ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೈಮಗ್ಗ ಮತ್ತು ಜವಳಿ ಇಲಾಖೆಯು ೨೦೨೬-೨೭ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ಅರ್ಹ ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನೇಕಾರರಿಗೆ ವಾರ್ಷಿಕ ೫,೦೦೦ ರೂ. ಆರ್ಥಿಕ ನೆರವು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಆಸಕ್ತ ಹಾಗೂ ಅರ್ಹ ನೇಕಾರರು ಸೆ. ೧೬ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹತಾ ಮಾನದಂಡಗಳು ಪ್ರಸ್ತುತ ಸಕ್ರಿಯವಾಗಿ ನೇಕಾರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಥವಾ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ನೋಂದಾಯಿಸಿಕೊಂಡಿರಬೇಕು.
೨೦೨೫-೨೬ನೇ ಸಾಲಿನಲ್ಲಿ ಸೌಲಭ್ಯ ಪಡೆದವರಲ್ಲಿ ಮೃತರಾದವರು, ವೃತ್ತಿ ಬಿಟ್ಟವರು ಮತ್ತು ಬೇರೆಡೆಗೆ ಸ್ಥಳಾಂತರಗೊಂಡವರನ್ನು ಈ ಸಾಲಿನಲ್ಲಿ ಹೊರಗಿಡಲಾಗುವುದು.
ಕಳೆದ ಸಾಲಿನಲ್ಲಿ ನೋಂದಣಿಯಾಗದ ಅರ್ಹ ನೇಕಾರರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅಗತ್ಯವಿರುವ ದಾಖಲೆಗಳು ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್ ಬುಕ್ ನೇಕಾರ ಸಮ್ಮಾನ್ ಐ.ಡಿ / ಪೆಹಚಾನ್ ಕಾರ್ಡ್ / ನೇಕಾರರ ಗುರುತಿನ ಚೀಟಿ ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವ ಇತ್ತೀಚಿನ ಭಾವಚಿತ್ರ ಪಿಎಂಜೆಜೆಬಿವೈ/ಪಿಎಂಎಸ್ ಬಿವೈ ನೋಂದಣಿ/ನವೀಕರಣದ ಬ್ಯಾಂಕ್ ಸ್ಟೇಟ್‌ಮೆಂಟ್ ಪ್ರತಿ ಅರ್ಜಿ ಸಲ್ಲಿಸುವ ವಿವರ ಅರ್ಹ ನೇಕಾರರು ತಮ್ಮ ವಿವರಗಳನ್ನು ಸ್ಥಳೀಯ ಕೈಮಗ್ಗ ಅಭಿವೃದ್ಧಿ ನಿಗಮ, ನೇಕಾರ ಸಹಕಾರ ಸಂಘಗಳ ಮೂಲಕ ಅಥವಾ ನೇರವಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ ಕಂಪೌಂಡ್, ಶಿಕಾರಖಾನೆ, ವಿಜಯಪುರ. ಇಲ್ಲಿಗೆ ಸಲ್ಲಿಸಬಹುದು. ಸೆ. ೧೬ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊ:೯೫೩೮೧೧೪೪೩೪/೯೬೧೧೨೯೭೬೭೪ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
