Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಶಾಸಕ ನಾಡಗೌಡರ ಮನವಿಗೆ ಸಿಎಂ ಸ್ಪಂದನೆ

ಶರಣರು ಕಂಡ ಸಹಜ ಧರ್ಮ

ಶಿಕ್ಷಕರು ದೇಶದ ನಿಜ ಆಸ್ತಿ :ಶಿವಬಸವ ಸ್ವಾಮೀಜಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಬೆಂಗಳೂರಿಗರು ನೌಕರಿಗಾಗಿ ವಿಜಯಪುರಕ್ಕೆ ಬರುವ ದಿನ ದೂರವಿಲ್ಲ
(ರಾಜ್ಯ ) ಜಿಲ್ಲೆ

ಬೆಂಗಳೂರಿಗರು ನೌಕರಿಗಾಗಿ ವಿಜಯಪುರಕ್ಕೆ ಬರುವ ದಿನ ದೂರವಿಲ್ಲ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಅರಕೇರಿಯಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಎಂ.ಪಾಟೀಲ ಅಭಿಮತ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿರುವ ಕೈಗಾರಿಕಾ ಕ್ರಾಂತಿಯ ಪರಿಣಾಮ ವಿಜಯಪುರವನ್ನು ಹುಡುಕಿಕೊಂಡು ನೌಕರಿಗಾಗಿ ಬೆಂಗಳೂರಿಗರು ಮುಂದಿನ ದಿನಗಳಲ್ಲಿ ಬರುತ್ತಾರೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಕುಲಪತಿ ಬಸನಗೌಡ ಎಂ.ಪಾಟೀಲ ಹೇಳಿದರು.
ಬಬಲೇಶ್ವರ-ತಿಕೋಟಾ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಇಂದಿನಿಂದ ಒಂದು ತಿಂಗಳ ಕಾಲ ಆಯೋಜಿಸಿರುವ ‘ಎಂಬಿಪಿ ಉತ್ಸವ’ಕ್ಕೆ ಇಂದು ಅರಕೇರಿ ಗ್ರಾಮದಲ್ಲಿ ಹೆಣ್ಣುಮಕ್ಕಳ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬರಗಾಲದ ಸಂದರ್ಭದಲ್ಲಿ ಈ ಭಾಗದ ಜನರು ಉದ್ಯೋಗ ಅರಸಿ ಹೆಚ್ಚಿನ ಸಂಖ್ಯೆಯಲ್ಲಿ ಗುಳೆ ಹೋಗುವುದು ಸಾಮಾನ್ಯವಾಗಿತ್ತು. ಅಲ್ಲದೆ, ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಬೇರೆ ಜಿಲ್ಲೆಗಳ ಮೇಲೆ ಅವಲಂಬಿತರಾಗಬೇಕಾದ ಪರಿಸ್ಥಿತಿ ಇತ್ತು. ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ನಮ್ಮ ತಂದೆ ಎಂ.ಬಿ.ಪಾಟೀಲರು ನೀರಾವರಿ ಸಚಿವರಾದ ನಂತರ ಮೊದಲಿಗೆ ರೈತರಿಗೆ ನೀರಾವರಿ, ಕೈಗಾರಿಕಾ ಸಚಿವರಾದ ನಂತರ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಹೆಚ್ಚಿನ ಕಂಪನಿಗಳನ್ನು ವಿಜಯಪುರಕ್ಕೆ ತರುವ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿಗರು ವಿಜಯಪುರದತ್ತ ನೌಕರಿ ಅರಿಸಿಕೊಂಡು ಬರಲಿದ್ದಾರೆ ಎಂದರು.
ರಂಗೋಲಿ ಸ್ಪರ್ಧೆಯಲ್ಲಿ 50 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಅಶೋಕ ದಳವಾಯಿ, ಪಿರಪಟೇಲ ಪಾಟೀಲ, ಲಿಂಗು ಬೆಳ್ಳುಬ್ಬಿ, ಶಿವು ಇಂಚಗೇರಿ, ಸುರೇಶ ಭಂಡಾರಿ, ಪಾಂಡು ಲೋಣಾರಿ, ಗೋವಿಂದ ರಾಠೋಡ, ರಂಗಾ ಬರಕಡೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಭಜನಾಪದ ಸ್ಪರ್ಧೆಗಳಿಗೆ ಚಾಲನೆ

