಬಸವಣ್ಣನವರು ಹುಟ್ಟಿದ್ದು ಯಾವ ಸಂಶೋಧಕರು ಸ್ಪಷ್ಟವಾಗಿ ಹೇಳಲಾಗಿಲ್ಲ,
ಡಾ. ಪಿ ಬಿ ದೇಸಾಯಿಯವರು ತಮ್ಮ ಬಸವಣ್ಣನವರು ಮತ್ತು ಸಮಕಾಲೀನವರು ಎನ್ನುವ ಪುಸ್ತಕದಲ್ಲಿ ಬಸವಣ್ಣನವರ ಕಾಲ 1167 ರ ನಂತರ ಕಂಡು ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾ ಬಸವಣ್ಣನವರು 1105 ರಲ್ಲಿ ಜನಿಸಿರಬಹುದು ಎಂಬ ಶಂಕೆಯನ್ನು ವ್ಯಕ್ತ ಪಡಿಸಿದ್ದಾರೆಯೇ ಹೊರತು ನಿರ್ದಿಷ್ಟವಾಗಿ 1105 ಎಂದು ಸಾಬೀತು ಪಡಿಸಿಲ್ಲ.
ಬಸವಣ್ಣನವರು 1105 ರಲ್ಲಿ ಹುಟ್ಟಿದ್ದಾರೆ ಎನ್ನುವವರಲ್ಲಿ ನನ್ನ ಕೆಲವು ಪ್ರಶ್ನೆಗಳು
ಬಸವಣ್ಣನವರು 1155 ರ ವರೆಗೆ ಎಲ್ಲಿದ್ದರು ಎಂದು ಯಾರು ದಾಖಲೆ ನೀಡುವುದಿಲ್ಲ,
ಒಂದುವೇಳೆ ಮಂಗಳವೇಡೆಯಲ್ಲಿ ಬಸವಣ್ಣನವರು ನಾಲ್ಕು ವರ್ಷ ಇದ್ದಾರೆ ಅಂತ ಅಂದುಕೊಂಡರೂ ಸಹಿತ ಬಾಗೇವಾಡಿ ಬಿಟ್ಟ ಮೇಲೆ ಕೂಡಲಸಂಗಮದಲ್ಲಿ 12 ವರುಷ, ನಾಲ್ಕು ವರ್ಷ ಮಂಗಳವೇಡೆ ಅಂದರೆ ಬಸವಣ್ಣನವರಿಗೆ 24 ವರ್ಷ ವಯಸ್ಸು ಅಂದ ಹಾಗೆ ಆಯ್ತು, ಡಾ ಪಿ ಬಿ ದೇಸಾಯಿಯವರು ತಮ್ಮ ಕೃತಿಯಲ್ಲಿ ಬಸವಣ್ಣನವರು ಕಲ್ಯಾಣಕ್ಕೆ ಬಂದದ್ದು 1155 ಮತ್ತು ಕಲ್ಯಾಣವನ್ನು ಬಿಟ್ಟಿದ್ದು 1167 ಎಂದು ಸ್ಪಷ್ಟವಾಗಿ ಹೇಳುತ್ತಾರೆ. 1130 ರಿಂದ 1155 ರವರೆಗೆ ಬಸವಣ್ಣನವರು ಎಲ್ಲಿದ್ದರು ಎಂದು ಗೊತ್ತಾಗುವುದಿಲ್ಲ.
ಇನ್ನೊಂದು ಸಂಗತಿ ಎಂದರೆ, ಅಕ್ಕನಾಗಮ್ಮ ಬಸವಣ್ಣನವರಿಗಿಂತ ಹನ್ನೆರಡು ವರ್ಷ ದೊಡ್ಡವರು ಎಂದು ಅಂದಾಜು ಮಾಡಲಾಗಿದೆ. ಬಸವಣ್ಣನವರು 63 ವರ್ಷ ಬದುಕಿದ್ದರೆ ಅವರಿಗಿಂತ ದೊಡ್ಡವಳಾದ ಅಕ್ಕನಾಗಮ್ಮ 75 ವರ್ಷದವರಾಗುತ್ತಾರೆ ಎಂದರ್ಥ. ಚೆನ್ನಬಸವಣ್ಣನವರು ತಮ್ಮ 24 ವಯಸ್ಸಿನಲ್ಲಿ ಉಳವಿಯಲ್ಲಿ ಐಕ್ಯರಾದರೆಂದು ತಿಳಿದು ಬರುತ್ತದೆ. ಹಾಗಿದ್ದರೆ ಅಕ್ಕನಾಗಮ್ಮ ತಮ್ಮ 51 ನೆಯ ವರ್ಷದಲ್ಲಿ ಚೆನ್ನಬಸವಣ್ಣನವರಿಗೆ ಜನ್ಮ ನೀಡಿದರೆ ಎಂದು ಪ್ರಶ್ನೆ ಮಾಡಿಕೊಳ್ಳ ಬೇಕಾಗುತ್ತದೆ. ಇದು ಸಾಧ್ಯವಲ್ಲದ ಮಾತು. ಬಸವಣ್ಣ ಮತ್ತು ಚೆನ್ನಬಸವಣ್ಣನವರ ವಯಸ್ಸಿನ ಅಂತರವು 10 ರಿಂದ 12 ವರುಷಗಳು ಮಾತ್ರ. ಚೆನ್ನಬಸವಣ್ಣನವರು 24 ವರ್ಷಗಳು ಮಾತ್ರ ಬದುಕಿದ್ದರೆ ಬಸವಣ್ಣನವರು 36 ವರ್ಷಗಳ ವರೆಗೆ ಮಾತ್ರ ಬದುಕಿರುತ್ತಾರೆ. ಇದಕ್ಕೆ ಇನ್ನೊಂದು ಪುರಾವೆ ಎಂದರೆ ಬಸವಣ್ಣನವರು ಕೂಡಲಸಂಗಮದಲ್ಲಿ ಐಕ್ಯವಾದಾಗ ಅವರ ಮಗ ಬಾಲ ಸಂಗಯ್ಯ 8 ವರುಷದವನಿದ್ದನೆಂದು ತಿಳಿದು ಬರುತ್ತದೆ.
ಬಹುತೇಕ ಸಂಶೋಧಕರು ಬಸವಣ್ಣನವರು 1131 ಮತ್ತು 1132 ರಲ್ಲಿ ಹುಟ್ಟಿರಬಹುದು ಎಂದು ಅಭಿಮತ ವ್ಯಕ್ತ ಪಡಿಸುತ್ತಾರೆ, ಈ ಮೇಲಿನ ಎಲ್ಲಾ ಕಾರಣಗಳನ್ನು ಪರಿಗಣಿಸಿ ಬಸವಣ್ಣನವರು ಬದುಕಿದ್ದು ಕೇವಲ ಮೂವತ್ತಾರು ವರ್ಷಗಳು ಎಂದು ತಿಳಿಯಬಹುದು. ನಾನು ವ್ಯಕ್ತ ಪಡಿಸಿದ ವಿಚಾರವೇ ಅಂತಿಮವಲ್ಲ. ಬೇರೆ ಸಂಶೋಧನೆ ಆಕರ ಸಮೇತ ನೀಡಿದಲ್ಲಿ ಸ್ವಾಗತಾರ್ಹ