ನಂತರ ಕನಮಡಿ ಗ್ರಾಮದಲ್ಲಿ ಸಂಜೆ ಬಬಲೇಶ್ವರ ತಾಲೂಕಿನ ನಿಡೋಣಿಯಲ್ಲಿ ಜಾನಪದ ಹಾಗೂ ದೇವರಗೆಣ್ಣೂರಿನಲ್ಲಿ ಭಜನಾಪದ ಸ್ಪರ್ಧೆಗಳಿಗೆ ಚಾಲನೆ ನೀಡಿದರು. ಗ್ರಾಮ ಪಂಚಾಯತ ಹಂತದಲ್ಲಿ ವಿಜೇತ ತಂಡವು ಜಿಲ್ಲಾಪಂಚಾಯತ ಮತ್ತು ತಾಲೂಕಾ ಹಂತ ಸ್ಪರ್ಧೆಗೆ ಆಯ್ಕೆಯಾಗಲಿದ್ದಾರೆ.
ದೇಸಿ ಆಟ ಕಬಡ್ಡಿ ಮತ್ತು ಕ್ರಿಕೆಟ್ ಆಟವನ್ನು ಉದ್ಘಾಟಿಸಲಾಯಿತು. ಕನಮಡಿ ಗ್ರಾಮದ ಮುಖಂಡರಾದ ಪ್ರಶಾಂತ ಪಾಟೀಲ, ಪ್ರಕಾಶ ಬಿರಾದಾರ, ಸಿದ್ದು ಗೌಡನವರ, ಗುರು ಮಾಳಿ, ಶಂಕರ ಹ್ಯಾಮಗೋಳ, ಸುರೇಶ ಬಾಬಾನಗರ, ವೀರೇಶ ಸಿಂಧೂರ, ಈಶ್ವರ ಯಳಜರಿ, ಚಂದು ಕೋಳಿ, ಚನ್ನಯ್ಯ ಮಠಪತಿ, ಬಾಲು ಬಸಗೊಂಡವರ, ಕುಮಾರ ಚಡಚಣ, ಕುಮಾರ ತಳವಾರ, ಸಂತೋಷ ಕೋಳಿ, ಸಚಿನ ಹೊಸಮನಿ, ಪವನ ಅಡಹಳ್ಳಿ ಉಪಸ್ಥಿತರಿದ್ದರು. ಸಂಜೆ ನಿಡೋಣಿಯಲ್ಲಿ ಭಜನಾ ಸ್ಪರ್ಧೆ ನಂತರ ದೇವರಗೆಣ್ಣೂರ ಗ್ರಾಮದಲ್ಲಿ ಜಾನಪದ ಹಾಡುಗಳ ಸ್ಪರ್ಧೆಯನ್ನು ಬಸನಗೌಡ ಪಾಟೀಲ ಉದ್ಘಾಟಿಸಿದರು.
ಎಂ.ಬಿ.ಪಾಟೀಲ ಅವರ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಕೃತಜ್ಞತಾ ಭಾವ ವ್ಯಕ್ತಪಡಿಸುವ ಉದ್ದೇಶದಿಂದ ಅಭಿಮಾನಿಗಳು, ಕಾರ್ಯಕರ್ತರು ಅಕ್ಟೋಬರ 7 ರಂದು ಅವರ ಜನ್ಮದಿನ ಪೂರ್ವ ಒಂದು ತಿಂಗಳವರೆಗೆ ದೇಶಿ ಆಟ ಕಬಡ್ಡಿ, ಕ್ರಿಕೆಟ್, ಭಜನೆ, ಜಾನಪದ ಹಾಡುಗಳು ಮತ್ತು ರಂಗೋಲಿ ಸ್ಪರ್ಧೆಗಳನ್ನು ವಿಭಿನ್ನವಾಗಿ ಆಯೋಜಿಸಿದ್ದಾರೆ.

BIJAPUR NEWS bjp congress patil public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಶಾಸಕ ನಾಡಗೌಡರ ಮನವಿಗೆ ಸಿಎಂ ಸ್ಪಂದನೆ

ಶರಣರು ಕಂಡ ಸಹಜ ಧರ್ಮ

ಶಿಕ್ಷಕರು ದೇಶದ ನಿಜ ಆಸ್ತಿ :ಶಿವಬಸವ ಸ್ವಾಮೀಜಿ

ತಳವಾರ ಸಮಾಜದ ಏಳಿಗೆ ಸಹಿಸದ ಸಚಿವ ಜಾರಕಿಹೊಳಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಶಾಸಕ ನಾಡಗೌಡರ ಮನವಿಗೆ ಸಿಎಂ ಸ್ಪಂದನೆ
    In (ರಾಜ್ಯ ) ಜಿಲ್ಲೆ
  • ಶರಣರು ಕಂಡ ಸಹಜ ಧರ್ಮ
    In ವಿಶೇಷ ಲೇಖನ
  • ಶಿಕ್ಷಕರು ದೇಶದ ನಿಜ ಆಸ್ತಿ :ಶಿವಬಸವ ಸ್ವಾಮೀಜಿ
    In (ರಾಜ್ಯ ) ಜಿಲ್ಲೆ
  • ತಳವಾರ ಸಮಾಜದ ಏಳಿಗೆ ಸಹಿಸದ ಸಚಿವ ಜಾರಕಿಹೊಳಿ
    In (ರಾಜ್ಯ ) ಜಿಲ್ಲೆ
  • ಪ್ರೊಮೊ ರನ್: ವೇಷಭೂಷಣ ಸ್ಪರ್ಧೆ ವಿಕೆಟ್ ವನಿತೆಯರು
    In (ರಾಜ್ಯ ) ಜಿಲ್ಲೆ
  • ವೃಕ್ಷೋಥಾನ್: ಮನೆ ತೋಟ ಸ್ಪರ್ಧೆ
    In (ರಾಜ್ಯ ) ಜಿಲ್ಲೆ
  • ಬೆಂಗಳೂರಿಗರು ನೌಕರಿಗಾಗಿ ವಿಜಯಪುರಕ್ಕೆ ಬರುವ ದಿನ ದೂರವಿಲ್ಲ
    In (ರಾಜ್ಯ ) ಜಿಲ್ಲೆ
  • ಅದ್ಭುತ ಯಶಸ್ಸು ಕಂಡ ಹೆಣ್ಣುಮಕ್ಕಳ ಪ್ರೋಮೋ ರನ್
    In (ರಾಜ್ಯ ) ಜಿಲ್ಲೆ
  • ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ಮುದ್ದೇಬಿಹಾಳ ಶಾಸಕರು
    In (ರಾಜ್ಯ ) ಜಿಲ್ಲೆ
  • ಗಣೇಶೋತ್ಸವ ಆಚರಣೆ ಭಾವೈಕ್ಯತೆಗೆ ಮಾದರಿಯಾಗಲಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.