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 15,2026

ನಾವೇ ಬದಲಾವಣೆಯ ಭಾಗವಾಗಬೇಕು

’ವೀರ ರತ್ನ’ ಪ್ರಶಸ್ತಿ ಪಡೆದ ಚೇತನ ಶಿವಶಿಂಪಿ

ಹಕ್ಕುಗಳ ಅರಿವು ಮೂಡಿದಾಗಲೇ ಶೋಷಣೆಗೆ ಕಡಿವಾಣ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಬಸವಣ್ಣನವರು ಬದುಕಿದ್ದು ಮೂವತ್ತಾರು ವರ್ಷಗಳು
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 15,2026
    In ದಿನಪತ್ರಿಕೆ
  • ನಾವೇ ಬದಲಾವಣೆಯ ಭಾಗವಾಗಬೇಕು
    In (ರಾಜ್ಯ ) ಜಿಲ್ಲೆ
  • ’ವೀರ ರತ್ನ’ ಪ್ರಶಸ್ತಿ ಪಡೆದ ಚೇತನ ಶಿವಶಿಂಪಿ
    In (ರಾಜ್ಯ ) ಜಿಲ್ಲೆ
  • ಹಕ್ಕುಗಳ ಅರಿವು ಮೂಡಿದಾಗಲೇ ಶೋಷಣೆಗೆ ಕಡಿವಾಣ
    In (ರಾಜ್ಯ ) ಜಿಲ್ಲೆ
  • ಗ್ರಂಥಾಲಯಗಳು ನಿಜ ಮನುಷ್ಯರನು ಸೃಷ್ಟಿಸುತ್ತವೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಿ :ಮಠಪತಿ
    In (ರಾಜ್ಯ ) ಜಿಲ್ಲೆ
  • ಅಹಿರಸಂಗ: ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಹೈದ್ರಾಬಾದ್ ವಿಮೋಚನಾ ದಿನಾಚರಣೆಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
  • ಗುರಾನಿ ಎಸ್ಟೇಟ್ಸ್ ತಂಡದಿಂದ ಗಣೇಶೋತ್ಸವ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.